IMDB 2022ರ ಟಾಪ್ 10 ಸಿನಿಮಾಗಳು ಯಾವುದು ಗೊತ್ತೇ ? ಕನ್ನಡ ಸಿನಿಮಾ ಕಾಂತಾರ, ಕೆಜಿಎಫ್‌, ಚಾರ್ಲಿಗೆ ದೊರೆತ ಸ್ಥಾನ ಎಷ್ಟನೆಯದು?

IMDB ವೆಬ್ ಸೈಟ್ ಈ ವರ್ಷದ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.

  • ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯದ, ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಅದ್ಭುತ ಪ್ರತಿಕ್ರಿಯೆ ದೊರಕಿದ ಸಿನಿಮಾ ಸಿಕ್ಕಿದೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ತ್ರಿಬಲ್ ಆರ್ ಮೊದಲ ಸ್ಥಾನದಲ್ಲಿದೆ.
  • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರ. ಹಲವಾರು ವಿವಾದಗಳನ್ನು ಹುಟ್ಟಿ ಹಾಕಿದ್ದ ಸಿನಿಮಾ ಇದಾಗಿದ್ದರೂ, ವಾರದಲ್ಲೇ 100 ಕೋಟಿ ಕ್ಲಬ್‌ ಸೇರಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ದಿ ಕಾಶ್ಮೀರ್ ಫೈಲ್ಸ್ 2ನೇ ಸ್ಥಾನದಲ್ಲಿದೆ.
  • ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಬಹಳ ಯಶಸ್ಸು ಗಳಿಸಿದ ಸಿನಿಮಾ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಕೆಜಿಎಫ್ 3ನೇ ಸ್ಥಾನದಲ್ಲಿದೆ.
  • ಕಮಲ್ ಹಾಸನ್ ಅವರ ಬ್ಲಾಕ್ಬಸ್ಟರ್ ಚಿತ್ರ ವಿಕ್ರಮ್ ಸಹ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ವಿಕ್ರಮ್ 4ನೇ ಸ್ಥಾನದಲ್ಲಿದೆ
  • ಕನ್ನಡದ ಕಾಂತಾರ ಸಿನಿಮಾ ಇತಿಹಾಸ ಬರೆದಿದೆ. ಇದು ಈಗಲೂ ರನ್ನಿಂಗ್‌ ಪ್ರೊಸೆಸ್‌ನಲ್ಲಿದೆ. ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಕೈ ಚಳಕದಲ್ಲಿ ಮೂಡಿ ಬಂದ ಈ ಸಿನಿಮಾ, ಜಗತ್ತಿನಾದ್ಯಂತ ಬಹಳ ಯಶಸ್ಸು ಕಂಡ ಅತ್ಯದ್ಭುತ ಸಿನಿಮಾ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಕಾಂತಾರ 5ನೇ ಸ್ಥಾನದಲ್ಲಿದೆ.
  • ಬಹುಭಾಷಾ ನಟ ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಸಿನಿಮಾವು ಜುಲೈ 1ರಂದು ವಿಶ್ವಾದ್ಯಂತ ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಖ್ಯಾತ ರಾಕೆಟ್ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನ ಚರಿತ್ರೆಯನ್ನು ಆಧರಿತ ಕಥೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ರಾಕೆಟ್ರಿ: ದಿ ನಂಬಿ ಎಫೆಕ್ಟ್ 6ನೇ ಸ್ಥಾನದಲ್ಲಿದೆ.
  • ಶಶಿ ಕಿರಣ್ ನಿರ್ದೇಶನದ ಮೇಜರ್ ಸಿನಿಮಾದಲ್ಲಿ ಅಡಿವಿ ಶೇಷ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ 26/11 ಮುಂಬೈ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ತೋರಿಸಲಾಗಿದೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಮೇಜರ್ 7ನೇ ಸ್ಥಾನದಲ್ಲಿದೆ
  • ಹನು ರಾಘವಪುಡಿ ಬರೆದು ನಿರ್ದೇಶಿಸಿದ ತೆಲುಗು ಭಾಷೆಯ ರೊಮ್ಯಾಂಟಿಕ್ ಸಿನಿಮಾ ಸೀತಾ ರಾಮಂ. ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನಾ ಅಧಿಕಾರಿಯಾದ ಲೆಫ್ಟಿನೆಂಟ್ ರಾಮ್ ಆಗಿ ದುಲ್ಕರ್ ಕಾಣಿಸಿಕೊಂಡಿದ್ದಾರೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಸೀತಾ ರಾಮಂ 8ನೇ ಸ್ಥಾನದಲ್ಲಿದೆ
  • ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಪೊನ್ನಿಯಿನ್ ಸೆಲ್ವನ್ 9ನೇ ಸ್ಥಾನದಲ್ಲಿದೆ.
  • ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ 777 ಚಾರ್ಲಿ. ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ 777 ಚಾರ್ಲಿ ಶ್ವಾನ ಹಾಗೂ ಮಾನವನ ಭಾವನಾತ್ಮಕ ಸಂಬಂಧದ ಸಿನಿಮಾ. ಈ ಸಿನಿಮಾ ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ 777 ಚಾರ್ಲಿ 10ನೇ ಸ್ಥಾನದಲ್ಲಿದೆ.

Leave A Reply

Your email address will not be published.