ನಿಮಗಿದು ಗೊತ್ತೇ ? ಮೀನನ್ನು ಬೇಯಿಸೋ ಮೊದಲು ಉಪ್ಪು, ಅರಿಶಿನ ಹಾಕಿ ಇಡೋದ್ಯಾಕೆ ?

ಮಾಂಸ ಪ್ರಿಯರಿಗೆ ಮೀನು ಎಂದರೆ ಪಂಚಪ್ರಾಣ ಆಗಿರುವುದು ಸಹಜ. ಅದರಲ್ಲೂ ಅನ್ನದ ಜೊತೆ,ಮೀನು ಸಾರು, ಮೀನು ಪ್ರೈ ಅಂತೂ ಬೆಸ್ಟ್ ಕಾಂಬಿನೆಷನ್ ಆಗಿರುತ್ತೆ. ಆದರೆ ಮೀನನ್ನು ಬೇಯಿಸುವ ಮುನ್ನ
ಮೀನಿಗೆ ಉಪ್ಪು, ಅರಶಿನ ಬೆರೆಸಿ ಇಡೋದರ ಹಿಂದಿನ ಆರೋಗ್ಯಕಾರಿ ರಹಸ್ಯ ಏನಿರಬಹುದು ನಿಮಗೆ ಗೊತ್ತೇ!

ಭಾರತೀಯ ಸಾಂಪ್ರದಾಯಿಕ ಮಾಂಸಾಹಾರಿ ಅಡುಗೆ ಪದ್ಧತಿಯಲ್ಲಿ ಮೀನು ಇಲ್ಲವೇ ಮಾಂಸವನ್ನು ಬೇಯಿಸುವ ಮೊದಲು ಉಪ್ಪು, ಅರಶಿನ ಮೊದಲಾದ ಮಸಾಲೆಗಳನ್ನು ಮಿಶ್ರ ಮಾಡಿ ಮ್ಯಾರೀನೇಟ್ ಮಾಡಲಾಗುತ್ತದೆ. ಅದರ ಕಾರಣ ಕೆಲವರಿಗೆ ತಿಳಿದಿರಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ಕಾರಣ ತಿಳಿಸಲಾಗಿದೆ.

ಮೀನು ಹಾಗೂ ಮಾಂಸವನ್ನು ನೆನೆಸುವುದು ಏಕೆ ಎಂಬುದರ ಕಾರಣ ಇಲ್ಲಿದೆ.

