KPSC : ಕೆಪಿಎಸ್‌ಸಿಯಿಂದ ಗ್ರೂಪ್ ಎ, ಬಿ, ಸಿ ಹುದ್ದೆಗಳ ಕುರಿತು ಮಹತ್ವದ ಮಾಹಿತಿ ಪ್ರಕಟಣೆ
ಕರ್ನಾಟಕ ಲೋಕಸೇವಾ ಆಯೋಗವು ಈವರೆಗೆ ಅಧಿಸೂಚಿಸಲಾದ ವಿವಿಧ ಗ್ರೂಪ್ ಎ, ಬಿ, ಸಿ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾದ ಸಂಭವನೀಯ ದಿನಾಂಕಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷಾ ವೇಳಾಪಟ್ಟಿಯು ಜನವರಿ 21, 2023 ರಿಂದ ಆರಂಭವಾಗಿ ಏಪ್ರಿಲ್ 30, 2023 ರವರೆಗೆ ಪರೀಕ್ಷೆಗಳು ನಡೆಯಲಿವೆ.
2023 ಜನವರಿ 21, 22 ರಂದು ವಿವಿಧ ಗ್ರೂಪ್ ಸಿ ಹುದ್ದೆಗಳಿಗೆ ಒಟ್ಟು 3 ಪತ್ರಿಕೆಗಳಿಗೆ ಪರೀಕ್ಷೆಗಳು ನಡೆಯಲಿವೆ.
ಪೌರಾಡಳಿತ ನಿರ್ದೇಶನಾಲಯದ ಕಿರಿಯ ಅಭಿಯಂತರರು (ಸಿವಿಲ್) – 89
ಕಿರಿಯ ಆರೋಗ್ಯ ನಿರೀಕ್ಷಕರು – 57
ಎಲೆಕ್ಟ್ರೀಷಿಯನ್ ಗ್ರೇಡ್-1 – 2
ಎಲೆಕ್ಟ್ರೀಷಿಯನ್ ಗ್ರೇಡ್-2 – 10
ನೀರು ಸರಬರಾಜು ಆಪರೇಟರ್ – 89
ಸಹಾಯಕ ನೀರು ಸರಬರಾಜು ಆಪರೇಟರ್ – 163
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು – 50
26-02-2023 ರಂದು ನಡೆಯುವ ಪರೀಕ್ಷೆಗಳು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು – 288, ಹುದ್ದೆಗಳಿಗೆ ಒಟ್ಟು 02 ಪತ್ರಿಕೆಗಳ ಪರೀಕ್ಷೆ ನಡೆಯಲಿದೆ.
18-03-2023, 19-03-2023 ರಂದು ನಡೆಯುವ ಪರೀಕ್ಷೆಗಳು ಹೈದರಾಬಾದ್ ಕರ್ನಾಟಕ ವೃಂದದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಹಾಯಕ ಸಾಂಖ್ಯಿಕ ಅಧಿಕಾರಿ, ಸಾಂಖ್ಯಿಕ ಅಧಿಕಾರಿ, ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು ಹುದ್ದೆಗಳಿಗೆ ಒಟ್ಟು 03 ಪತ್ರಿಕೆಗಳ ಪರೀಕ್ಷೆ ನಡೆಯಲಿದೆ.
ಕೆಳಗಿನ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ 2023 ಫೆಬ್ರುವರಿ 25 ರಂದು ನಡೆಯಲಿದೆ.
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿನ ಸಹಾಯಕ ನಿರ್ದೇಶಕರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು – 25
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು – 288
ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು – 2
ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರು – 08
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ -63
ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು – 26
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರು – 105
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣಿತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ – 13
ಜಲಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್, ಸಿವಿಲ್) – 169
01-04-2023, 02-04-2023 ರಂದು ನಡೆಯುವ ಪರೀಕ್ಷೆಗಳು
29-04-2023, 30-04-2023 ರಂದು ನಡೆಯುವ ಪರೀಕ್ಷೆಗಳು
ಹೈದರಾಬಾದ್ ಕರ್ನಾಟಕ ವೃಂದದ ಜಲಸಂಪನ್ಮೂಲ ಇಲಾಖೆಯ ಕಿರಿಯ ಇಂಜಿನಿಯರ್ (ಸಿವಿಲ್), ಮೆಕ್ಯಾನಿಕಲ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ 3 ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿವೆ.
ಮೇಲೆ ತಿಳಿಸಿದ ವೇಳಾಪಟ್ಟಿಯು ಸಂಭವನೀಯ ವೇಳಾಪಟ್ಟಿ ಆಗಿದ್ದು, ಕೆಪಿಎಸ್‌ಸಿ ಇದೇ ವೇಳಾಪಟ್ಟಿಯನ್ನು ಅಂತಿಮಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಇಲ್ಲವೆ ವೇಳಾಪಟ್ಟಿ ಬದಲಾವಣೆ ಮಾಡುವ ಸಾಧ್ಯತೆ ಕೂಡ ಇವೆ ಎನ್ನಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪೂರ್ವ ತಯಾರಿ ನಡೆಸುವುದು ಉತ್ತಮ..