ಸೊಳ್ಳೆಗಳಿಂದ ಕ್ಷಣಮಾತ್ರದಲ್ಲಿ ಮುಕ್ತಿ ನೀಡುವ ಲ್ಯಾಂಪ್ | ಅದು ಕೂಡಾ ಭಾರೀ ಅಗ್ಗದ ಬೆಲೆಯಲ್ಲಿ
ಚಳಿಗಾಲದಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿ ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಪರದೆ, ಕಾಯಿಲ್, ಲೋಶನ್, ಕ್ರೀಂ ಹೀಗೆ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಪಡೆಯಲು ಹರಸಾಹಸ ಪಡುವುದು ಸಹಜ. ಮನೆಯ ಸುತ್ತಮುತ್ತ ಸೊಳ್ಳೆ ಕಾಟ ತಪ್ಪಿಸಿಕೊಳ್ಳುವುದಕ್ಕೆ ನೀವು ಏನೆಲ್ಲಾ ಹರಸಾಹಸ ಪಟ್ಟರು ಕೂಡ ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳಲು ಅಗುತ್ತಿಲ್ಲವೆ?. ಸೊಳ್ಳೆಯಿಂದ ಕಚ್ಚಿಸಿಕೊಂಡು ಸೊಳ್ಳೆಗೆ ಶಾಪ ಹಾಕುವ ಬದಲಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ನೀವು ಪ್ರಯತ್ನ ನಡೆಸಿ ಫಲಕಾರಿಯಾಗಲಿಲ್ಲವೆ?? ಹಾಗಿದ್ದರೆ ನಿಮಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಬಗ್ಗೆ ತಿಳಿದುಕೊಳ್ಳಲೇಬೇಕು.
ಇದೀಗ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಸುಲಭವಾಗಿ ಸೊಳ್ಳೆಗಳನ್ನು ಕೊಂದು ಬಿಡುತ್ತವೆ. ಇದರ ಜೊತೆಗೆ ಲ್ಯಾಂಪ್ ಅನ್ನು ಪರಿಸರ ಸ್ನೇಹಿ ಎಂದು ಹೇಳಲಾಗಿದ್ದು, ಇದನ್ನು ಬಳಸಿದರೆ ಯಾವುದೇ ರೀತಿಯಿಂದಲೂ ಕೂಡ ನಿಮಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದು.
ಕೆಲವೊಮ್ಮೆ ಮನೆಯ ಸುತ್ತಮುತ್ತ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ . ಇಷ್ಟೇ ಅಲ್ಲದೆ ಪರಿಹಾರಕ್ಕೆ ಬಳಸುವ ಸಾಮಗ್ರಿಗಳಲ್ಲಿ ರಾಸಾಯನಿಕಗಳ ಬಳಕೆಯಿಂದ ಆರೋಗ್ಯದ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಇದೀಗ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಸುಲಭವಾಗಿ ಸೊಳ್ಳೆಗಳನ್ನು ಕೊಂದು ಬಿಡುತ್ತವೆ. ಅಲ್ಲದೆ ಈ ಲ್ಯಾಂಪ್ ಅನ್ನು ಪರಿಸರ ಸ್ನೇಹಿ ಎಂದು ಕೂಡಾ ಹೇಳಲಾಗಿದ್ದು ಇದರ ಬಳಕೆಯಿಂದ ಯಾವುದೇ ರೀತಿಯಲ್ಲಿಯೂ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೂಡ ಹೇಳಲಾಗುತ್ತದೆ.
ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ : ಬಗ್ ಝಾಪರ್ ಮಾಸ್ಕಿಟೋ ಅಂಡ್ ಫ್ಲೈ ಕಿಲ್ಲರ್ ಇಂಡೋರ್ ಲೈಟ್ ವಿತ್ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಪೋರ್ಟಬಲ್ ಯುಎಸ್‌ಬಿ ಎಲ್ಇಡಿ ಟ್ರ್ಯಾಪ್ ಇದನ್ನು ಎರಡು ಯೂನಿಟ್ ಗಳನ್ನು ಬಳಸಿ ತಯಾರಿಸಲಾಗಿದೆ.ಇದರಲ್ಲಿ ಒಂದು ಯೂನಿಟ್ ರೇಖೆಯಂತೆ ಕಾರ್ಯ ನಿರ್ವಹಿಸಿದರೆ ಇನ್ನೊಂದು ಸೊಳ್ಳೆಗಳನ್ನು ಆಕರ್ಷಿಸುವ ಕೆಲಸ ಮಾಡುತ್ತದೆ. ಈ ಲ್ಯಾಂಪ್ ಆನ್ ಆದ ತಕ್ಷಣ ಸೊಳ್ಳೆಗಳನ್ನು ತನ್ನ ಕಡೆಗೆ ಸೆಳೆದುಕೊಂಡು ಎಳೆದುಕೊಲ್ಲುತ್ತದೆ. ಈ ಮೂಲಕ ಕ್ಷಣಾರ್ಧದಲ್ಲಿ ಎಲ್ಲಾ ಸೊಳ್ಳೆಗಳನ್ನು ಕೊಲ್ಲುವ ಜೊತೆಗೆ ಸೊಳ್ಳೆಗಳು ಮಾತ್ರವಲ್ಲದೇ ಸಣ್ಣ ಸಣ್ಣ ಕೀಟಗಳಿಂದಲೂ ನಿಮಗೆ ಮುಕ್ತಿ ದೊರೆಯಲಿದೆ.
ಈ ಲ್ಯಾಂಪ್ ಅತಿ ಕಡಿಮೆ ಬೆಲೆಗೆ ನಿಮಗೆ ದೊರೆಯಲಿದ್ದು, ಕೇವಲ 689ರೂ. ಆಗಿದ್ದು, ಒಮ್ಮೆ ಖರೀದಿಸಿ ತಂದರೆ ವರ್ಷಗಳವರೆಗೆ ಬಳಸಬಹುದಾಗಿದೆ. ಕಾಯಿಲ್, ಲೋಶನ್, ಕ್ರೀಮ್ ಇವುಗಳಿಗೆ ಹೋಲಿಸಿದರೆ ಬೆಲೆ ಅಗ್ಗ ಎಂದೇ ಹೇಳಬಹುದಾಗಿದೆ.
ಈ ಲ್ಯಾಂಪ್ ನ ಸ್ವಿಚ್ ಆನ್ ಮಾಡಿದ ಕೂಡಲೇ ಎಲ್ಇಡಿ ದೀಪ ಬೆಳಗುತ್ತದೆ. ಇದರಿಂದಾಗಿ ನೈಟ್ ಲ್ಯಾಂಪ್ ಆಗಿ ಕೂಡ ಕೆಲಸ ಮಾಡುತ್ತದೆ. ಇದರ ನೀಲಿ ಬೆಳಕಿನಿಂದ ಆಕರ್ಷಿತವಾಗಿ ಸೊಳ್ಳೆಗಳು ಹತ್ತಿರ ಬರುವುದರಿಂದ ಈ ವೇಳೆ ಲ್ಯಾಂಪ್ ತನ್ನ ಕಾರ್ಯ ನಿರ್ವಹಿಸುತ್ತದೆ. ಅಂದರೆ ಸೊಳ್ಳೆಗಳನ್ನು ತಕ್ಷಣ ತನ್ನೊಳಗೆ ಎಳೆದುಕೊಂಡು ಸಾಯಿಸಿಬಿಡುತ್ತದೆ.