ಸಂಭೋಗದ ಸಮಯದಲ್ಲಿ ಸಂಗಾತಿನ ಮೆಚ್ಚಿಸಲು ಗಂಡು ಹೆಣ್ಣು ಈ ಸುಳ್ಳುಗಳನ್ನು ಹೇಳುತ್ತಾರಂತೆ | ಹೌದಾ?
ಲೈಂಗಿಕ ಕ್ರಿಯೆ ಅನ್ನೋದು ಹೆಣ್ಣು ಗಂಡಿನ ಮದ್ಯೆ ನಡೆಯೋ ಅಸಹಜ ಅನುಭವ ತರುವ ಒಂದು ಕ್ರಿಯೆ. ಇದು ಮನಸ್ಸಿಗೆ ನೆಮ್ಮದಿ ನೀಡೋದರ ಜೊತೆಗೆ ಖುಷಿ, ತೃಪ್ತಿನೂ ನೀಡುತ್ತೆ. ಹೌದು ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರುತ್ತದೆ ಆಗ ಮದುವೆಯ ಜೀವನ ಆನಂದಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿ ರುವ ಉದ್ರೇಕ ಮತ್ತು ಆಸಕ್ತಿ ಇಬ್ಬರ ಮಧ್ಯೆ ಇರುವುದೇ ಇಲ್ಲ. ಅದಲ್ಲದೆ ಲೈಂಗಿಕತೆ ಸಮಯದಲ್ಲಿ ಪುರುಷರು ಹಾಗೂ ಮಹಿಳೆಯರು ತಮ್ಮ ಸಂಗಾತಿಗಳನ್ನು ಮೆಚ್ಚಿಸಲು ಕೆಲವೊಂದು ಸುಳ್ಳುಗಳನ್ನು ಹೇಳುತ್ತಾರಂತೆ.
ಲೈಂಗಿಕ ಸಂಭೋಗದ ಸಮಯದಲ್ಲಿ ಸಂಗಾತಿಯನ್ನು ಮೆಚ್ಚಿಸಲೆಂದೋ , ಅಥವಾ ನಮ್ಮ ಮುಜುಗರವನ್ನು ಮರೆಮಾಡುವ ಕಾರಣಕ್ಕೋ ಕೆಲವರು ಕೆಲವೊಂದು ಸುಳ್ಳುಗಳನ್ನು ಹೇಳುತ್ತಾರೆ. ಅಂತಹ ಹಲವಾರು ನಿದರ್ಶನಗಳಿವೆ. ಪುರುಷರು ಮತ್ತು ಮಹಿಳೆಯರು ಲೈಂಗಿಕ ಸಮಯದಲ್ಲಿ ತಮ್ಮ ಸಂಗಾತಿಗೆ ಹೇಳಿರುವ 5 ಸುಳ್ಳುಗಳು ಇಲ್ಲಿವೆ.
- ನಾವು ನಮ್ಮ ತಲೆಯಲ್ಲಿ ನಮ್ಮ ಮಾಜಿ ಇದ್ದಾಗ ಮತ್ತು ಅವರೊಂದಿಗೆ ಕಳೆದ ನೆನಪುಗಳನ್ನು ಮರುಕಳಿಸುವಾಗ, ಕೆಲವೊಮ್ಮೆ ಲೈಂಗಿಕತೆಯ ಸಮಯದಲ್ಲಿ ಅಳುತ್ತೇವೆ. ಅಂತಹ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬಳು ಲೈಂಗಿಕ ಸಮಯದಲ್ಲಿ ಅಳುತ್ತಾಳೆ ಮತ್ತು ಅವಳು ತನ್ನ ಗೆಳೆಯನಿಗೆ ತಾನು ಅವನನ್ನು ತುಂಬಾ ಪ್ರೀತಿಸುವುದಾಗಿ ಹೇಳಬೇಕಾಯಿತು. ಸತ್ಯವೆಂದರೆ ಅವಳು ಹಾಸಿಗೆಯಲ್ಲಿ ತನ್ನ ಮಾಜಿ ನೆನಪಿನಲ್ಲಿ ಕಳೆದಿದ್ದಳು.
- ಸಂಭೋಗದ ಸಮಯದಲ್ಲಿ ಉತ್ತುಂಗಕ್ಕೇರಿದಾಗ ಪ್ರತಿಯೊಬ್ಬರೂ ಪರಾಕಾಷ್ಠೆ ಹೊಂದುತ್ತಾರೆ. ಅದು ಕಾಂಡೋಮ್ ಧರಿಸಿದವರಾಗಿರಲಿ ಅಥವಾ ಕಾಂಡೋಮ್ ಧರಿಸದವರೇ ಆಗಿರಲಿ ಬಹುತೇಕ ಎಲ್ಲಾ ಪುರುಷರು ಕಾಂಡೋಮ್ನೊಂದಿಗೆ ಪರಾಕಾಷ್ಠೆಯನ್ನು ಹೊಂದಿದ್ದರೂ ಅವರು ಈ ರೀತಿ ಹೇಳುತ್ತಿದ್ದಾರೆ. ಏಕೆಂದರೆ ಅವರು ನಿಮ್ಮೊಂದಿಗೆ ಅಸುರಕ್ಷಿತ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಹಾಗಾಗಿ ನಿಮ್ಮ ಬಾಯ್ಫ್ರೆಂಡ್ ನಿಮ್ಮನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಬೀಳದಿರಿ.
- ಪುರುಷರು ಅಕ್ಷರಶಃ ಮಹಿಳೆಯ ಮೊದಲ ಅಥವಾ ಬಹಳ ಸಮಯದ ನಂತರ ಮೊದಲನೆಯ ಲೈಂಗಿಕತೆಯ ಬಗ್ಗೆ ಬಹಳ ಕುತೂಹಲದಿಂದಿರುತ್ತಾರೆ. ಸುಮಾರು 11 ತಿಂಗಳ ಹಿಂದೆ ಸೆಕ್ಸ್ ಮಾಡಿರುವುದಾಗಿ ಬಗ್ಗೆ ತನ್ನ ಗೆಳೆಯನಿಗೆ ಸುಳ್ಳು ಹೇಳಿದ್ದಾಗಿ ಮಹಿಳೆಯೊಬ್ಬಳು ತಪ್ಪೊಪ್ಪಿಕೊಂಡಿದ್ದಾಳೆ. ಆ ಸುಳ್ಳಿನಿಂದಾಗಿ ಆತ ಆಕೆಯನ್ನು ಹೂವಿನಂತೆ ನಡೆಸಿಕೊಂಡನು, ಆಕೆಯ ಜೊತೆ ನಿಧಾನವಾಗಿ, ಜಾಗರೂಕತೆಯಿಂದ ಸೆಕ್ಸ್ನ ಅನುಭವವನ್ನು ಪಡೆದನು. ಇದು ಅವಳಿಗೆ ಅತ್ಯುತ್ತಮವಾದ ಸುಳ್ಳಾಗಿತ್ತು.
- ಲೈಂಗಿಕತೆಯು ಸಾಧಾರಣವಾಗಿತ್ತು ಎಂದು ನೀವು ಹೇಳಿದರೆ ಪುರುಷರಲ್ಲಿ ಹೆಚ್ಚಿನ ಅಭದ್ರತೆ ಕಾಡುತ್ತದೆ. ಎಷ್ಟೋ ಹೆಂಗಸರು ತಾವು ಕೇಳಲು ಬಯಸಿದ್ದನ್ನು ಹೇಳಿ ಮುಗಿಸುತ್ತಾರೆ. ಆದರೆ ಲೈಂಗಿಕೆಯ ವೇಳೆ ನನಗೆ ಸಂತೃಪ್ತಿ ಆಯಿತು, ಪರಾಕಷ್ಠೆಯನ್ನು ಪಡೆದೆನು ಎಂದು ಒಬ್ಬ ಮಹಿಳೆ ತನ್ನ ಮಾಜಿಗೆ ಆಗಾಗ್ಗೆ ಸುಳ್ಳು ಹೇಳುತ್ತಿದ್ದಳು.
ಆದರೆ ವಾಸ್ತವವಾಗಿ ಲೈಂಗಿಕ ಸಮಯದಲ್ಲಿ ಅವನು ಆಕೆಯನ್ನು ಸಂತೃಪ್ತಿ ಪಡಿಸಲೇ ಇಲ್ಲ. ಆಕೆಗೆ ಪರಾಕಷ್ಠೆಯನ್ನು ನೀಡಲೇ ಇಲ್ಲ. - ಲೈಂಗಿಕತೆಯ ಸಮಯದಲ್ಲಿ ಕೆಲವು ಮಹಿಳೆಯರಿಗೆ ಸ್ಕ್ವರ್ಟ್ ನ ಅನುಭವವಾಗುತ್ತದೆ. ಇನ್ನೂ ಕೆಲವರಿಗೆ ಆದದ್ದು ಗೊತ್ತೇ ಆಗೋದಿಲ್ಲ. ಹೆಚ್ಚಿನ ಸಂದರ್ಭದಲ್ಲಿಇದು ನಿಜವಾಗಬಹುದು ಆದರೆ ಇದು ಸುಳ್ಳು ಕೂಡ ಆಗಿರಬಹುದು.
ಲೈಂಗಿಕತೆಯ ಸಮಯದಲ್ಲಿ ಆಕಸ್ಮಿಕವಾಗಿ ಸ್ವಲ್ಪ ಮೂತ್ರ ವಿಸರ್ಜನೆಯಾದ್ದರಿಂದ ತನ್ನ ಗೆಳೆಯನಿಗೆ ಸ್ವರ್ಟ್ ಆಗಿದೆ ಎಂದು ಸುಳ್ಳು ಹೇಳಬೇಕಾಯಿತು ಎಂದು ಓರ್ವ ಮಹಿಳೆ ಒಪ್ಪಿಕೊಂಡಿದ್ದಾರೆ.
ಹೀಗೆ ತನ್ನ ಸಂಗಾತಿಯಲ್ಲಿ ಕೆಲವು ಸುಳ್ಳುಗಳನ್ನು ಹೇಳಿ ತಮ್ಮ ಖುಷಿಯನ್ನು ಮತ್ತು ಬೇಸರವನ್ನು, ಅಸಾಮಾಧಾನವನ್ನು ಮರೆಮಾಚುತ್ತಾರೆ.