ಸ್ನೇಹಿತನ ಹೆಸರಿನಲ್ಲಿತ್ತು ಬರೋಬ್ಬರಿ 4 ಕೋಟಿ ವಿಮೆ | ಸ್ನೇಹಿತರೇ ಮಾಡಿದರು ಮಾಸ್ಟರ್ ಪ್ಲ್ಯಾನ್ | ಕೊಂದೇ ಬಿಟ್ಟ ನಂಬಿಕೆ ದ್ರೋಹಿಗಳು!

ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ.. ದುಡ್ಡಿನ ವ್ಯಾಮೋಹ ಸತ್ತವರನ್ನು ಬದುಕಿಸುತ್ತೆ!!! ಅಷ್ಟೆ ಅಲ್ಲ.. ದುಡ್ಡು ಸಿಗುತ್ತೆ ಅಂತ ಆದರೆ ಬದುಕಿದವರನ್ನೂ ಕೂಡ ಸಾಯಿಸಲು ಹಿಂದೆ ಮುಂದೆ ನೋಡದ ಜನರು ನಮ್ಮ ನಡುವೆ ಇದ್ದಾರೆ ಅನ್ನೋದು ಅಷ್ಟೆ ನಿಜ.. ಇದೆಲ್ಲ ಬಿಡಿ.. ಹಣ ಕಂಡರೆ ಹೆಣವೂ ಕೂಡ ಬಾಯಿ ಬಿಡುತ್ತೆ ಎಂಬ ಪ್ರಚಲಿತ ಮಾತೇ ಇದೆಯಲ್ಲಾ!!!.. ನಾಲ್ಕು ಕೋಟಿ ರೂಪಾಯಿ ವಿಮೆಗಾಗಿ ಸ್ನೇಹಿತನನ್ನೇ ಕೊಲೆಗೈದ ಘಟನೆ ನಾಸಿಕ್‌ನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ, ನಕಲಿ ಮಹಿಳೆಯನ್ನು ಕರೆತಂದು ಆಕೆಯೆ ಮೃತ ವ್ಯಕ್ತಿಯಪತ್ನಿ ಎಂದು ಬಿಂಬಿಸಲಾಗಿದೆ.

ಹಣದ ವ್ಯಾಮೋಹ ಕೆಲವೊಮ್ಮೆ ಜನರನ್ನು ಹೇಯ ಕೃತ್ಯ ಮಾಡಲು ಪ್ರೇರೇಪಿಸುತ್ತದೆ. ಇದೇ ರೀತಿ ಮಸ್ನಾಸಿಕ್(ಮಹಾರಾಷ್ಟ್ರ) ದಲ್ಲಿ ಹಣ ಪಡೆಯುವ ಸಲುವಾಗಿ ಪ್ಲಾನ್ ಮಾಡಿ ನಕಲಿ ಅಪಘಾತ ಆದಂತೆ ಸೃಷ್ಟಿ ಮಾಡಿ ವ್ಯಕ್ತಿಯ ನಾಲ್ಕು ಕೋಟಿ ರೂಪಾಯಿ ವಿಮೆ ಪಡೆಯಲು ಹುನ್ನಾರ ನಡೆಸಿದ್ದು, ಹಣವನ್ನು ಸ್ನೇಹಿತರು ಪಡೆದು ವಂಚಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ.

2019ರಲ್ಲಿ ಮೃತ ಅಶೋಕ್ ಭಲೇರಾವ್ ಮತ್ತು ಶಂಕಿತ ಸ್ನೇಹಿತರು ಒಟ್ಟಾಗಿ ಸೇರಿ ಹಣವನ್ನು ಪಡೆಯಲು ಯೋಜನೆ ರೂಪಿಸಿದ್ದರು. ಎಲ್ಲರೂ ಸೇರಿ ಅಶೋಕ್​ ಹೆಸರಿನಲ್ಲಿದ್ದ 4 ಕೋಟಿ ರೂ ಪಡೆಯುವ ನಿಮಿತ್ತ ಅಪರಿಚಿತ ವ್ಯಕ್ತಿಯನ್ನು ಕೊಂದು ಅಶೋಕ್​ ಎಂದು ಬಿಂಬಿಸಲು ತಯಾರಿ ನಡೆಸಿದ್ದಾರೆ. ಇದಲ್ಲದೆ ಅಶೋಕ್​ ಹೆಂಡತಿ ಎಂದು ನಕಲಿ ಮಹಿಳೆಯೊಬ್ಬರ ಹೆಸರನ್ನೂ ಸರ್ಕಾರಿ ದಾಖಲೆಯಲ್ಲಿ ನಮೂದಿಸಿದ್ದಾರೆ. ಇಷ್ಟೆಲ್ಲ ಹರಸಾಹಸ ಪಟ್ಟು ಪ್ಲ್ಯಾನ್​ ಮಾಡಿದರು ಕೂಡ ಅಂದುಕೊಂಡಂತೆ ಯೋಜನೆ ರೂಪಿಸಿದ್ದು ಕಾರ್ಯ ರೂಪಕ್ಕೆ ಬಂದಿಲ್ಲ. ಆದರೆ, ಮೂರು ವರ್ಷ ಕಳೆದರೂ ಹಣ ಸಿಕ್ಕಿರಲಿಲ್ಲ. ಹೀಗಾಗಿ ಗೆಳೆಯರು ಅಶೋಕ್‌ನನ್ನೇ ಕೊಲೆ ಮಾಡಿ ಹಣ ಪಡೆದಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ರೋಹೊಕ್ಲೆ ಮಾಹಿತಿ ನೀಡಿದ್ದಾರೆ.

ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದು, ಅವರು ತಮ್ಮ ಹೆಂಡತಿ ಹೆಸರಿನಲ್ಲಿ 4 ಕೋಟಿ ರೂಪಾಯಿ ವಿಮೆ ಮಾಡಿಸಿದ್ದರು ಎಂದು ಹೇಳಿ ಸ್ನೇಹಿತರು ಹಣ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಆ ವ್ಯಕ್ತಿಗೆ ನಕಲಿ ಪತ್ನಿಯನ್ನು ಕೂಡ ಸೃಷ್ಟಿಸಿದ್ದಾರೆ. ಮೃತನ ಸಹೋದರ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದರು. ಪೊಲೀಸ್ ಠಾಣೆಗೆ ಬಂದು ಇದು ಅಪಘಾತವಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ ಅನ್ವಯ, ಸೆಪ್ಟೆಂಬರ್ 2, 2019 ರ ರಾತ್ರಿ ಇಲ್ಲಿನ ಇಂದಿರಾನಗರ ಜಾಗಿಂಗ್ ಟ್ರ್ಯಾಕ್‌ನ ರಸ್ತೆಬದಿಯ ಪೊದೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬೈಕ್ ಅಲ್ಲಿಯೇ ಪಕ್ಕದಲ್ಲಿ ಬಿದ್ದಿತ್ತು ಎನ್ನಲಾಗಿದ್ದು, ಆ ಬಳಿಕ ಪೊಲೀಸರಿಗೆ ಈ ಪ್ರಕರಣದ ಬಗ್ಗೆ ಅವಮಾನ ವ್ಯಕ್ತವಾಗಿದೆ. ಹಾಗಾಗಿ, ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡು. ಖಾಕಿ ಪಡೆ ತನಿಖೆ ನಡೆಸಿದ್ದು ಮೃತವ್ಯಕ್ತಿ ಅಶೋಕ್ ರಮೇಶ್ ಭಲೇರಾವ್ ಎಂದು ತಿಳಿದುಬಂದಿದೆ. ಪೊಲೀಸರು ಅಪರಿಚಿತ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆ ಸಂದರ್ಭ ರಚನಿ ಎಂಬ ಎಂಬ ಮಹಿಳೆಯ ಹೆಸರಿನಲ್ಲಿ ನಾಲ್ಕು ಕೋಟಿ ರೂ ವಿಮೆ ಜಮೆ ಆಗಿರುವ ವಿಷಯ ಬೆಳಕಿಗೆ ಬಂದಿದೆ.ಪೊಲೀಸರು ಶಂಕಿತ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಮಂಗೇಶ್ ಸಾವ್ಕರ್ ಸೇರಿದಂತೆ ಐವರು ಶಂಕಿತರ ಹೆಸರನ್ನು ಬಾಯಿ ಬಿಟ್ಟಿದ್ದಾಳೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿ ಅಪಘಾತ ಎಂಬ ರೀತಿ ಬಿಂಬಿಸಿದ್ದು ಅಲ್ಲದೆ ವಿಮೆಯ ಹಣ ಪಡೆದು ಎಲ್ಲ ಹಂಚಿಕೊಂಡಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಸದ್ಯ ಮುಂಬೈ ನಾಕಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗೇಶ್ ಸಾವ್ಕರ್, ರಜನಿ ಉಕೆಪ್ರಣವ್ ಸಾಲ್ವಿ ಮತ್ತು ಇತರ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.

Leave A Reply

Your email address will not be published.