ದಕ್ಷಿಣ ಕನ್ನಡ : ಸಾಂಪ್ರದಾಯಿಕ ಮರುಳುಗಾರಿಕೆಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರುಳುಗಾರಿಕೆಗೆ ಅನುಮತಿ ನೀಡಲಾಗಿದ್ದು, ಯಾವುದೇ ಯಂತ್ರ ಬಳಸದೆ ಮಾನವ ಶ್ರಮದ ಮೂಲಕವೇ ಮರಳುಗಾರಿಕೆ ನಡೆಸಲು ಆದೇಶಿಸಲಾಗಿದೆ.

ನೇತ್ರಾವದಿ ಮತ್ತು ಫಲ್ಗುಣಿ ನದಿಗಳಲ್ಲಿ ಇರುವ ಮರಳು ದಿಬ್ಬಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮರಳುಗಾರಿಗೆಕೆ ಅನುಮತಿ ಕೊಟ್ಟಿದೆ. ಮರಳು ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತವು 14 ಸ್ಥಳಗಳನ್ನು ಗುರುತಿಸಿದ್ದು, ಮೇ ತಿಂಗಳಲ್ಲಿ ಕರೆದ ಡೆಂಡರ್ ಪ್ರಕ್ರಿಯೆಗೆ 282 ಅರ್ಜಿಗಳು ಬಂದಿದ್ದು, ಈ ಪೈಕಿ 202 ಅರ್ಜಿಗಳನ್ನು ಗುರುತಿಸಲಾಗಿತ್ತು. ಆರಂಭದಲ್ಲಿ 148 ಮಂದಿಗೆ ಮಾತ್ರ ಮರುಳುಗಾರಿಕೆಗೆ ಪರವಾನಿಗೆ ನೀಡಲಾಗಿದ್ದು, ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವ ಮುನ್ನ ಹಸಿರು ನ್ಯಾಯ ಮಂಡಳಿಯು ಮರುಳುಗಾರಿಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರಿಂದ ಮರುಳುಗಾರಿಕೆಗೆ ತಡೆಯಾಗಿತ್ತು.


ಇತ್ತೀಚೆಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ 7 ಮಂದಿಯ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎರಡು ನದಿಗಳಲ್ಲಿ ಗುರುತಿಸಿದ ಪ್ರದೇಶಗಳಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದೆ. ಹೀಗಾಗಿ, ಉಳಿದ 54 ಅರ್ಜಿಗಳನ್ನು ವಿಲೇವಾರಿ ಮಾಡಿ ಒಟ್ಟು 202 ಮಂದಿಗೆ ಮರಳುಗಾರಿಕೆ ನಡೆಸಲು ಅನುಮತಿ ನೀಡಿ ಆದೇಶಿಸಲಾಗಿದ್ದು, ಮುಂದಿನ ವಾರದಿಂದ ಮರಳುಗಾರಿಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರುಳುಗಾರಿಕೆಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್​ ಆದೇಶ ಹೊರಡಿಸಿದ್ದಾರೆ. ಕರಾವಳಿ ನಿಯಂತ್ರಣ ವಲಯ (Coastal Regulation Zone- CTZ) ವ್ಯಾಪ್ತಿಯ ನೇತ್ರಾವತಿ ನದಿ (Netravati River) ಹಾಗೂ ಫಲ್ಗುಣಿ ನದಿ (Phalguni River)ಗಳಲ್ಲಿ ಮರಳುಗಾರಿಕೆ (Sand mining)ಗೆ ನಡೆಸಲು ಷರತ್ತುಗಳೊಂದಿಗೆ ಸಮ್ಮತಿ ನೀಡಲಾಗಿದೆ. ಮರಳು ತೆಗೆಯಲು 202 ಜನರಿಗೆ ಅನುಮತಿ ನೀಡಿದ ಜಿಲ್ಲಾಧಿಕಾರಿ ರವಿಕುಮಾರ್​, ಯಾವುದೇ ಯಂತ್ರ ಬಳಸದೆ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ 7 ಜನರ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಈ ಆದೇಶ ಹೊರಡಿಸಲಾಗಿದ್ದು, ಮುಂದಿನ ವಾರದಿಂದ ಅಧಿಕೃತವಾಗಿ ಮರಳು ಪೂರೈಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.