Gas Cylinder Booking: ಹೊಸ ವರ್ಷಕ್ಕಿಂತ ಮೊದಲೇ ಗ್ರಾಹಕರಿಗೆ ಸಿಹಿ ಸುದ್ದಿ | ಕಡಿಮೆ ಬೆಲೆಯಲ್ಲಿ ಬುಕ್ ಮಾಡಿ ಗ್ಯಾಸ್ ಸಿಲಿಂಡರ್ | ಹೇಗೆಂದು ಇಲ್ಲಿದೆ ವಿವರ
ಇನ್ನೇನು ಹೊಸವರ್ಷ ಬಂದೇ ಬಿಟ್ಟಿತು. ಅದಕ್ಕೂ ಮೊದಲು ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಅದೇನೆಂದರೆ, ಗಗನಕ್ಕೇರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಗಳ ಮಧ್ಯೆ, ನೀವು 1000 ರೂ. ಅಗ್ಗದ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದಾಗಿದೆ. ಎಲ್ಲಿ? ಹೇಗೆ? ಎಂಬ ಯೋಚನೆಯೇ?? ಹೇಗೆಂದರೆ, ಸಿಲಿಂಡರ್ ಖರೀದಿಯಲ್ಲಿ 1000ರೂ. ರಿಯಾಯಿತಿ ಪಡೆಯಲು ನೀವು ಪೇಟಿಎಂ ಮೂಲಕವೇ ಸಿಲಿಂಡರ್ ಬುಕಿಂಗ್ ಮಾಡಬೇಕಾಗುತ್ತದೆ.
ನೀವು ಪೇಟಿಎಂ ಅಪ್ಲಿಕೇಶನ್ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ 1000ರೂ. ವರೆಗೆ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆಯಂತೆ. ಆದರೆ ಇದಕ್ಕೆ ಕೆಲವು ಹಂತಗಳಿವೆ ಅವುಗಳನ್ನು ಅಗತ್ಯವಾಗಿ ಅನುಸರಿಸಬೇಕಿದೆ.
ಇನ್ನೂ, ಪೇಟಿಎಂ ಗ್ರಾಹಕರಿಗೆ ಇದೀಗ ನಾಲ್ಕು ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಾಗಲಿದೆ. ಇದರಲ್ಲಿ ಗ್ರಾಹಕರು ಐದು ರೂಪಾಯಿಯಿಂದ 1000 ರೂ.ವರೆಗಿನ ಭರ್ಜರಿ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆಯಬಹುದಾಗಿದೆ. ಇದಕ್ಕೆ GAS1000 ಎಂಬ ಪ್ರೋಮೋ ಕೋಡ್ ಅನ್ನು ಬಳಸಬೇಕಿದೆ. ಹಾಗೇ ಇದರಲ್ಲಿ ಗ್ರಾಹಕರು ಕನಿಷ್ಠ 5 ರೂ. ಮತ್ತು ಗರಿಷ್ಠ 1000 ರೂ. ವರೆಗೆ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಇನ್ನೂ ಗ್ಯಾಸ್ ಸಿಲಿಂಡರ್‌ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಪೇಟಿಎಂ ಮೂಲಕ ಸಿಲಿಂಡರ್ ಬುಕ್ ಮಾಡೋದು ಹೇಗೆ ಅನ್ನೋದರ ವಿವರ ಇಲ್ಲಿದೆ.
ಮೊದಲು ನೀವು ಪೇಟಿಎಂ ಅಪ್ಲಿಕೇಶನ್‌ಗೆ ಹೋಗಿ, ಅದರಲ್ಲಿ ಬುಕ್ ಗ್ಯಾಸ್ ಸಿಲಿಂಡರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಸಿಲಿಂಡರ್ ಬುಕ್ ಮಾಡಲು ಬಯಸುವ ಗ್ಯಾಸ್ ಪೂರೈಕೆದಾರರನ್ನು ಆಯ್ಕೆ ಮಾಡಿ, ಅಲ್ಲಿರುವ ಭಾರತ್‌ಗಾಸ್, ಎಚ್‌ಪಿ ಗ್ಯಾಸ್, ಇಂಡೇನ್ ಸಿಲಿಂಡರ್ ಇವುಗಳಲ್ಲಿ ನಿಮ್ಮ ಗ್ಯಾಸ್ ಪೂರೈಕೆದಾರ ಕಂಪನಿಯನ್ನು ಆರಿಸಿ. ನಿಮ್ಮ ಎಲ್ಪಿಜಿ ಐಡಿ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ. ಇದಾದ ಬಳಿಕ ಪ್ರೋಸೀಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಅನ್ವಯಿಸುವ ಪ್ರೊಮೊಕೋಡ್ ಅನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಲಭ್ಯವಿರುವ ಆಯ್ಕೆಗಳಲ್ಲಿ ನಿಮಗೆ ಬೇಕಾದ ಹಾಗೇ ಕೊಡುಗೆಯನ್ನು ಆರಿಸಬಹುದು. ಹಾಗೇ ಪ್ರೋಮೋ ಕೋಡ್ ಅನ್ನು ನಮೂದಿಸಿದ ನಂತರ ಪೇಮೆಂಟ್ ಮಾಡಿ ಆಗ ನಿಮಗೆ ಕ್ಯಾಶ್‌ಬ್ಯಾಕ್ ಲಭ್ಯವಾಗುತ್ತದೆ.