5 ಮತ್ತು 8 ನೇ ಎಲ್ಲಾ ವಿದ್ಯಾರ್ಥಿಗಳೂ ಪಾಸ್ ಪಾಸ್…!! ಪೂರಕ ಪರೀಕ್ಷೆಯ ಬದಲಿಗೆ ಮತ್ತೊಂದು ವ್ಯವಸ್ಥೆ !!

5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್. ಹೌದು ಇನ್ನು ನಾನು ಪಾಸಾಗಿಲ್ಲ ಫೇಲ್ ಅನ್ನೋ ಆಗಿಲ್ಲ. ಏಕೆಂದರೆ ಈಗ ಬಂದಿರೋ ಆದೇಶದಿಂದ ಎಲ್ಲಾ‌ ವಿದ್ಯಾರ್ಥಿಗಳು ಪಾಸ್ ಪಾಸ್…

ಶಿಕ್ಷಣ ಇಲಾಖೆಯು 5ನೇ ತರಗತಿ ಮತ್ತು 8ನೇ ತರಗತಿ ಮೌಲ್ಯಂಕನ ಪರೀಕ್ಷೆಗೆ ಕೆಲ ತಿದ್ದುಪಡಿ ತಂದಿದೆ. ಇದರ ಜೊತೆಗೆ ಪೂರಕ ಪರೀಕ್ಷೆಯನ್ನು ಕೈ ಬಿಟ್ಟಿದ್ದು, ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬದಲಿಗೆ ಶಾಲಾ ಹಂತದ ಕಾರ್ಯಕ್ರಮದ ಮೂಲಕ ‘ಪರಿಹಾರ ಬೋಧನೆ’ ಕೈಗೊಳ್ಳಲು ತಿದ್ದುಪಡಿ ಮಾಡಿ ಆದೇಶ ನೀಡಲಾಗಿದೆ.


ಹಿಂದಿನ ಆದೇಶದ ಪ್ರಕಾರ ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಜೂನ್‌ ಮತ್ತು ಜುಲೈ ಅಂತ್ಯದ ವೇಳೆ ಎರಡು ಪೂರಕ ಪರೀಕ್ಷೆಗಳನ್ನು ಶಾಲಾ ಹಂತದಲ್ಲೇ ನಡೆಸಬೇಕು ಎಂದು ಸೂಚನೆ ನೀಡಲಾಗಿತ್ತು.

ಈಗಿನ ಹೊಸ ನಿಯಮಗಳ ಅನುಸಾರ ಜೂನ್, ಜುಲೈ ನಲ್ಲಿ ಶಾಲಾ ಹಂತದಲ್ಲೇ ಪರಿಹಾರ ಬೋಧನೆ ಪ್ರಕ್ರಿಯೆ ಕೈಗೊಂಡು ಕಲಿಕಾ ಸಾಮರ್ಥ್ಯ ಉತ್ತಮಪಡಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇದನ್ನು ಹೊರತುಪಡಿಸಿ,ಬೇರೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಿಂದ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ. ಶಿಕ್ಷಣ ಹಕ್ಕು ಕಾಯಿದೆ (ಆಟಿಐ) ಪ್ರಕಾರ ಎಂಟನೇ ತರಗತಿಯವರೆಗೆ ಮಕ್ಕಳನ್ನು ಅನುತೀರ್ಣ ಮಾಡುವಂತಿಲ್ಲ ಎಂಬ ನಿಯಮವಿದ್ದು, ಒಂಬತ್ತನೇ ತರಗತಿಯಲ್ಲಿ ಅನುತೀರ್ಣ ಗೊಳಿಸಲು ಅವಕಾಶವಿದೆ.

ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಹಾಗೂ 8ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 50 ಮಕ್ಕಳು ಇರುವಂತೆ ಆಯಾ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆಗಳಲ್ಲಿ ಸ್ಥಾಪಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸಕ್ತ ವರ್ಷದಲ್ಲಿ ಅರ್ಧ ಶೈಕ್ಷಣಿಕ ವರ್ಷ ಪೂರ್ಣಗೊಂಡಿದ್ದು, ಈಗಾಗಲೇ FA-1, FA-2 ಮತ್ತು SA-1 ಪರೀಕ್ಷೆಗಳು ನಡೆದು ಮೌಲ್ಯಾಂಕನವಾಗಿದ್ದು, SATS ನಲ್ಲಿ ಪ್ರಗತಿ ದಾಖಲಿಸಲಾಗಿರುತ್ತದೆ.

ಹೀಗಾಗಿ, ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಪರೀಕ್ಷೆ ನಿರ್ವಹಣೆ ನಡೆಸುವ ಬದಲಿಗೆ ಉಳಿದ ಅರ್ಧ ವರ್ಷಕ್ಕೆ ಸೀಮಿತಗೊಳಿಸಿ ಸಾಂಕೇತಿಕವಾಗಿ ನವೆಂಬರ್ -2022 ರಿಂದ ಮಾರ್ಚ್‌-2023ರ ಮೊದಲನೇ ವಾರದ ಒಳಗೆ ನಿರ್ವಹಿಸಿದ ಪಠ್ಯವಸ್ತುವನ್ನು ಆಧರಿಸಿಕೊಂಡು, ಸಂಕಲನಾತ್ಮಕ ಪರೀಕ್ಷೆ-2 ನಿರ್ವಹಿಸಲಾಗುತ್ತಿದೆ. ಈ ಕುರಿತಾಗಿ, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧತೆ ನಡೆಸಲು ಪೂರ್ವ ತಯಾರಿ ಕ್ರಮ ಕೈಗೊಳ್ಳಲು ಸೂಚಿಸಿದೆ.

Leave A Reply

Your email address will not be published.