ರೈತರೇ ಗಮನಿಸಿ | ಪಿಎಂ ಕಿಸಾನ್ ನಗದು ಇನ್ನು ಇವರಿಗೆ ಸಿಗೋದು ಡೌಟ್ – ಕೇಂದ್ರ ಸರಕಾರ ಸ್ಪಷ್ಟನೆ
ಕೇಂದ್ರದ ಮೋದಿ ಸರ್ಕಾರವು ರೈತರ ಏಳಿಗೆ ಹಾಗೂ ದೇಶದಲ್ಲಿನ ಕೃಷಿ ಕ್ಷೇತ್ರವನ್ನ ಉತ್ತೇಜಿಸಲು ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಕೂಡಾ ಒಂದು. ರೈತರಿಗೆ ಸಹಾಯ ಮಾಡಲು ಭಾರತ ಸರ್ಕಾರವು ಫೆಬ್ರವರಿ 2019ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ ತಲಾ 2,000 ರೂಪಾಯಿಯಂತೆ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ 6,000 ರೂಪಾಯಿ ಮೊತ್ತವನ್ನ ಠೇವಣಿ ಮಾಡಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ ಮಾಡಿರುವುದು ಗೊತ್ತೇ ಇದೆ. ಈ ಯೋಜನೆಯ ಭಾಗವಾಗಿ, ಈವರೆಗೆ ಸುಮಾರು 10 ಕೋಟಿಗೂ ಹೆಚ್ಚು ರೈತರು 12 ಕಂತುಗಳ ಫಲಾನುಭವಿಗಳಾಗಿದ್ದಾರೆ. ಈಗ ರೈತರು 13ನೇ ಕಂತಿನ ಪಿಎಂ ಕಿಸಾನ್ ನಗದು ಹಣಕ್ಕಾಗಿ ಕಾಯುತ್ತಿದ್ದಾರೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇನ್ನು ಮುಂದೆ ಪಿಎಂ ಕಿಸಾನ್ ಯೋಜನೆಯಲ್ಲಿ ಕಂತು ಪಡೆಯಲು, ಭೂಮಿ ಪ್ರಮಾಣಪತ್ರಗಳು, ಇ-ಕೆವೈಸಿ ಅಗತ್ಯವಿದೆ. ಇದನ್ನು ಮಾಡದಿದ್ದರೆ 13ನೇ ಕಂತಿನ ನಗದು ಪಡೆಯುವುದು ಕಷ್ಟವಾಗುತ್ತದೆ.
ಕೆಲವು ರೈತರು ಇಲ್ಲಿಯವರೆಗೆ ಭೂ ಪರಿಶೀಲನೆ – ಇ-ಕೆವೈಸಿ ಮಾಡದಿದ್ದರೆ, 13 ನೇ ಕಂತಿನ ನಗದು ಪಡೆಯುವುದು ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ರೈತರಿಗಾಗಿ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದ್ದೂ , ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಫಲಾನುಭವಿಯ ಸ್ಥಿತಿಯನ್ನು ತಿಳಿಯಲು ನೀವು 155261 ಗೆ ಕರೆ ಮಾಡಬಹುದು.