Avatar-2 Film | Titanic ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್ 2’ ತೆರೆಗೆ | 3300 ಕೋಟಿ ರೂಪಾಯಿ ಬಜೆಟ್ ನಲ್ಲಿ ವಿಶಿಷ್ಟ ಲೋಕದ, ವಿಭಿನ್ನ ಜೀವಿಗಳ ಚಿತ್ರಣ !
ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಚಿತ್ರವೊಂದು ಸದ್ದಿಲ್ಲದೆ ತೆರೆಗಪ್ಪಳಿಸಿದೆ. 2009 ರ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಚಿತ್ರ ಅವತಾರ್ ನ ಹೊಸ ಅವತಾರವಾದ ಅವತಾರ್: ದಿ ವೇ ಆಫ್ ವಾಟರ್-ನ ‘ ಇಂದು ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಚಲನಚಿತ್ರವು 3D ಮತ್ತು IMAX ಸ್ವರೂಪಗಳಲ್ಲಿ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ – ಇಂಗ್ಲೀಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯ ಆಗಿದೆ.
ಈ ಚಿತ್ರವು ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ. ಅದಕ್ಕೆ ಕಾರಣ ಅವತಾರ್ 2 ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮರೂನ್. ಜೇಮ್ಸ್ ಕ್ಯಾಮರೂನ್ ಅಂದ್ರೆ ಯಾರಂದು ಕೊಂಡ್ರಿ. ಆತ ಸಾಲು ಸಾಲು ಹಿಟ್ ಚಿತ್ರಗಳ ನಿರ್ದೇಶಕ. 1987ರ ಟೈಟಾನಿಕ್ ನಂತರ ಬಂದ ಟರ್ಮಿನೇಟರ್, 2009 ರ ಅವತಾರ್ ನಂತರ ಈಗ ಈ ಚಿತ್ರಮಾಂತ್ರಿಕನ ನಿರ್ದೇಶನದಲ್ಲಿ ಅವತಾರ್: ದಿ ವೇ ಆಫ್ ವಾಟರ್ ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ.
ಇದು ವಿಶ್ವದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ. ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂದು ಇತಿಹಾಸ ಬರೆದಿರುವ ಜೇಮ್ಸ್ ಕ್ಯಾಮರೂನ್ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಚಿತ್ರವು ಸುಮಾರು $250-$350 ಮಿಲಿಯನ್ ಡಾಲರ್ ( ಭಾರತದ ರೂಪಾಯಿಗಳಲ್ಲಿ ಬರೋಬ್ಬರಿ 3300 ಕೋಟಿ) ಬಜೆಟ್‌ನಲ್ಲಿ ಮಾಡಲಾಗಿದೆ. ಕ್ಯಾಮರೂನ್ ಪ್ರಕಾರ ಈ ಚಿತ್ರವು ವಿಶ್ವದಾದ್ಯಂತ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ $2 ಬಿಲಿಯನ್ ಗಳಿಸಬೇಕಾಗಿದೆ. ಒಂದು ಅಂದಾಜಿನ ಪ್ರಕಾರ ಅವತಾರ್ – 2 ಭಾರತದಲ್ಲಿ 500 ರಿಂದ 600 ಕೋಟಿ ರೂಪಾಯಿಗಳ ನಿವ್ವಳ ಸಂಗ್ರಹವನ್ನು ಮಾಡುವ ಸಾಧ್ಯತೆಯಿದೆ.
ಹೆಚ್ಚಿನ ಟಿಕೆಟ್ ದರಗಳು ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ದೀರ್ಘಾವಧಿಯ ಹಿನ್ನಲೆಯಲ್ಲಿ ಭಾರತದಲ್ಲಿ ಈ ಚಿತ್ರವೂ ತೆಲುಗು ಬ್ಲಾಕ್ ಬಸ್ಟರ್ RRR ನ 750 ಕೋಟಿ ರೂಪಾಯಿಗಳ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹವನ್ನು ಸಹ Avatar: The Way of Water ದಾಟುವುದು ಎಂಬ ನಿರೀಕ್ಷೆ ಇದೆ. ಪ್ರಸ್ತುತ, ಬಾಹುಬಲಿ 2, ಕೆಜಿಎಫ್: ಅಧ್ಯಾಯ 2 ಮತ್ತು RRR ಪ್ರಕಾರ ಅತಿ ಹೆಚ್ಚು ನಿವ್ವಳ ದುಡ್ಡು ಮಾಡಿದ ಸಿನಿಮಾಗಳು.
