LPG ಸಿಲಿಂಡರ್ ರೀಫಿಲ್ ಮಾಡಲು ‘ಬಡ್ಡಿ ರಹಿತ ಸಾಲ’ ಲಭ್ಯ
ದೇಶದ ಬಡ ಜನರಿಗೆ ಸರಕಾರ ಆರ್ಥಿಕ ಸಹಾಯದಿಂದ ಹಿಡಿದು ಉಚಿತ ಪಡಿತರವನ್ನು ಸರ್ಕಾರದ ನೀಡುತ್ತಿದೆ. ಹಾಗೆನೇ ಈ ಅನುಕ್ರಮದಲ್ಲಿ ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಗೂ ಚಾಲನೆ ನೀಡಲಾಗುತ್ತಿದೆ.
ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕದ್ದಲು ಇತ್ಯಾದಿಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಿದ ಪರಿಣಾಮ ಈ ಯೋಜನೆ ಪ್ರಾರಂಭಿಸಲಾಯ್ತು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಡೆಸುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಎಲ್ಪಿಜಿ ಸಂಪರ್ಕ, ಬಿಪಿಎಲ್ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗುತ್ತದೆ, ಈ ಯೋಜನೆಯಡಿಯಲ್ಲಿ ಪ್ರತಿ ಸಂಪರ್ಕವು ಗ್ಯಾಸ್ ಸ್ಟವ್ ಖರೀದಿಸಲು ಮತ್ತು ಸಿಲಿಂಡರ್ ರೀಫಿಲ್ ಮಾಡಲು ಬಡ್ಡಿ ರಹಿತ ಸಾಲವನ್ನು ಪಡೆಯಲು ಅರ್ಹವಾಗಿರುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರವು ಅನೇಕ ಅರ್ಹತೆಗಳನ್ನು ಹೊಂದಿಸಿರುವಾಗ ಅರ್ಹತೆಯನ್ನು ಪೂರೈಸಬೇಕಾಗುತ್ತದೆ. ಈ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಈ ಆರ್ಹತೆ ಹೊಂದಲು ಈ ಮಾನದಂಡಗಳನ್ನು ಪೂರೈಸಿಬೇಕು.
- ಭಾರತೀಯ ಪ್ರಜೆಯಾಗಿರಬೇಕು.
- 18 ವರ್ಷ ಮೇಲ್ಪಟ್ಟವರಾಗಿರಬೇಕು.
- LPG ಸಂಪರ್ಕವನ್ನ ಹೊಂದಿರದ, BPL ಕುಟುಂಬದ
- ಮಹಿಳೆಯಾಗಿರಬೇಕು.
- ಇದೇ ರೀತಿಯ ಇತರ ಯೋಜನೆಗಳ ಅಡಿಯಲ್ಲಿ
ಯಾವುದೇ ಪ್ರಯೋಜನವನ್ನು ಪಡೆದಿರಬಾರದು.
ಎಸ್‌ಇಸಿಸಿ 2011 ಅಥವಾ ಎಸ್ಸಿ/ಎಸ್ಟಿ ಕುಟುಂಬಗಳ ಅಡಿಯಲ್ಲಿ ಬಿಪಿಎಲ್ ಕುಟುಂಬಗಳ ಪಟ್ಟಿಯಲ್ಲಿರುವ ಫಲಾನುಭವಿಗಳು, ಪಿಎಂಎವೈ (ಗ್ರಾಮೀಣ), ಎಎವೈ, ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ), ಅರಣ್ಯವಾಸಿಗಳು, ನದಿ ದ್ವೀಪಗಳಲ್ಲಿ ವಾಸಿಸುವ ಜನರು ಅಥವಾ ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟು ಜನಾಂಗದವರು ಆಗಿರಬೇಕು.