ಚಳಿಗಾಲದಲ್ಲಿ ನೀವು ನಿಮ್ಮ ಬೆಕ್ಕನ್ನು ಹೀಗೆ ಕೇರ್ ಮಾಡಿ!
ಚಳಿಗಾಲ ಬಂದೇ ಬಿಡ್ತು. ನಾವು ನಮ್ಮ ಹೆಲ್ತ್ ಬಗ್ಗೆ ಎಷ್ಟು ಕೇರ್ ಮಾಡ್ತಿವೋ, ಅದೇ ರೀತಿಯಾಗಿ ನಾವು ಸಾಕು ಪ್ರಾಣಿಗಳ ಬಗ್ಗೆಯೂ ಕೇರ್ ಮಾಡಬೇಕು. ಅದ್ರಲ್ಲೂ ಅದೆಷ್ಟೋ ಜನರಿಗೆ ಬೆಕ್ಕು ಅಂದ್ರೆ ತುಂಬಾ ಪ್ರೀತಿ. ಹೀಗಾಗಿ ಈ ಚಳಿಗಾಲದಲ್ಲಿ ನಿಮ್ಮ ಮುದ್ದು ಮರಿ ಬೆಕ್ಕನ್ನು ಹೇಗೆ ನೋಡಿಕೊಳ್ಳಬೇಕು ಅಂತ ತಿಳಿಸಿಕೊಡ್ತೀವಿ ಬನ್ನಿ!
ಸಾಮಾನ್ಯವಾಗಿ ಬೆಕ್ಕಿಗೆ ಚಳಿ ಆದ್ರೆ, ಒಲೆಯ ಬಳಿ ಹೋಗಿ ಮಲಗುವುದನ್ನು ನಾವು ಕಂಡಿರುತ್ತೇವೆ. ನಾವು ಅವುಗಳನ್ನು ಹೀಗೆ ಕೂಡಾ ಆರೈಕೆ ಮಾಡಬಹುದು.
ಅವುಗಳಿಗೆ ಏನಾದ್ರೂ ಹುಷಾರಿಲ್ಲ ಅಂದ್ರೆ ಸಪ್ಪೆಗೆ ಇರುತ್ತವೆ. ಊಟ, ತಿಂಡಿ , ಹಾಲು ಏನೂ ತಿನ್ನುವುದು ಅಥವಾ ಕುಡಿಯುವುದಿಲ್ಲ. ಹೀಗಾಗಿ ಇವುಗಳನ್ನು ನಿಮ್ಮ ಎದೆಯ ಮೇಲೆ ಮಲಗಿಸಿಕೊಳ್ಳಿ ಅದರ ತಲೆಯನ್ನು ಸವರ ಬೇಕು. ಅವುಗಳು ಗುರ್ ಗುರ್ ಅಂತ ಶಬ್ದ ಮಾಡ್ತಾ ಇದೆ ಅಂದ್ರೆ, ನೀವು ಮಾಡುವ ಕ್ರಿಯೆ ಅವುಗಳಿಗೆ ಇಷ್ಟ ಆಗ್ತಿದೆ ಅಂತ ಅರ್ಥ.
ಇವುಗಳಿಗೆ ತಣ್ಣಗಿನ ಹಾಲನ್ನು ಕೊಡಬೇಡಿ. ಅಂದ್ರೆ ಉಗುರು ಬೆಚ್ಚಗಿನ ಹಾಲನ್ನು ಕುಡಿಯಲು ಕೊಡಿ. ಇದರಿಂದ ಬೆಕ್ಕುಗಳು ಅನಾರೋಗಗಳಿಗೆ ತುತ್ತಗುವುದನ್ನು ತಪ್ಪಿಸಬಹುದು.
ಒಂದೆರಡು ದಿನಗಳ ನಂತರವೂ ಕೂಡ ನಿಮ್ಮ ಬೆಕ್ಕಿನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದೇ ಇದ್ದರೆ, ನೀವು ವೈದ್ಯರ ಬಳಿ ಬೆಕ್ಕನ್ನು ಕರೆದುಕೊಂಡು ಹೋಗಬೇಕು. ಏಕೆಂದರೆ ಅವರ ಅನುಭವದ ಮೂಲಕ ಬೆಕ್ಕಿನ ರೋಗಲಕ್ಷಣಗಳನ್ನು ಗಮನಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಒದಗಿಸುತ್ತಾರೆ.
ಮನೆಯಲ್ಲಿ ಕೊಡಲು ಔಷಧಿಗಳನ್ನು ಬರೆದುಕೊಡಬಹುದು. ಆದರೆ ಬೆಕ್ಕಿಗೆ ಔಷಧಿ ನೀಡುವುದು ನಿಮ್ಮಿಂದ ಸ್ವಲ್ಪ ಕಷ್ಟ ಆಗುತ್ತದೆ ನಿಜ. ಆದರೂ ಕೂಡ ಸರಿಯಾದ ಸಮಯ ನೋಡಿಕೊಂಡು ಬೆಕ್ಕಿನ ಆಹಾರದಲ್ಲಿ ಔಷಧಿ ಮಿಕ್ಸ್ ಮಾಡಿ ತಿನ್ನಲು ಕೊಡಿ ಮತ್ತು ನಿಮ್ಮ ಬೆಕ್ಕು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ.
ಹೀಗೆ ಸಣ್ಣ ಪುಟ್ಟ ಕಾಳಜಿಗಳನ್ನು ಬೆಕ್ಕುಗಳಿಗೆ ವಹಿಸಿದರು ಸಾಕು. ಆರಾಮದಾಯಕವಾಗಿ ಇರುತ್ತವೆ.