  • ಉಪ್ಪು ಕೂಡ ಕೆಲವೊಂದು ಸಂರಕ್ಷಕ ಗುಣಗಳನ್ನು ಹೊಂದಿದ್ದು ಅರಶಿನ ಹಾಗೂ ಉಪ್ಪಿನ ಮಿಶ್ರಣ ಆಹಾರದ ರುಚಿಯನ್ನು ಇಮ್ಮಡಿಗೊಳಿಸುತ್ತದೆ ಹಾಗೂ ಬೇಯಿಸುವ ಸಮಯದಲ್ಲಿ ವಿಶಿಷ್ಟವಾದ ಸುವಾಸನೆಯನ್ನು ಒದಗಿಸುತ್ತದೆ.
  • ಹೌದು ಯಾವುದೇ ಮಾಂಸಾಹಾರಿ ಖಾದ್ಯವನ್ನು ಮಾಡುವ ಮೊದಲು, ಮಾಂಸವನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಬೇಯಿಸಲಾಗುತ್ತದೆ. ಮೀನಿನ ಖಾದ್ಯಗಳನ್ನು ತಯಾರಿಸುವ ಸಮಯದಲ್ಲಿ ಮೀನಿನ ದುರ್ನಾತವನ್ನು ತೆಗೆದುಹಾಕಲು ಉಪ್ಪು ಹಾಗೂ ಅರಶಿನ ಬಳಸಿಕೊಂಡು ಮೀನನ್ನು ತೊಳೆಯುವ ಕ್ರಮ ಕೂಡ ಇದೆ. ಇದರ ಜೊತೆಗೆ ಉಪ್ಪು ಹಾಗೂ ಅರಶಿನವನ್ನು ಪ್ರಧಾನವಾಗಿ ಬಳಸಿಕೊಂಡು ಇತರ ಮಸಾಲೆ ಪದಾರ್ಥಗಳೊಂದಿಗೆ ಮೀನು ಹಾಗೂ ಮಾಂಸವನ್ನು ನೆನೆಸಲಾಗುತ್ತದೆ. ಭಾರತದಲ್ಲಿ ಉಪ್ಪು ಹಾಗೂ ಅರಶಿನವನ್ನು ಪ್ರಧಾನವಾಗಿ ಬಳಸಿಕೊಂಡು ಮಾಂಸ ಹಾಗೂ ಮೀನನ್ನು ನೆನೆಸುವುದನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
  • ಭಾರತೀಯ ಪಾಕಪದ್ಧತಿಯು ಕೆಲವೊಂದು ಆರೋಗ್ಯಕಾರಿ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಅರಶಿನವನ್ನು ಭಾರತೀಯ ಪಾಕ ಪದ್ಧತಿಯಲ್ಲಿ ಔಷಧವಾಗಿ ಬಳಸಲಾಗುತ್ತದೆ ಹಾಗೂ ಅಡುಗೆಯ ಸ್ವಾದವನ್ನು ಹೆಚ್ಚಿಸುವ ಮಸಾಲೆಯಾಗಿ ಇದು ಸ್ಥಾನ ಪಡೆದುಕೊಂಡಿದೆ.
  • ಮೀನು ಹಾಗೂ ಮಾಂಸವನ್ನು ಅರಶಿನ ಬಳಸಿ ನೆನೆಸುವುದು ಇದು ಆಹಾರ ಪದಾರ್ಥವನ್ನು ತಾಜಾ ಆಗಿ ಇರಿಸುತ್ತದೆ ಹಾಗೂ ಉಪ್ಪು ಬಳಸುವುದು ಒಂದು ರೀತಿಯಲ್ಲಿ ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.
  • ಮೀನು ಪ್ರೋಟೀನ್‌ನ ಆಗರವಾಗಿದ್ದು ಇದು ಬೇಗನೇ ಕೆಡುತ್ತದೆ, ಇದರಿಂದ ಉಪ್ಪು ಬಳಸಿ ಅದನ್ನು ನೆನೆಸಿಡುವುದು ಮೀನನ್ನು ಹೆಚ್ಚುಕಾಲ ಹಾಳಾಗದಂತೆ ಕಾಪಾಡುತ್ತದೆ. ಹೀಗೆ ಉಪ್ಪು ಹಾಕಿದ ಮೀನುಗಳು ಉತ್ಕರ್ಷಣ ನಿರೋಧಕ ಎಂದೆನಿಸಿದ್ದು ನಿರ್ದಿಷ್ಟ ಮಸಾಲೆಗಳನ್ನು ಬಳಸಿ ಮೀನನ್ನು ನೆನೆಸುವುದು ಆ್ಯಂಟಿರ್ಮೈಕ್ರೊಬಿಯಲ್ ಅಂಶಗಳನ್ನು ಒಳಗೊಂಡಿವೆ.
  • ಅರಶಿನವು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿದ್ದು ನಂಜಿನ ಅಂಶಗಳನ್ನು ನಿವಾರಿಸುತ್ತದೆ ಎಂಬುದಾಗಿ ಆಯುರ್ವೇದದಲ್ಲಿ ತಿಳಿಸಲಾಗಿದೆ.
  • ಹಸಿಮೀನಿನಲ್ಲಿರುವ ಸೂಕ್ಷ್ಮಜೀವಿ ಹಾಗೂ ಇತರೆ ವಿಷಕಾರಿ ಅಂಶಗಳನ್ನು ನಿವಾರಿಸಲು ಅರಶಿನವನ್ನು ನೆನೆಸುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಆಹಾರವನ್ನು ತಾಜಾ ಆಗಿಡುವುದಕ್ಕೆ ಸಹಾಯ ಮಾಡುವ ಜೊತೆಗೆ ಇದು ಸೂಕ್ಷ್ಮಾಣುಜೀವಿಗಳ ಸಂತಾನಾಭಿವೃದ್ಧಿಯನ್ನೂ ತಡೆಯುತ್ತದೆ.

ಮೀನು ಹಾಗೂ ಮಾಂಸವನ್ನು ಕೆಡದಂತೆ ಹೇಗೆ ಸಂರಕ್ಷಿಸುವ ವಿಧಾನ :

  • ಮೀನು ಹಾಗೂ ಮಾಂಸವನ್ನು ಫ್ರೀಜರ್‌ನಲ್ಲಿರಿಸುವುದಕ್ಕಿಂತ ಉಪ್ಪು, ಅರಶಿನ ಹಾಗೂ ವಿನೇಗರ್ ಬಳಸಿ ನೆನೆಸುವುದು ಪ್ರಮುಖ. ಇದು ಮಾಂಸ ಹಾಗೂ ಮೀನಿನ ತಾಜಾತನವನ್ನು ಹಾಗೆಯೇ ಇರಿಸುತ್ತದೆ. ಇದರೊಂದಿಗೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಗೂ ಮೆಣಸಿನ ಹುಡಿಯನ್ನು ಚಿಮುಕಿಸುವುದು ಮೀನು ಹಾಗೂ ಮಾಂಸವನ್ನು ಹುರಿಯುವಾಗ ಖಾದ್ಯಕ್ಕೆ ಇನ್ನಷ್ಟು ಸ್ವಾದವನ್ನು ಉಂಟು ಮಾಡುತ್ತದೆ.

ಹೀಗೆ ಮೀನನ್ನು ಉಪ್ಪು ಅರಶಿನ ಸೇರಿಸಿ ಕೆಡದಂತೆ ಇರಿಸಿ ಮೀನಿನ ರುಚಿಯನ್ನು ಸಹ ಹೆಚ್ಚಿಸಬಹುದಾಗಿದೆ.

Leave A Reply

Your email address will not be published.