ಬೆಳ್ತಂಗಡಿ : ಕಾಡಿನಿಂದ ನಾಡಿಗೆ ಬಂದ ಚಿರತೆ | ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬರ ಮನೆ ಮುಂದೆ ಪ್ರತ್ಯಕ್ಷ
ಬೆಳ್ತಂಗಡಿ : ಕಾಡಿನಿಂದ ಪ್ರಾಣಿಗಳು ಈಗ ನಾಡಿಗೆ ಬರಲು ಪ್ರಾರಂಭ ಮಾಡಿದೆ. ಇದು ಈಗ ಜನರಲ್ಲಿ ನಿಜಕ್ಕೂ ಭಯದ ವಾತಾವರಣ ಮೂಡಿಸಿದೆ ಎಂದೇ ಹೇಳಬಹುದು. ಇಂದು ಮುಂಜಾನೆ ಚಿರತೆಯೊಂದು ಬೆಳ್ತಂಗಡಿ ಗ್ರಾಮದಲ್ಲಿ ಕಂಡು ಬಂದಿದ್ದು ಜನರು ಭಯದ ವಾತಾವರಣದಲ್ಲಿ ದಿನದೂಡುವಂತಾಗಿದೆ.
ರಾಮಣ್ಣ ಪೂಜಾರಿ ಬಳಂಜ ಎಂಬವರ ಮನೆಗೆ ಇಂದು ಮುಂಜಾನೆ ಸರಿ ಸುಮಾರು 2.30 ಗಂಟೆಗೆ ಚಿರತೆ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಂಜ ನಾಲ್ಕೂರು ಗರ್ಡಾಡಿ ಪರಿಸರದಲ್ಲಿ ಚಿರತೆ ಬಂದ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ ನಾಯಿಯನ್ನು ಹಿಡಿಯಲು ಬಂದಿರಬೇಕು ಆದರೆ ಅದು ಸಿಗದೆ ವಾಪಾಸು ಹೋಗಿದೆ ಎನ್ನಲಾಗಿದೆ. ಆರು ತಿಂಗಳ ಮೊದಲು ಕೂಡಾ ಇದೇ ರೀತಿಯಾಗಿ ಚಿರತೆಯೊಂದು ಬಂದಿದ್ದು, ಈಗ ಮತ್ತೆ ನಾಡಿಗೆ ಬಂದಿದ್ದು ಆಸು ಪಾಸಿನ ಗ್ರಾಮಸ್ಥರು ಭಯದ ವಾತಾವರಣದಲ್ಲಿ ದಿನಕಳೆಯುತ್ತಿದ್ದಾರೆ.