ಕಂದಾಯ ಇಲಾಖೆ ನೇರ ನೇಮಕಾತಿ: ತಿಂಗಳಿಗೆ 80,000 ಸಂಬಳ | BE/B Tech ಆದವರಿಗೆ ಆದ್ಯತೆ
Karnataka Revenue Department Recruitment 2022: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರವು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಈಗಲೇ ರೆಸ್ಯೂಮ್ ಇ-ಮೇಲ್ ಮಾಡಿ. ಅಟಲ್ ಜೀ ಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 23, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಡಿಸೆಂಬರ್ 14ರಂದು ಹುದ್ದೆಯ ಕುರಿತಾಗಿ ನೋಟಿಫಿಕೇಶನ್ ಬಿಡುಗಡೆಯಾಗಿದೆ. ಅರ್ಜಿ ಹಾಕಲು ಡಿಸೆಂಬರ್ 23, 2022 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ : ಸಾಫ್ಟ್ವೇರ್ ಡೆವಲಪರ್-1 ಹುದ್ದೆ, ಆಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್-1 ಹುದ್ದೆ.
ವಿದ್ಯಾರ್ಹತೆ : ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಂಪ್ಯೂಟರ್ ಸೈನ್ಸ್/ECE/IT/ಇನ್ಫರ್ಮೇಶನ್ ಸೈನ್ಸ್ ವಿಭಾಗದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು. ಅಥವಾ MCA ಉತ್ತೀರ್ಣರಾಗಿರಬೇಕು.
ಅನುಭವ : ಸಾಫ್ಟ್ವೇರ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು NET ಡೆವಲಪ್ಮೆಂಟ್ನಲ್ಲಿ ಕನಿಷ್ಠ 3-5 ವರ್ಷ ಕೆಲಸ ಮಾಡಿದ ಅನುಭವ, MS SQL ನಲ್ಲಿ MVC ಆರ್ಕಿಟೆಕ್ಚರ್ (C# ಪೂರ್ಣ ಸ್ಟಾಕ್) ಡೆವಲಪ್ಮೆಂಟ್ ಮತ್ತು ಡೆವಲಪ್ಮೆಂಟ್ನಲ್ಲಿ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
ವೇತನ : ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಸಾಫ್ಟ್ವೇರ್ ಡೆವಲಪರ್ ಹಾಗೂ ಆಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,000-80,000 ವೇತನ ನೀಡಲಾಗುತ್ತದೆ.
ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಡೆಪಲಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪ್ಮೆಂಟ್ನಲ್ಲಿ ಕನಿಷ್ಠ 3ರಿಂದ 5 ವರ್ಷ ಕೆಲಸ ಮಾಡಿದ ಅನುಭವ, ಜೊತೆಗೆ ಜಾವಾ ಲಾಂಗ್ವೇಜ್, Retrofit API ಇಂಟಿಗ್ರೇಷನ್, Sqlite ಡೇಟಾಬೇಸ್ನಲ್ಲಿ ಕೆಲಸ ಮಾಡಿದ ಅನುಭವ ಹಾಗೂ UI/UX ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ದಿನಾಂಕ 23/12/2022ರೊಳಗೆ ಇ-ಮೇಲ್ ಐಡಿ ajskcareers@gmail.com ಗೆ ಕಳುಹಿಸಬೇಕು.