ಕಡಿಮೆ ವಿದ್ಯುತ್ ಬಿಲ್ ಬರಬೇಕೇ ? ಹಾಗಾದರೆ ನಿಮ್ಮ ಮನೆಯಲ್ಲಿರೋ ಈ ಎರಡು ಗ್ಯಾಜೆಟ್‌ಗಳನ್ನು ಬದಲಾಯಿಸಿ
ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 2 ಗ್ಯಾಜೆಟ್‌ಗಳನ್ನು ಬದಲಾಯಿಸಿ ಸಾಕು!! ದೈನಂದಿನ ಜೀವನದ ಪ್ರತಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಣದುಬ್ಬರ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲವೂ ದುಬಾರಿಯೇ. ಮನೆಯ ವಿದ್ಯುತ್ ಬಿಲ್ ಕೂಡ ಇದಕ್ಕೆ ಭಿನ್ನವಾಗಿಲ್ಲ. ಆದರೆ, ನಿಮ್ಮ ಮನೆಯಲ್ಲಿ ಒಂದೆರಡು ಗ್ಯಾಜೆಟ್‌ಗಳನ್ನು ಬದಲಾಯಿಸುವ ಮೂಲಕ ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದಾಗಿದೆ.
ಇಂದು ಯಾವುದೇ ವಸ್ತುವನ್ನು ಖರೀದಿ ಮಾಡಲು ಹೊರಟರು ಕೂಡ ಬೆಲೆ ಏರಿಕೆಯ ಬಿಸಿ ನಿಮ್ಮನ್ನು ತಟ್ಟದೇ ಇರದು. ಬದಲಾಗುತ್ತಿರುವ ಈ ಕಾಲಮಾನದಲ್ಲಿ ಎಲ್ಲವೂ ದುಬಾರಿಯೇ. ಬೆಲೆ ಏರಿಕೆಯ ಬಿಸಿಯಿಂದ ಖರ್ಚು ಹೆಚ್ಚಾಗುತ್ತಿದ್ದು, ಉಳಿತಾಯ ಕಡಿಮೆ ಆಗಿ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಆದರೆ, ನೀವು ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನಹರಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದು.
ನೀವು ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಲು ಯೋಜನೆ ಹಾಕುತ್ತಿದ್ದರೆ ಇದಕ್ಕಾಗಿ ನೀವು ಹೆಚ್ಚೇನೂ ಮಾಡುವ ಅಗತ್ಯವಿಲ್ಲ . ನಿಮ್ಮ ಮನೆಯಲ್ಲಿರುವ ಎರಡು ಗ್ಯಾಜೆಟ್‌ಗಳನ್ನು ಬದಲಾಯಿಸಿದರೆ ಅಷ್ಟೇ ಸಾಕು.
ನಿಮ್ಮ ಮನೆಯಲ್ಲಿ ಈಗಲೂ ಕೂಡ ಹೆಚ್ಚಿನ ಸಾಮರ್ಥ್ಯದ ಹೀಟರ್‌ಗಳನ್ನು ಬಳಸುತ್ತಿದ್ದರೆ ಮೊದಲು ಅವುಗಳನ್ನು ಬದಲಾಯಿಸಬೇಕು. ಇವು ಹೆಚ್ಚಿನ ಸಾಮರ್ಥ್ಯದ ಶಾಖೋತ್ಪಾದಕಗಳಾಗಿದ್ದು ಅದಕ್ಕಾಗಿ ಅಧಿಕ ವಿದ್ಯುತ್ ಅನ್ನು ಬಳಕೆಯಾಗುತ್ತದೆ. ನೀವು ವಿದ್ಯುತ್ ಬಿಲ್ ಕಡಿಮೆ ಮಾಡಲು ಬಯಸಿದರೆ ಹೀಟರ್ ಬದಲಿಗೆ ಕಡಿಮೆ ವಿದ್ಯುತ್ ಬಳಸುವ ಬ್ಲೋವರ್ ಅನ್ನು ಬಳಸಬಹುದು.
ನಮ್ಮಲ್ಲಿ ಹೆಚ್ಚಿನವರು ತಮ್ಮ ಮನೆಗಳಲ್ಲಿ ಇಂದಿಗೂ ಕೂಡ ಹಳೆಯ ಬಲ್ಬ್‌ಗಳನ್ನೇ ಬಳಸುತ್ತಾರೆ. ಇದರಿಂದ ವಿದ್ಯುತ್ ಬಿಲ್ ಅಧಿಕವಾಗಿ ಬರುತ್ತದೆ. ನಿಮ್ಮ ಮನೆಯಲ್ಲಿಯೂ ಹಳೆಯ ಬಲ್ಬ್‌ಗಳೇ ಇದ್ದರೆ ಮೊದಲು ಅವುಗಳನ್ನು ಬದಲಾಯಿಸಿಕೊಂಡು ಅದರ ಜಾಗದಲ್ಲಿ ಎಲ್ಇಡಿ ಬಲ್ಬ್‌ಗಳನ್ನು ಬಳಸಿದರೆ ವಿದ್ಯುತ್ ಬಿಲ್ ನಲ್ಲಿ ವ್ಯತ್ಯಾಸ ಕಾಣಬಹುದು. ಮೇಲೆ ತಿಳಿಸಿದ ಸಿಂಪಲ್ ಟ್ರಿಕ್ಸ್ ಬಳಸಿ ಪ್ರಯೋಜನ ನೀವೇ ಕಂಡುಕೊಳ್ಳಿ!