EPFO ನಿಂದ ಭರ್ಜರಿ ಗುಡ್ನ್ಯೂಸ್
ಪಿಂಚಣಿ ನಿಧಿ ಸಂಸ್ಥೆ “ಆರು ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು ಹೊಂದಿರುವಂತಹ ಉದ್ಯೋಗಿಗಳು ಇದೀಗ ತಮ್ಮ ಪಿಂಚಣಿ ಮೊತ್ತವನ್ನು ಹಿಂಪಡೆದುಕೊಳ್ಳಬಹುದಾಗಿದೆ ಎಂದು EPFO ಘೋಷಿಸಿದೆ. ಉದ್ಯೋಗಿ ಪಿಂಚಣಿ ಯೋಜನೆ 1995 (EPS-95) ಯಲ್ಲಿರುವ (Employees Pension Scheme 1995) ಪಿಂಚಣಿ ಮೊತ್ತವನ್ನು ಆರು ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು ಹೊಂದಿರುವ ಉದ್ಯೋಗಿಗಳಿಗೆ ಪಡೆದುಕೊಳ್ಳಲು ಅನುಮತಿಸಲಾಗಿದೆ ಎಂದು ಉದ್ಯೋಗಿಗಳ ಪಿಂಚಣಿ ನಿಧಿ ಸಂಸ್ಥೆ ಘೋಷಣೆ ಮಾಡಿದೆ ಎಂದು ಸುದ್ದಿಮೂಲಗಳು ತಿಳಿಸಿವೆ. 34 ವರ್ಷಗಳವರೆಗೆ ಯೋಜನೆಯ ಸದಸ್ಯರಾಗಿರುವವರಿಗೆ ಅನುಪಾತದ ಪಿಂಚಣಿ ಪ್ರಯೋಜನಗಳನ್ನು ವಿಸ್ತರಿಸುವುದನ್ನು ಶಿಫಾರಸುಗಳಲ್ಲಿ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಸಂಸ್ಥೆಗಳಲ್ಲಿ ಆರು ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು ಹೊಂದಿರುವ ಉದ್ಯೋಗಿಗಳು ತಮ್ಮ ಇಪಿಎಸ್ ಖಾತೆಗಳಿಂದ ಪಿಂಚಣಿ ಮೊತ್ತವನ್ನು ವಿದ್ಡ್ರಾ ಮಾಡಲು ಅವಕಾಶ ನೀಡಬೇಕು ಎಂದು CBT ತಿಳಿಸಿದೆ.
ಕಾರ್ಮಿಕ ಸಚಿವಾಲಯದ ಹೇಳಿಕೆಯ ಪ್ರಕಾರ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ನೇತೃತ್ವದ 232 ನೇ ಸಭೆಯಲ್ಲಿ EPFO ದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (CBT) ಈ ಕ್ರಮವನ್ನು ಶಿಫಾರಸು ಮಾಡಿದೆ.
ಕಾರ್ಮಿಕ ಸಚಿವಾಲಯ ತಿಳಿಸಿರುವಂತೆ EPS-95 ಯೋಜನೆಯಿಂದ ವಿನಾಯಿತಿ ಅಥವಾ ರದ್ದುಗೊಳಿಸುವ ಸಂದರ್ಭದಲ್ಲಿ ವರ್ಗಾವಣೆ ಮೌಲ್ಯ ಲೆಕ್ಕಾಚಾರವನ್ನು ಸಮಾನಗೊಳಿಸಲು ಮಂಡಳಿಯು ಶಿಫಾರಸು ಮಾಡಿದೆ.
ಇದಲ್ಲದೆ ಎಕ್ಸ್ಚೇಂಜ್ ಟ್ರೇಡ್ ಫಂಡ್ ಯುನಿಟ್ಗಳಲ್ಲಿ (ETF) ಹೂಡಿಕೆಗಾಗಿ ಉಳಿತಾಯ ನೀತಿಯನ್ನು ಮಂಡಳಿಯು ಅನುಮೋದಿಸಿದೆ ಎಂಬುದಾಗಿ ವರದಿಯಾಗಿದೆ.