ಮೊದಲ ಭಾಗದ ಒಂದು ದಶಕದ ನಂತರ, ಚಲನಚಿತ್ರವು ಜೇಕ್ ಸುಲ್ಲಿ ತನ್ನ ಕುಟುಂಬದೊಂದಿಗೆ ಪಂಡೋರಾ ಚಂದ್ರನ ಮೇಲೆ ವಾಸಿಸುತ್ತಿರುವುದನ್ನು ಕೇಂದ್ರೀಕರಿಸುತ್ತದೆ. ಜೇಕ್ ಮತ್ತು ನೆಯ್ಟಿರಿ ತನ್ನ ಕುಟುಂಬವನ್ನು ಬಾಹ್ಯ ಜೀವಿಗಳ ಬೆದರಿಕೆಯಿಂದ ರಕ್ಷಿಸಲು ಒಟ್ಟಿಗೆ ಸೇರಿ ಹೋರಾಡುವುದು ಇಲ್ಲಿನ ಮುಖ್ಯ ಕಥಾವಸ್ತು. ಕಥೆ ಹುಟ್ಟು ಹಾಕುವ ರೀತಿ, ಕಥನ ಶೈಲಿ, ಕುತೂಹಲ ಮತ್ತು ಒಂದು ಉತ್ಸಾಹವನ್ನು ಕೊನೆಯ ತನಕ ಉಳಿಸಿಕೊಳ್ಳುವ ಕಲೆ, ಸಿನಿಮಾಟೋಗ್ರಫಿ, ವಿಶ್ಯುವಲ್ ಎಫೆಕ್ಟ್, ಆಕ್ಷನ್ ಸೀನ್ ಇವನ್ನೆಲ್ಲ ನಿರ್ದೇಶಕ ಜೇಮ್ಸ್ ಕ್ಯಾಮರಾ ಅಡುಗೆ ಯಾರು ಹೇಳಿ ಕೊಡಬೇಕಿಲ್ಲ ಆತನ ರಕ್ತದಲ್ಲಿ ಅದು ಬೆರೆತೇ ಇದೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದ್ದು ಅದನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇನ್ನೊಂದೆಡೆ ಇನ್ನೂ ಚೆನ್ನಾಗಿ ಕಥೆ, ಚಿತ್ರಕಥೆ ಮಾಡಬಹುದಿತ್ತು ಎಂಬ ಸಣ್ಣ ಕಾಮೆಂಟ್ ಕೂಡಾ ಬಂದಿದೆ. ಅಲ್ಲದೆ, ಸಿನಿಮಾದ ಸಮಯ ಜಾಸ್ತಿ ಆಯ್ತು ಎಂದು ಕೂಡ ಇನ್ನೊಂದು ಮಿನಿ ದೂರು ಹೇಳಲಾಗಿದೆ.
ಅವತಾರ್ ಸಿಕ್ವೇಲ್‌ಗೆ ‘ದಿ ವೇ ಆಫ್ ವಾಟರ್’ ಎಂದು ಹೆಸರಿಡಲಾಗಿದೆ. ಅವತಾರ್ ನಲ್ಲಿ ಕಾಡಿನ ಹಿನ್ನೆಲೆಯಲ್ಲಿ ಚಿತ್ರ ಮೂಡಿಬಂದಿದ್ದರೆ, ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ತೆರೆದುಕೊಂಡಿದೆ. ಚಿತ್ರದಲ್ಲಿ ವಿಚಿತ್ರ ಪ್ರಾಣಿಗಳನ್ನು ಜೀವಂತ ಪ್ರಾಣಿಗಳ ಥರ ಕಣ್ಣ ಮುಂದೆ ತಂದು ನಿಲ್ಲಿಸಲಾಗಿದೆ.. ‘ಅವತಾರ್’ ಸಿನಿಮಾದಿಂದ ಒಟ್ಟೂ ಐದು ಸಿಕ್ವೇಲ್ ಹೊರಬರಲಿವೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ಅವತಾರ್ 3′ 2024 ರ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆಯಂತೆ. ‘ಅವತಾರ್ 4’ ಸಿನಿಮಾವು 2026 ಡಿಸೆಂಬರ್ 18ರಂದು ರಿಲೀಸ್ ಆಗಲಿದೆ. ‘ಅವತಾರ್ 5’ 2028ರ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಇವೆಲ್ಲ ಜೇಮ್ಸ್ ಕ್ಯಾಮರೂನ್ ಚಿತ್ರಗಳಾದ್ದರಿಂದ ಪ್ರತಿಯೊಂದು ಚಿತ್ರವು ವಿಭಿನ್ನ ಕಥೆ ಮತ್ತು ಹೊಸ ಜೀವಿಗಳ ‘ಅವತಾರ ‘ಗಳೊಂದಿಗೆ ವಿಶಿಷ್ಟವಾಗಿ ಮೂಡಿಬರುವುದಂತೂ ಸತ್ಯ.
ಅವತಾರ್ 2 ಪಾತ್ರವರ್ಗದಲ್ಲಿ ಸ್ಯಾಮ್ ವರ್ಥಿಂಗ್ಟನ್, ಜೋ ಸಲ್ಡಾನಾ, ಸಿಗೋರ್ನಿ ವೀವರ್, ಕೇಟ್ ವಿನ್ಸ್ಲೆಟ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್, ಜೋಯಲ್ ಡೇವಿಡ್ ಮೂರ್, ಬ್ರೆಂಡನ್ ಕೋವೆಲ್, ಜೆಮೈನ್ ಕ್ಲೆಮೆಂಟ್ ಮತ್ತು ಜ್ಯಾಕ್ ಚಾಂಪಿಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.