SBI: ಕೋಟ್ಯಾಂತರ ಎಸ್ಬಿಐ ಗ್ರಾಹಕರಿಗೆ ಇಂದಿನಿಂದ ಈ ಕೆಲಸಕ್ಕೆ ಶುಲ್ಕ ಹೆಚ್ಚಳ
ಭಾರತದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇದರಿಂದ ಕೋಟ್ಯಾಂತರ ಎಸ್ಬಿಐ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
ಹೇಳಿ ಕೇಳಿ ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ವ್ಯವಹಾರಗಳನ್ನು ನಡೆಸಲು ಬ್ಯಾಂಕ್ಗಳು ಅತ್ಯವಶ್ಯಕವಾಗಿದೆ. ಮೊಬೈಲ್ ಎಂಬ ಮಾಯಾವಿಯ ಮೂಲಕ ಕ್ಷಣ ಮಾತ್ರದಲ್ಲಿ ಕೆಲಸವನ್ನು ಸಲೀಸಾಗಿ ಮಾಡಲು ಅನುವು ಮಾಡಿಕೊಟ್ಟಿದೆ.
ಕೋಟ್ಯಾಂತರ ಎಸ್ಬಿಐ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಲಿದೆ. ಮೇ ತಿಂಗಳಿನಿಂದ ಆರ್ಬಿಐ ರೆಪೊ ದರವನ್ನು ಶೇ.2.25ರಷ್ಟು ಹೆಚ್ಚಿಸಿದೆ. ಆರ್ಬಿಐ ರೆಪೋ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಎಂಸಿಎಲ್ಆರ್ ಹೆಚ್ಚಳದ ಬಗ್ಗೆ ಸ್ಟೇಟ್ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಇತ್ತೀಚಿಗೆ ಆರ್ಬಿಐ ರೆಪೋ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದ್ದು, ಎಂಸಿಎಲ್ಆರ್ ಹೆಚ್ಚಳದ ಬಗ್ಗೆ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಗಮನಾರ್ಹವಾಗಿ ಮೇ ತಿಂಗಳಿನಿಂದ ಆರ್ಬಿಐ ರೆಪೊ ದರವನ್ನು ಶೇ.2.25ರಷ್ಟು ಹೆಚ್ಚಿಸಿದೆ.
ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀವು ಯಾವುದೇ ಸಾಲ ಸೌಲಭ್ಯವನ್ನು ಪಡೆದಿದ್ದರೆ ಇಲ್ಲವೇ ಮುಂದಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಈ ಮಾಹಿತಿ ತಿಳಿದಿರುವುದು ಅವಶ್ಯಕವಾಗಿದೆ.
ಇಂದಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದ್ದು, ಹೀಗಾಗಿ, ಎಸ್ಬಿಐ ಕೋಟ್ಯಾಂತರ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ. ಎಂಸಿಎಲ್ಆರ್ ಹೆಚ್ಚಳದಿಂದಾಗಿ ಎಸ್ಬಿಐ ಹೋಂ ಲೋನ್ ಪಡೆದಿರುವ ಗ್ರಾಹಕರು ಇಂದಿನಿಂದ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಎಸ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಅನುಸಾರ ಎಂಸಿಎಲ್ಆರ್ ಹೆಚ್ಚಳದ ವಿವರ ಹೀಗಿದೆ:
- ಒಂದರಿಂದ ಮೂರು ತಿಂಗಳ ಎಂಸಿಎಲ್ಆರ್ ಅನ್ನು 7.75% ರಿಂದ 8% ಕ್ಕೆ ಏರಿಕೆ ಮಾಡಲಾಗಿದೆ.
- ಆರು ತಿಂಗಳಿಂದ ಒಂದು ವರ್ಷದವರೆಗೆ ಎಂಸಿಎಲ್ಆರ್ ಅನ್ನು ಶೇ.8.05ರಿಂದ ಶೇ.8.30ಕ್ಕೆ ಏರಿಕೆ ಮಾಡಲಾಗಿದೆ.
- ಎರಡು ವರ್ಷದ ಎಂಸಿಎಲ್ಆರ್ ಶೇ.8.25ರಿಂದ ಶೇ.8.50ಕ್ಕೆ ಏರಿಕೆಯಾಗಿದೆ.
- ಇದೇ ವೇಳೆ, ಮೂರು ವರ್ಷಗಳ ಎಂಸಿಎಲ್ಆರ್ 8.35% ರಿಂದ 8.60% ಕ್ಕೆ ಹೆಚ್ಚಳಗೊಂಡಿದೆ.
ಎಫ್ಡಿ ದರಗಳನ್ನೂ ಹೆಚ್ಚಿಸಿರುವ ಎಸ್ಬಿಐ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿದರವನ್ನು ಏರಿಕೆ ಮಾಡಿರುವ ಜೊತೆಗೆ ಠೇವಣಿಗಳ ಬಡ್ಡಿ ದರವನ್ನು ಕೂಡ ಹೆಚ್ಚಿಸಿದೆ. ಹೊಸ ಎಸ್ಬಿಐ ಸ್ಥಿರ ಠೇವಣಿ (ಎಫ್ಡಿ) ಬಡ್ಡಿ ದರಗಳು 13 ಡಿಸೆಂಬರ್ 2022 ರಿಂದ ಜಾರಿಗೆ ಬಂದಿವೆ.
ಇತ್ತೀಚಿನ ಪರಿಷ್ಕರಣೆಯ ಬಳಿಕ, ಎಸ್ಬಿಐ ಎಫ್ಡಿ ದರಗಳು ಹೀಗಿವೆ:-
*7 ದಿನಗಳಿಂದ 45 ದಿನಗಳು – 3%
*46 ದಿನಗಳಿಂದ 179 ದಿನಗಳು – 4.5%
*180 ದಿನಗಳಿಂದ 210 ದಿನಗಳು – 5.25%
*211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – 5.50 ರಿಂದ 5.75
*1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ – 6.10 ರಿಂದ 6.75
* 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ – 6.25 ರಿಂದ 6.75
* 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ – 6.25 ರಿಂದ 6.10
* 5 ವರ್ಷಗಳು ಮತ್ತು 10 ವರ್ಷಗಳವರೆಗೆ – 6.10 ರಿಂದ 6.25 ಇದಲ್ಲದೆ ಎಸ್ಬಿಐ ಹಿರಿಯ ನಾಗರಿಕರಿಗೆ ಎಲ್ಲಾ ಅವಧಿಗಳಲ್ಲಿ ಹೆಚ್ಚುವರಿ 50 ಬಿಪಿಎಸ್ ಬಡ್ಡಿ ದರವನ್ನು ನೀಡಲಾಗುತ್ತದೆ. ಈ ಪರಿಷ್ಕೃತ ದರ SBI ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ.