ಡಿ.19 ಕ್ಕೆ ಮತ್ತೆ ವರುಣ ಹಾಜರ್ – ಎಚ್ಚರಿಕೆಯ ಸಂದೇಶ ನೀಡಿದ ಹವಾಮಾನ ಇಲಾಖೆ
ದಿನ ಮುಂಜಾನೆಯ ಚಳಿಗೆ ಬೆಚ್ಚಗೆ ಮಲಗುವವರು ಒಮ್ಮೆ ಚಳಿಗಾಲ ಹೋದರೆ ಸಾಕು ಎಂದುಕೊಳ್ಳೋದು ಸಾಮಾನ್ಯ. ಇತ್ತಿಚಿನ ದಿನಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಕೆಲವೆಡೆ ವರುಣ ದರ್ಶನ ಕೊಟ್ಟಿದ್ದು ಇದೆ. ಒಮ್ಮೆ ಬಿಸಿಲನ್ನು ಕಂಡರೆ ಸಾಕು ಎಂದು ಎಷ್ಟೋ ಜನ ಅಂದುಕೊಂಡಿದ್ದು ಸುಳ್ಳಲ್ಲ. ಇದೀಗ ಮತ್ತೊಮ್ಮೆ ಡಿಸೆಂಬರ್ 19ಕ್ಕೆ ಮಳೆರಾಯ ಪ್ರತ್ಯಕ್ಷ ಆಗಲಿದ್ದಾನೆ ಎಂದು ಹವಾಮಾನ ಇಲಾಖೆಯ ಎಚ್ಚರಿಕೆಯ ಸಂದೇಶ ನೀಡಿದೆ.
ಮ್ಯಾಂಡೌಸ್ ಚಂಡಮಾರುತ ಬುಧವಾರದಿಂದ ತಗ್ಗಿದ ಪರಿಣಾಮ ರಾಜ್ಯದಲ್ಲಿ ಮಳೆ ಕೊಂಚ ಮಟ್ಟಿಗೆ ತಗ್ಗಿದೆ. ಕಳೆದ ಮೂರು ದಿನಗಳಿಂದ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸೂರ್ಯ ದರ್ಶನ ನೀಡಿದ್ದಾನೆ. ಮುಂಜಾನೆ 9 ಗಂಟೆಯ ಬಳಿಕ ಬಿಸಿಲು ಹಂತ ಹಂತವಾಗಿ ಏರಿಕೆ ಕಂಡರೆ, ಮಧ್ಯಾಹ್ನ ಬಿಸಿಲು ನೆತ್ತಿಯನ್ನು ಸುಡುವ ರೀತಿ ಇರುತ್ತದೆ. ಇದರ ಜೊತೆಗೆ ಸಂಜೆ ಆಗುತ್ತಿದ್ದಂತೆ ಚಳಿ ಹೆಚ್ಚಾಗುತ್ತಿದೆ.
ಚಳಿಯ ನಡುವೆ ಕೂಡ ದರ್ಶನ ನೀಡಿದ್ದ ವರುಣ ಸಣ್ಣ ವಿರಾಮದ ಬಳಿಕ ಮತ್ತೆ ಸೋಮವಾರ ಅಂದರೆ, ಡಿಸೆಂಬರ್ 19ರಂದು ದರ್ಶನ ನೀಡುವ ಸಾಧ್ಯತೆ ದಟ್ಟವಾಗಿದೆ. ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಹವಾಮಾನ ಬದಲಾವಣೆಯಿಂದ ಇತ್ತೀಚೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಭಾಗದಲ್ಲಿ ಜೋರು ಮಳೆಯಾಗಿತ್ತು.
ಹವಾಮಾನ ಬದಲಾವಣೆಯಿಂದ ಜನರಲ್ಲಿ ಶೀತ ಸಂಬಂಧಿತ ರೋಗಗಳು ಕಾಣಿಸಿಕೊಳ್ಳುತ್ತಿವೆ. ಉತ್ತರ ಒಳನಾಡು ಭಾಗದಲ್ಲಿಯೂ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಕೆಲವು ಭಾಗಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ, ಹವಾಮಾನ ಇಲಾಖೆ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ನಿನ್ನೆಯಿಂದ ಕರಾವಳಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ.
ಡಿಸೆಂಬರ್ 15ರಂದು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅರಬ್ಬಿ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರ ಸುಳಿಗಾಳಿ ನಿರ್ಮಾಣವಾಗಿದೆ ಎನ್ನಲಾಗಿದೆ. ಕರಾವಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿರುವ ಕಾರಣದಿಂದ ಇದರ ಪ್ರಭಾವ ರಾಜ್ಯದ ಮೇಲೆ ಬೀರದು ಎಂದು ಅಂದಾಜಿಸಲಾಗಿದೆ.