ರೈಲು ಪ್ರಯಾಣಿಕರೇ ಗಮನಿಸಿ : ಸಿಲಿಕಾನ್ ಸಿಟಿಯಿಂದ ದೇಶದ ಪ್ರಮುಖ ನಗರಕ್ಕೆ ರೈಲು ಘೋಷಣೆ | ಎಲ್ಲಿಗೆ ?
ಸದ್ಯ ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ . ಈಗಾಗಲೇ ಬೆಂಗಳೂರಿನಿಂದ ಉತ್ತರ ಭಾರತದೆಡೆಗೆ ಪ್ರವಾಸ ಹೊರಡುವವರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಹೌದು ಬೆಂಗಳೂರಿನಿಂದ ದೇಶದ ಪ್ರಮುಖ ನಗರಕ್ಕೆ ವಿಶೇಷ ರೈಲು ಘೋಷಣೆ ಮಾಡಲಾಗಿದೆ.
ಈ ವಿಶೇಷ ರೈಲು ಬಕ್ಸರ್, ಮೊಘಲ್ ಸರಾಯ್, ವಾರಣಾಸಿ, ಅಲಹಾಬಾದ್, ಕಾನ್ಪುರ್, ಝಾನ್ಸಿ, ಭೋಪಾಲ್ ಮುಂತಾದ ದೇಶದ ಪ್ರಮುಖ ನಗರಗಳನ್ನು ಹಾದುಬರಲಿದ್ದು ಹಲವು ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲ ಆಗಲಿದೆ.
ಭಾರತೀಯ ರೈಲ್ವೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಬಿಹಾರದ ರಾಜಧಾನಿ ಪಾಟ್ನಾಕ್ಕೆ ಹೊಸದಾಗಿ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಇದೇ ಡಿಸೆಂಬರ್ 15 ರಿಂದ ಈ ಹೊಸ ರೈಲುಗಳು ಪ್ರಯಾಣಿಕರಿಗೆ ಸೇವೆ ಒದಗಿಸಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಈ ವಿಶೇಷ ರೈಲುಗಳು ಒಟ್ಟು 1600 ಕಿಲೋ ಮೀಟರ್ ದೂರವನ್ನು ಸಂಚರಿಸಲಿವೆ.
ಪಾಟ್ನಾ ಮತ್ತು ಬೆಂಗಳೂರು ರೈಲು ನಿಲ್ದಾಣಗಳಿಂದ ಇಡೀ ದಿನದ ವಿವಿಧ ವೇಳೆಗಳಲ್ಲಿ ಈ ರೈಲುಗಳು ಸಂಚಾರ ಆರಂಭಿಸಲಿವೆ. ಸದ್ಯ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಿರುವ ಭಾರತೀಯ ರೈಲ್ವೆ ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲನ್ನು ಆರಂಭಿಸುವ ಪ್ರಯತ್ನದಲ್ಲಿದೆ .
ಒಟ್ಟಿನಲ್ಲಿ ಕರ್ನಾಟಕ ಮತ್ತು ಉತ್ತರ ಭಾರತದ ನಡುವೆ ಪ್ರಯಾಣ ಬೆಳೆಸುವವರಿಗೆ ಅತಿ ಹೆಚ್ಚು ಅನುಕೂಲ ಕಲ್ಪಿಸಿವೆ. ಈ ವಿಶೇಷ ರೈಲುಗಳು ವರ್ಷಾಂತ್ಯಕ್ಕೆ ವಿವಿಧ ಊರುಗಳಿಗೆ ಪ್ರಯಾಣ ಮಾಡುವವರಿಗೂ ಸಹಕಾರಿಯಾಗಲಿವೆ.