ಮಹಿಳೆಯರ ಪಿರಿಯಡ್ ಪೇನ್ ನಿವಾರಣೆಯಲ್ಲಿ ಮೆಂತ್ಯ ಕಾಳುಗಳ ಪಾತ್ರ ತಿಳಿಯಿರಿ
ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮುಟ್ಟು ಆಗುವುದು ಸಹಜ. ಇದೊಂದು ಹೆಣ್ಣು ಮಕ್ಕಳ ಪ್ರಕೃತಿ ದತ್ತವಾದ ಕ್ರಿಯೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಟ್ಟಿನ ತೊಂದರೆ ಹೆಚ್ಚಾಗುತ್ತಿದೆ. ಅದಲ್ಲದೆ ಇಳಿ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಮುಟ್ಟು ಆಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮ ಪ್ರಮುಖ ಕಾರಣವಾಗಿದೆ. ಇದು ಹೆಣ್ಣುಮಕ್ಕಳ ಮಾಸಿಕ ಋತು ಸ್ರಾವದ ಸಮಯದಲ್ಲಿ ತಲೆನೋವು, ವಾಕರಿಕೆ, ಮೈಗ್ರೇನ್, ಮೂಡ್ ಸ್ವಿಂಗ್ಸ್, ದೇಹದ ಸೆಳೆತ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ.
ನೀವು ಹಲವಾರು ವಿಧಾನಗಳಲ್ಲಿ ಪಿರಿಯಡ್ಸ್ ಸಂದರ್ಭದಲ್ಲಿ ಬರುವ ಹೊಟ್ಟೆ ನೋವು ನಿವಾರಣೆ ಮಾಡಿಕೊಳ್ಳಬಹುದು. ಅದರಲ್ಲಿ ಸ್ತ್ರೀರೋಗ ತಜ್ಞರು ಹೇಳಿದ ಹಾಗೆ ಮೆಂತ್ಯ ಸೊಪ್ಪಿನ ಚಹಾ ಕುಡಿಯುವುದು ಕೂಡ ಒಂದು. ಬೇರೆ ಬೇರೆ ಸಂಧರ್ಭಗಳಲ್ಲಿ ಬಳಕೆಯಾಗುವ ಮೆಂತೆ ಕಾಳುಗಳನ್ನು ಪಿರಿಯಡ್ ಸಂದರ್ಭದಲ್ಲಿ ಚಹಾ ಮಾಡಿಕೊಂಡು ಬಳಸಬಹುದು.
ಮುಟ್ಟಿನ ನೋವು ನಿವಾರಣೆಗೆ ಈಗಿನ ಈಜಿಪ್ಟ್ ಮಹಿಳೆಯರು ಕೂಡ ಇದನ್ನು ಅನುಸರಿಸುತ್ತಿದ್ದಾರೆ. ಯಾವುದೇ ತರಹದ ಹೊಟ್ಟೆ ನೋವಿಗೆ ಇದು ಸುಲಭವಾಗಿ ಪರಿಹಾರವನ್ನು ಒದಗಿಸುತ್ತದೆ. ಚೀನಾ ದೇಶದಲ್ಲಿ ಇದನ್ನು ಹೊಟ್ಟೆ ನೋವು ನಿವಾರಣೆಗೆ ಹು ಲು ಬಾ ಎಂದು ಕರೆಯುತ್ತಾರೆ. ಇದು ಆಂಟಿ ಅನಾಲ್ಜಸಿಕ್ ಆಗಿದ್ದು, ಮುಟ್ಟಿನ ನೋವು ನಿವಾರಣೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಸಮತೋಲನ ಮಾಡುವ ಜೊತೆಗೆ ಮಾನಸಿಕ ಸ್ಥಿತಿಯನ್ನು ಸರಿಪಡಿಸಿ ಹೊಟ್ಟೆಯ ಸೆಳೆತವನ್ನು ಸಹ ಹೋಗಲಾಡಿಸುತ್ತದೆ ಎಂದು ವೈದ್ಯರಾದ ಡಾಕ್ಟರ್ ನೇಹಾ ಸನ್ವಲ್ಕ ಮಾಹಿತಿ ನೀಡಿದ್ದಾರೆ.
ಮೆಂತೆ ಕಾಳಿನಿಂದ ಚಹಾ ತಯಾರು ಮಾಡಿ ಕುಡಿಯುವುದು ಹೊಟ್ಟೆ ನೋವು ನಿವಾರಣೆಗೆ ಅದ್ಭುತವಾದ ಪರಿಹಾರ ಒದಗಿಸುತ್ತದೆ.
ಮೆಂತ್ಯೆ ಕಾಳುಗಳ ಚಹಾ ಮಾಡುವ ವಿಧಾನ :
- ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಮೊದಲು ನಾಲ್ಕು ಕಪ್ಪು ನೀರು ಹಾಕಿ.
- ಮೀಡಿಯಂ ಉರಿಯಲ್ಲಿ ನೀರನ್ನು ಕುದಿಸಿ.
- ಈಗ ಉರಿ ಸಣ್ಣಗೆ ಮಾಡಿ, ಇದಕ್ಕೆ ಒಂದು ಟೀ ಚಮಚ ಮೆಂತ್ಯ ಕಾಳುಗಳನ್ನು ಸೇರಿಸಿ.
- ತದನಂತರದಲ್ಲಿ ಮುಚ್ಚಳ ಮುಚ್ಚಿ ಐದು ನಿಮಿಷ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ.
- ಈಗ ನೀರು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ.
- ಇದನ್ನು ತಣ್ಣಗಾಗಲು ಬಿಡಿ.
- ನಂತರ ಈಗ ನೀರನ್ನು ಸೋಸಿಕೊಂಡು ಮೆಂತ್ಯ ಕಾಳುಗಳನ್ನು ತೆಗೆದುಹಾಕಿ. ಈ ನೀರನ್ನು ನೀವು ಕುಡಿಯುವ ವಾಟರ್ ಬಾಟಲ್ ನಲ್ಲಿ ಹಾಕಿಕೊಂಡು ಇಡೀ ದಿನ ಆಗಾಗ ಕುಡಿಯಬಹುದು.
ಈ ಮೇಲಿನಂತೆ ಮೆಂತ್ಯೆ ಕಾಳುಗಳ ಚಹಾ ಮಾಡಿ ಕುಡಿಯುವ ಮೂಲಕ ಪಿರಿಯಡ್ಸ್ ಸಂದರ್ಭದಲ್ಲಿ ಬರುವ ಹೊಟ್ಟೆ ನೋವು ನಿವಾರಣೆ ಮಾಡಿಕೊಳ್ಳಬಹುದಾಗಿದೆ.