ದಾಳಿಂಬೆ ಹಣ್ಣು ತಿಂದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು
ಹಣ್ಣುಗಳಲ್ಲಿ ಹಲವಾರು ವಿಧಗಳಿವೆ. ಆದರೆ ಕೆಲವು ಹಣ್ಣುಗಳು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯವಾಗಿ ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ವಿಟಮಿನ್‌ನ ಕೊರತೆ ಇರುವುದಿಲ್ಲ. ಪುರುಷರಿಗೆ ಹಾಗೂ ಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ಬಹಳ ಬೇಗನೆ ಸರಿಪಡಿಸುತ್ತದೆ. ಮತ್ತು ರೋಗಗಳ ಅಪಾಯವೂ ಕಡಿಮೆ ಆಗುತ್ತದೆ. ಆದರೆ ದಾಳಿಂಬೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಇತರ ಹಣ್ಣುಗಳಿಗಿಂತ ಸ್ವಲ್ಪ ಹೆಚ್ಚಿದೆ, ಆದರೆ ಅವುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದಲ್ಲದೆ ಇದು ಎಲ್ಲಾ ವಯಸ್ಸಿನವರಿಗೂ ತುಂಬಾ ಪ್ರಯೋಜನಕಾರಿಯಾಗುತ್ತದೆ.
ನಮಗೆ ನೈಸರ್ಗಿಕವಾದ ರೂಪದಲ್ಲಿ ಸಿಗುವ ಹಲವಾರು ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ.
- ಅಧ್ಯಯನ ಪ್ರಕಾರ ದಾಳಿಂಬೆ ಹಣ್ಣು ಪುರುಷರಿಗೆ ಹಾಗೂ ಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ಬಹಳ ಬೇಗನೆ ಸರಿಪಡಿಸುತ್ತದೆ ಎಂದು ತಿಳಿದು ಬಂದಿದೆ.
- ಅದಲ್ಲದೆ ದಾಳಿಂಬೆ ಹಣ್ಣು ತಿನ್ನುವುದರಿಂದ ಪುರುಷರಿಗೆ ಹಾಗೂ ಮಹಿಳೆಯರಿಗೆ ದೇಹದಲ್ಲಿ ರಕ್ತ ಸಂಚಾರ ಅಧಿಕವಾಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಗರ್ಭಕೋಶದ ಭಾಗದಲ್ಲಿ ಅಲ್ಲಿನ ಮಾಂಸ ಖಂಡಗಳು ಸದೃಢಗೊಳ್ಳುತ್ತವೆ. ಇದರಿಂದ ಅಬಾರ್ಷನ್ ಆಗುವುದು ತಪ್ಪುತ್ತದೆ. ದೇಹದ ಫಲವತ್ತತೆ ಜೊತೆಗೆ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಇದರಿಂದ ಸಾಧ್ಯವಾಗುತ್ತದೆ. ಆದರೆ ಸಂಶೋಧಕರು ಹೇಳುವಂತೆ ಮಿತ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡಬೇಕು, ಇಲ್ಲದಿದ್ದರೆ ಆರೋಗ್ಯದ ಅಡ್ಡ ಪರಿಣಾಮಗಳು ಎದುರಾಗುವ ಸಾಧ್ಯತೆ ಇರುತ್ತದೆ.
- ಇದರ ಜೊತೆಗೆ ಪೌಷ್ಟಿಕಾಂಶಗಳು ಹೆಚ್ಚಾಗಿರುವ ದಾಳಿಂಬೆ ಹಣ್ಣು, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ಒದಗಿಸುವ ಕಾರಣ ಆರೋಗ್ಯಕರ ಮಗುವಿನ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ. ಇದಕ್ಕಾಗಿ ಮಹಿಳೆಯರು ಪ್ರತಿದಿನ ಒಂದರಿಂದ ಎರಡು ಕಪ್ ದಾಳಿಂಬೆ ಬೀಜಗಳನ್ನು ತಿನ್ನಬಹುದು ಅಥವಾ ಒಂದು ಕಪ್ ರುಚಿಯಾದ ದಾಳಿಂಬೆ ಜ್ಯೂಸ್ ಕುಡಿಯಬಹುದು.
