Dearness Allowance: ನೌಕರರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ | ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

ಕೇಂದ್ರ ಸರ್ಕಾರ ನೌಕರರಿಗೆ ಬಿಗ್​ ಶಾಕ್​ ನೀಡಿದ್ದು, ತುಟ್ಟಿಭತ್ಯೆ ಬಾಕಿಯನ್ನು ಕೊಡುವುದರ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದ್ದು, ಇವುಗಳನ್ನು ಪಾವತಿಸುವ ಇರಾದೆ ಸರ್ಕಾರಕ್ಕಿಲ್ಲ ಎಂದು ಹೇಳಿ ನೌಕರರಿಗೆ ನಿರಾಸೆ ಮೂಡಿಸಿದೆ.

 

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು. ಕೇಂದ್ರದ ಈ ಪ್ರವೃತ್ತಿಯನ್ನು ಗಮನಿಸಿದರೆ, ಕೇಂದ್ರ ಸರಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಮಾರ್ಚ್ 2023 ರಲ್ಲಿ ಪಡೆಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ, ಕೆಂದ್ರ ನೌಕರರಿಗೆ ಈ ಕುರಿತು ಸ್ಪಷ್ಟನೆ ನೀಡಿದೆ.

ಕೇಂದ್ರ ಹಣಕಾಸು ಸಚಿವಾಲಯ ಇತ್ತೀಚೆಗೆ ತುಟ್ಟಿಭತ್ಯೆ ಕುರಿತ ಬಹುಕಾಲದ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದು,ಕೇಂದ್ರ ಸರ್ಕಾರ ನೌಕರರಿಗೆ ಭಾರೀ ಶಾಕ್ ನೀಡಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಸ್ಥಗಿತಗೊಳಿಸಿರುವುದು ತಿಳಿದಿರುವ ವಿಚಾರವೇ!! ಆದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಡಿಎ ಹೆಚ್ಚಳ ಮಾಡಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ನೌಕರರಿಗೆ ನಿರಾಶೆ ಮೂಡಿಸಿದ್ದು ಕೇಂದ್ರ ಸರ್ಕಾರ 18 ತಿಂಗಳ ತುಟ್ಟಿಭತ್ಯೆ ಬಾಕಿ ಪಾವತಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಂದರೆ, ನೌಕರರು ಇನ್ನು ಮುಂದೆ ಈ ಡಿಎ ಪಡೆಯುವುದಿಲ್ಲ ಎನ್ನಲಾಗಿದೆ. ಕೊರೋನಾ ಸಮಯದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಉಳಿದಿರುವ ತುಟ್ಟಿಭತ್ಯೆ ಪಾವತಿಸುವ ಬಗ್ಗೆ ನಮಗೆ ಕಾಳಜಿ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಇದೊಂದು ಕಹಿ ಸುದ್ದಿಯಾಗಿ ಪರಿಣಮಿಸಿದೆ.

ಜನವರಿ 1, 2020 ರಿಂದ ಜೂನ್ 30, 2021 ರವರೆಗೆ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಬಾಕಿ ಇದೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಡಿಎಯನ್ನು ಸ್ಥಗಿತಗೊಳಿಸಲಾಗಿದ್ದು, ಈ ಪರಿಸ್ಥಿತಿ ಮತ್ತೆ ಕೂಡ ಹದಗೆಟ್ಟ ಬಳಿಕ, ಈ ಡಿಎ ಬಾಕಿ ನೌಕರರಿಗೆ ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ನೌಕರರಿಗೆ ಈ 18 ತಿಂಗಳ ಡಿಎ ಬಾಕಿ ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ನರೇನ್ ಭಾಯ್ ಜೈ ರಾವತ್ ಅವರು ರಾಜ್ಯಸಭೆಯಲ್ಲಿ ಡಿಎ ಬಾಕಿ ಕುರಿತು ಕೇಂದ್ರವನ್ನು ಪ್ರಶ್ನಿಸಿದ್ದಾರೆ. ನೌಕರರಿಗೆ 18 ತಿಂಗಳ ಬಾಕಿಯನ್ನು ಡಿಎ ಪಾವತಿಸುತ್ತದೆಯೇ? ಎಂಬ ಪ್ರಶ್ನೆ ಕೇಳಿದ್ದು, ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇದಕ್ಕೆ ಉತ್ತರಿಸಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 18 ತಿಂಗಳ ತುಟ್ಟಿಭತ್ಯೆ ಬಾಕಿ ಪಾವತಿಸಲು ಪ್ರಸ್ತಾವನೆಗಳು ಬಂದಿರುವ ಕುರಿತು ಮಾಹಿತಿ ನೀಡಿದ್ದಾರೆ.

2020-21 ರ ಆರ್ಥಿಕ ವರ್ಷದ ನಂತರವೂ ಪರಿಸ್ಥಿತಿ ಭೀಕರವಾಗಿದೆ ಎಂದು ಹೇಳಿದ್ದು, ಹಾಗಾಗಿ ತುಟ್ಟಿಭತ್ಯೆ ಬಾಕಿ ಪಾವತಿಸುವ ಉದ್ದೇಶ ಸರಕಾರಕ್ಕಿಲ್ಲ ಎಂದು ಹೇಳಿದ್ದು ಜೊತೆಗೆ ಈ ಪ್ರಸ್ತಾವನೆಯನ್ನು ಪರಿಗಣಿಸಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸಬೇಕು. ಆರು ತಿಂಗಳಿಗೊಮ್ಮೆ ಡಿಎ ಹೆಚ್ಚಿಸಲಾಗುತ್ತದೆ. ಅದಕ್ಕಾಗಿಯೇ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ಡಿಎಯನ್ನು ಹೆಚ್ಚಿಸುತ್ತಿದೆ. ಆದರೆ ಕೊರೋನಾ ಸಮಯದಲ್ಲಿ ತುಟ್ಟಿಭತ್ಯೆ ಹೆಚ್ಚಿಲ್ಲ. ಮೂರು ಬಾರಿ ಸ್ಥಿರವಾಗಿ ಉಳಿದಿದೆ. ಹೀಗಾಗಿಯೇ, ನೌಕರರು ಮೂರು ಬಾರಿ (18 ತಿಂಗಳು) ಬಾಕಿ ಪಾವತಿಸಲು ಬಯಸುತ್ತಿದ್ದು, ಆದರೆ ಇದೀಗ ಕೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಡಿಎ ಬಾಕಿಯು ನೌಕರರಿಗೆ ಹೋಗುವುದಿಲ್ಲ ಎಂದು ಹೇಳಿದ್ದು, ಕೇಂದ್ರದ ಈ ಸ್ಪಷ್ಟನೆಯಿಂದ ಕೇಂದ್ರ ನೌಕರರಿಗೆ ನಿರಾಶೆಯಾಗಿದೆ.

Leave A Reply

Your email address will not be published.