2nd PUC Preparatory Exam: ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ವಿದ್ಯಾರ್ಥಿಗಳು ಎದುರು ನೋಡುತ್ತಿದ್ದ ದ್ವಿತೀಯ ಪಿಯುಸಿ ವೇಳಾಪಟ್ಟಿ (Time Table) ಈಗಾಗಲೇ ಬಿಡುಗಡೆಯಾಗಿದೆ. ಆದರೆ ಅದಕ್ಕೂ ಮುನ್ನ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿದ್ದು, ಅದರ ವೇಳಾಪಟ್ಟಿ ಕೂಡ ಇದೀಗ ಬಿಡುಗಡೆಯಾಗಿದೆ.

ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಅದರಲ್ಲಿ ಕೂಡ ಎಸೆಸೆಲ್ಸಿ ಹಾಗೂ ಪಿಯುಸಿ ಮುಖ್ಯ ಘಟ್ಟವಾಗಿದೆ. ಇದೀಗ, ರಾಜ್ಯದಲ್ಲಿ 2023ರ PUC ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ವಿದ್ಯಾರ್ಥಿಗಳು ಅಭ್ಯಾಸ ಆರಂಭಿಸಬೇಕಾಗುತ್ತದೆ. ಯುದ್ದ ಕಾಲೇ ಶಸ್ತ್ರಾಭ್ಯಾಸ ಎಂಬ ನಿಲುವನ್ನು ವಿರೋಧಿಸಿ ಪೂರ್ವ ತಯಾರಿ ನಡೆಸುವುದು ಉತ್ತಮ. ಅದಕ್ಕಾಗಿ ನೀವು ಕೆಲವೊಂದು ಸಲಹೆಗಳನ್ನೂ ಗಮನಿಸಿ ವಿದ್ಯಾರ್ಥಿಗಳು (Student) ಸಿದ್ಧತೆಯಲ್ಲಿ ತೊಡಗಿಕೊಂಡರೆ ಉತ್ತಮ ಫಲಿತಾಂಶ ಗಳಿಸಬಹುದು.

ಪರೀಕ್ಷೆ ಯ ದಿನಾಂಕ (Date) ಹಾಗೂ ವಿಷಯಗಳ ವಿವರಗಳು ಹೀಗಿದ್ದು, ಇದಕ್ಕನುಗುಣವಾಗಿ ಪರೀಕ್ಷೆ ನಡೆಯಲಿದೆ. ಕೆಲವೊಮ್ಮೆ ಅನೇಕ ಪ್ರಶ್ನೆಗಳು ಪುನರಾವರ್ತನೆ ಆಗುವುದರಿಂದ ನಿಮಗೆ ಕಠಿಣವಾದ ವಿಷಯಗಳ ಹಿಂದಿನ ವರ್ಷದ ಪ್ರಶ್ನೆಗಳನ್ನು ಹೆಚ್ಚುವರಿ ಅಂಕಗಳಿಗಾಗಿ ಅಭ್ಯಾಸ ನಡೆಸಬಹುದು. ಇದಕ್ಕೆ ಒಂದು ನಿಖರ ವಾರದ ವೇಳಾಪಟ್ಟಿ ಮಾಡಿ ಒಂದೊಂದು ವಿಷಯಕ್ಕೆ ಒಂದೊಂದು ದಿನ ಮೀಸಲಿಡುವುದು ಒಳ್ಳೆಯದು.

ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ತಮ್ಮ ಪರೀಕ್ಷಾ ಸಿದ್ಧತೆಗಳನ್ನು ಪ್ರಾರಂಭ ಮಾಡುವುದು ಸೂಕ್ತ.

ಓದಿದ ವಿಷಯವನ್ನು ಇನ್ನೊಮ್ಮೆ ಓದಿ ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವುದು ಮತ್ತು ಇತರ ವಿಷಯಗಳಲ್ಲಿನ ಸಂಶಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ನೆರವಾಗುತ್ತದೆ.

ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಹೀಗಿದೆ

18-01-2023 ಬುಧವಾರ – ಕನ್ನಡ.

19-01-2023 ಗುರುವಾರ – ಇಂಗ್ಲಿಷ್.

20-01-2023 ಶುಕ್ರವಾರ – ಇತಿಹಾಸ, ಭೌತಶಾಸ್ತ್ರ.

21-01-2023 ಶನಿವಾರ – ಲೆಕ್ಕಶಾಸ್ತ್ರ, ಶಿಕ್ಷಣಶಾಸ್ತ್ರ, ಐಚ್ಛಿಕ ಕನ್ನಡ.

22-01-2023 ಭಾನುವಾರ ರಜೆ.

23-01-2023 ಸೋಮವಾರ – ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ತ್ರ.

24-01-2023 ಮಂಗಳವಾರ – ಅರ್ಥಶಾಸ್ತ್ರ, ರಸಾಯನಶಾಸ್ತ್ರ.

25-01-2023 ಬುಧವಾರ – ವ್ಯವಾಹರ ಅಧ್ಯಯನ, ಸಮಾಜಶಾಸ್ತ್ರ, ಗಣಿತ.

26-01-2023 ಗುರುವಾರ ಗಣರಾಜೋತ್ಸವ.

27-01-2023 ಶುಕ್ರವಾರ – ಭೂಗೋಳಶಾಸ್ತ್ರ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ.

28-01-2023 ಶನಿವಾರ – ಇಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಬ್ಯೂಟಿ & ವೆಲ್‌ನೆಸ್.

29-01-2023 ಭಾನುವಾರ ರಜೆ

ಇಲ್ಲಿ ನೀಡಿರುವ ದಿನಾಂಕದ ಪ್ರಕಾರ ಪರೀಕ್ಷೆ ನಡೆಯಲಿದ್ದು, ಇಲ್ಲಿ ನೀಡಿರುವ ದಿನಾಂಕದ ಪ್ರಕಾರ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸಬೇಕು. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವದ ಅತಿ ಮುಖ್ಯ ಘಟ್ಟವಾಗಿದ್ದು, ಇದರ ಬಳಿಕ ತಮ್ಮ ಅಭಿರುಚಿಗೆ ಹಾಗೂ ಆಸಕ್ತಿಯ ಮೇರೆಗೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರಕ್ಕೆ ಮಕ್ಕಳು ಬರಬಹುದು. ಇದರ ಜೊತೆಗೆ ತಮ್ಮ ಅಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಆ ಕಾರಣದಿಂದ ಸರಿಯಾಗಿ ಅಭ್ಯಾಸ ಮಾಡಿ ಅಂಕಗಳಿಸಲು ಪ್ರಯತ್ನಿಸುವುದು ಉತ್ತಮ.

Leave A Reply

Your email address will not be published.