Vastu Tips For 2023: ಲಕ್ಷ್ಮೀ ಆಶೀರ್ವಾದ ವರ್ಷವಿಡೀ ಬೇಕು ಎಂದಾದರೆ ನಿಮ್ಮ ಬಾತ್‌ರೂಂನಿಂದ ಈ ವಸ್ತುಗಳನ್ನು ಈಗಲೇ ತೆಗೆಯಿರಿ

ನಂಬಿಕೆಯೇ ನಮ್ಮ ಜೀವಾಳ ಮತ್ತು ಭರವಸೆಯೂ ಹೌದು. ಪ್ರಾಚೀನ ಕಾಲದಿಂದಲೂ ಭಾರತೀಯರಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಎಲ್ಲೆಡೆ ಹರಡಿದೆ. ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜವಾಗಿದೆ. ಹಾಗೆಯೇ ನಿಮ್ಮ ಮನೆಯ ಬಾತ್ ರೂಂ ಅಂದರೆ ಸ್ನಾನಗೃಹದಿಂದ ನಕಾರಾತ್ಮಕತೆಯನ್ನು ಹರಡಬಲ್ಲ ಕೆಲವು ವಸ್ತುಗಳನ್ನು ಹೊರಹಾಕುವುದರ ಮೂಲಕ ಲಕ್ಷ್ಮಿ ನೆಲೆಸಲು ಈ ಸಲಹೆಯನ್ನು ಅನುಸರಿಸುವುದು ಸೂಕ್ತವಾಗಿದೆ. ಹೊಸ ವರ್ಷದಂದು ಇದರಿಂದ ಸಂಪತ್ತಿನ ದೇವರು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ ಎಂಬುದು ವಾಸ್ತು ಪ್ರಕಾರದ ನಿಲುವಾಗಿದೆ.

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು. ಆರ್ಥಿಕ ಪ್ರಗತಿ ಆಗಬೇಕು ಎಂದು ಬಯಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಹೊಸ ವರ್ಷ ಆರಂಭವಾಗುವುದಕ್ಕೂ ಮುನ್ನ ಮೊದಲು ನಿಮ್ಮ ಮನೆಯ ಬಾತ್ ರೂಂ ಅಂದರೆ ಸ್ನಾನಗೃಹದಿಂದ ನಕಾರಾತ್ಮಕತೆಯನ್ನು ಹರಡಬಲ್ಲ ಕೆಲವು ವಸ್ತುಗಳನ್ನು ಹೊರಹಾಕುವುದು ಸೂಕ್ತ.

  • ವಾಸ್ತು ಪ್ರಕಾರ, ಮನೆಯಲ್ಲಿರುವ ಮುರಿದ ವಸ್ತುಗಳು ಕೂಡ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ನೀವು ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಬಯಸಿದರೆ ಹೊಸ ವರ್ಷ ಆರಂಭವಾಗುವ ಮೊದಲು ನಿಮ್ಮ ಮನೆಯಿಂದ ಇಂತಹ ಮುರಿದ ಗಾಜು ಅಥವಾ ಮತ್ತಿತರ ಮುರಿದ ವಸ್ತುಗಳನ್ನು ಸ್ನಾನಗೃಹದ ಅಟ್ಟದಲ್ಲಿ ಇಟ್ಟಿದ್ದರೂ ಕೂಡ ಮೊದಲು ಅದನ್ನು ಎಸೆದು ಬಿಡಿ.
  • ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಬಕೆಟ್ ಅನ್ನು ಖಾಲಿಯಾಗಿಡುವ ಅಭ್ಯಾಸ ಇರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿರುವ ಖಾಲಿ ಬಕೆಟ್ ನಕಾರಾತ್ಮಕತೆ ಜೊತೆಗೆ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಇಂದಿನಿಂದಲೇ ನಿಮ್ಮ ಮನೆಯ ಬಾತ್ ರೂಂನಲ್ಲಿ ಖಾಲಿ ಬಕೆಟ್ ಇಡುವುದನ್ನು ತಪ್ಪಿಸಿ.
  • ಸಾಮಾನ್ಯವಾಗಿ ಸ್ನಾನಗೃಹದಲ್ಲಿ ನೀರಿನ ಟ್ಯಾಪ್ ಸೋರುವುದನ್ನು ಕಾಣಬಹುದು. ಇದು ಟ್ಯಾಪ್ ದೋಷದಿಂದ ಆದರೂ ಸದಾ ಮನೆಯಲ್ಲಿ ನೀರು ತೊಟ್ಟಿಕ್ಕುವುದರಿಂದ ವಾಸ್ತು ದೋಷಕ್ಕೆ ಕಾರಣವಾಗಬಹುದು. ಹಾಗಾಗಿ, ನಿಮ್ಮ ಮನೆಯಲ್ಲಿಯೂ ಈ ಸಮಸ್ಯೆ ಇದ್ದರೆ ಮೊದಲು ಅದನ್ನು ಸರಿಪಡಿಸಿ.
  • ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಸದಾ ಒದ್ದೆ ಬಟ್ಟೆಗಳನ್ನು ಇಡುವುದನ್ನೂ ಕೂಡ ನಿಷೇಧಿಸಲಾಗಿದೆ. ಕಾರಣ, ಸದಾ ಮೂಲೆಯಲ್ಲಿಡುವ ಒದ್ದೆ ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ನೀವೂ ಸಹ ಮನೆಯ ಬಾತ್ ರೂಂನಲ್ಲಿ ಒದ್ದೆ ಬಟ್ಟೆಗಳನ್ನು ಇಡುವ ಅಭ್ಯಾಸ ಹೊಂದಿದ್ದರೆ ಇಂದೇ ಈ ಅಭ್ಯಾಸವನ್ನು ಬಿಡಿ.

Leave A Reply

Your email address will not be published.