- ದಾಳಿಂಬೆ ಹಣ್ಣಿನ ರಸ ಮಹಿಳೆಯರು ಸೇವಿಸುವುದರಿಂದ ಅವರ ದೇಹಕ್ಕೆ ವಿಟಮಿನ್ ಸಿ, ಪಾಲಿಫಿನಾಲ್, ನೈಟ್ರಿಕ್ ಆಕ್ಸೈಡ್ ಎಲ್ಲವೂ ಸಿಗುತ್ತದೆ.
- ದಾಳಿಂಬೆ ಸೇವನೆಯಿಂದ ದೇಹದ ಎಲ್ಲಾ ಭಾಗದಲ್ಲಿ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಬಿಡುಗಡೆಯಾಗುತ್ತದೆ ಮತ್ತು ಲೈಂಗಿಕ ಜೀವನ ಸುಖಮಯವಾಗಿರುತ್ತದೆ.
- ದಾಳಿಂಬೆ ಹಣ್ಣಿನ ಜ್ಯೂಸ್ ಪುರುಷರಲ್ಲಿ ಎದುರಾಗುವ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ ಅಪಸಾಮಾನ್ಯ ನಿಮಿರುವಿಕೆ ಸಮಸ್ಯೆಯನ್ನು ದೂರಪಡಿಸುವುದು ಮಾತ್ರವಲ್ಲದೆ ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಹೆಚ್ಚು ಕಾಲ ನಿಮಿರುವಿಕೆ ಕಾಪಾಡಿಕೊಳ್ಳಲು ನೆರವಾಗುತ್ತದೆ.
- ದಾಳಿಂಬೆ ಹೃದಯದ ವಿಷಯದಲ್ಲೂ ಕೂಡ ತುಂಬಾ ಸಹಕಾರಿ. ಹೃದಯದ ಭಾಗಕ್ಕೆ ರಕ್ತ ಸಂಚಾರವನ್ನು ಅಧಿಕಗೊಳಿಸಿ ಅಥರೋಸ್ಕ್ರಿರೋಸಿಸ್ ಸಮಸ್ಯೆಯನ್ನು ಬಗೆಹರಿಸುತ್ತದೆ.
- ದಾಳಿಂಬೆ ಹಣ್ಣು ಆಗಾಗ ನಿಮ್ಮ ಆಹಾರ ಪದ್ಧತಿಯಲ್ಲಿ ಇದ್ದರೆ ಅದರಿಂದ ನಿಮ್ಮ ಕೀಲು ನೋವು, ಮೂಳೆಗಳ ತೊಂದರೆ ಕೂಡ ಸರಿ ಹೋಗುತ್ತದೆ. ಅನೀಮಿಯ ಸಮಸ್ಯೆ ಇರುವವರು ಕೂಡ ದಾಳಿಂಬೆ ಹಣ್ಣು ತಿನ್ನಬಹುದು ಮತ್ತು ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
- ಅಧ್ಯಯನ ಪ್ರಕಾರ ಪುರುಷರು ಪ್ರತಿ ದಿನ ಒಂದು ಕಪ್ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುತ್ತಾ ಬಂದರೆ ಕ್ರಮೇಣವಾಗಿ ತಮ್ಮ ಲೈಂಗಿಕ ಸಮಸ್ಯೆಗಳನ್ನು ಸುಲಭವಾಗಿ ಮ್ಯಾನೇಜ್ ಮಾಡಬಹುದು.
- ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಶಿಶ್ನದ ಭಾಗದಲ್ಲಿ ರಕ್ತನಾಳಗಳ ಕಡೆ ಹೆಚ್ಚು ರಕ್ತ ಸಂಚಾರ ಉಂಟಾಗುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ಮಾನಸಿಕ ಒತ್ತಡವನ್ನು ಸಹ ನಿವಾರಣೆ ಮಾಡುತ್ತದೆ. ಆದರೆ ಮಾನಸಿಕ ಒತ್ತಡ ಎನ್ನುವುದು ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.
ಹೌದು ದಾಳಿಂಬೆ ಸೇವನೆಯಿಂದ ಈ ಮೇಲಿನಂತೆ ಹಲವಾರು ಪ್ರಯೋಜನಗಳಿವೆ.