SHOCKING NEWS | ರೈತರೇ ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್
ರೈತ ಸಮುದಾಯಕ್ಕೆ ದೊಡ್ಡ ಶಾಕ್ ಎದುರಾಗಿದ್ದು, ಡಿಎಪಿ, ಯೂರಿಯಾ, ಪೊಟ್ಯಾಶಿಯಂ ಸೇರಿದಂತೆ ವಿವಿಧ ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆ ಕಂಡಿದೆ.ಸಂಕಷ್ಟದಲ್ಲಿಯೇ ಜೀವನ ಸವೆಸುವ ಅನ್ನದಾತನಿಗೆ ಗಾಯದ ಮೇಲೆ ಬರೆ ಹಾಕಿದಂತೆ ದಿನನಿತ್ಯದ ಪ್ರತಿ ಸಾಮಗ್ರಿಗಳ ಬೆಲೆ ಗಗಕ್ಕೇರುತ್ತಿದೆ.
ಈ ನಡುವೆ ಬೆಳೆದ ಬೆಳೆಗೆ ಸೂಕ್ತಬೆಲೆ ಕೂಡ ಕೆಲವೊಮ್ಮೆ ಸಿಗದೇ ರೈತಾಪಿ ವರ್ಗ ತೊಂದರೆ ಅನುಭವಿಸುತ್ತಿರುವ ಬೆನ್ನಲ್ಲೆ ರಸಬಗೊಬ್ಬರಗಳ ಬೆಲೆ ಏರಿಕೆ ಕೂಡ ಅನ್ನದಾತರಿಗೆ ದೊಡ್ಡ ಹೊಡೆತ ನೀಡಿದೆ ಎಂದರೆ ತಪ್ಪಾಗದು.
ಜೂನ್ ನಲ್ಲಿ ರಸಗೊಬ್ಬರ ಏರಿಕೆ ಮಾಡುವ ಬದಲಿಗೆ ಏಪ್ರಿಲ್ ನಲ್ಲಿಯೇ 50 ಕೆಜಿ ಚೀಲಕ್ಕೆ 150 ರಿಂದ 400 ರೂ.ವರೆಗೆ ಕಂಪನಿಗಳು ರಸಗೊಬ್ಬರ ಬೆಲೆ ಏರಿಕೆ ಮಾಡಿವೆ.ಪೊಟಾಷ್ 900 ನಿಂದ 1,600 ರೂ.ಗೆ ಹೆಚ್ಚಳವಾಗಿದೆ. ಎನ್.ಪಿ.ಕೆ. ಕಾಂಪ್ಲೆಕ್ಸ್ 1000 ರೂ.ನಿಂದ 1470 ರೂ., ಎಂಓಪಿ 1015 ರೂ.ನಿಂದ 1700 ರೂ, ಡಿಎಪಿ 1200 ರೂ.ನಿಂದ 1350 ರೂ. ಯೂರಿಯಾ 250 ರಿಂದ 300 ರೂ. ಗೆ ಏರಿಕೆಯಾಗಿದೆ.
ಕಾರ್ಮಿಕರ ಕೂಲಿ, ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ದರ ಏರಿಕೆಯಿಂದ ಕಂಗೆಟ್ಟಿರುವ ರೈತರಿಗೆ ಇದೀಗ ರಸಗೊಬ್ಬರ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.