ಈ 13 ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರೇ ನಿಮಗೆ ಬಂದಿದೆ ಆರ್ಬಿಐನಿಂದ ಮಹತ್ವದ ಮಾಹಿತಿ
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ವ್ಯವಹಾರಗಳನ್ನು ನಡೆಸಲು ಬ್ಯಾಂಕ್ಗಳು ಅತ್ಯವಶ್ಯಕವಾಗಿದೆ. ಮೊಬೈಲ್ ಎಂಬ ಮಾಯಾವಿಯ ಮೂಲಕ ಕ್ಷಣ ಮಾತ್ರದಲ್ಲಿ ಕೆಲಸವನ್ನು ಸಲೀಸಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಇದೀಗ, ದೇಶದ 13 ಬ್ಯಾಂಕ್ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಬ್ಯಾಂಕ್ಗಳಲ್ಲಿ ನೀವು ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಗಮನಿಸಿರಬೇಕು. ಇದು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಗ್ರಾಹಕರು ತಿಳಿದಿರುವುದು ಅವಶ್ಯಕವಾಗಿದೆ.
ಆರ್ಬಿಐ ಕೆಲವು ಬ್ಯಾಂಕ್ಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಹೌದು.. ವಿವಿಧ ನಿಯಂತ್ರಕ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಬ್ಯಾಂಕ್ ಗಳಿಗೆ 50 ಸಾವಿರ ರೂ.ನಿಂದ 4 ಲಕ್ಷ ರೂ.ವರೆಗೆ ದಂಡ ವಿಧಿಸಲಾಗಿದೆ.
ಮಹಾರಾಷ್ಟ್ರದ ಬೀಡ್ನ ವೈದ್ಯನಾಥ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಆರ್ ಬಿಐ 2.50 ಲಕ್ಷ ರೂ. ದಂಡ ವಿಧಿಸಿದೆ. ಇದಲ್ಲದೇ, ಮಹಾರಾಷ್ಟ್ರದ ಚಂದ್ರಾಪುರ ಶ್ರೀ ಕನ್ಯಕಾ ನಗರಿ ಸಹಕಾರಿ ಬ್ಯಾಂಕ್ಗೆ ಗರಿಷ್ಠ ದಂಡ ವಿಧಿಸಲಾಗಿದ್ದು, ಆರ್ಬಿಐ ಈ ಬ್ಯಾಂಕ್ಗೆ 4 ಲಕ್ಷ ರೂ. ದಂಡ ವಿಧಿಸಿದೆ. ಇದರ ಜೊತೆಗೆ ಸತಾರಾದ ವೈ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಇಂದೋರ್ ಪ್ರೀಮಿಯರ್ ಕೋ-ಆಪರೇಟಿವ್ ಬ್ಯಾಂಕ್ಗೆ ತಲಾ 2 ಲಕ್ಷ ರೂ. ದಂಡವನ್ನು ಆರ್ಬಿಐ ವಿಧಿಸಿದೆ.
ಹೀಗೆಯೇ, ಮೇಘಾಲಯದ ಪಟಾನ್ ನಗರ್ ಸಹಕಾರಿ ಬ್ಯಾಂಕ್, ಪಟಾನ್ ಮತ್ತು ತುರಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ಗೆ 1.50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.ಈ ಬ್ಯಾಂಕ್ ಗಳಲ್ಲದೆ, ಜಗದಲ್ಪುರ್ನ ನಗ್ರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಅಮರಾವತಿಯ ಜಿಜೌ ವಾಣಿಜ್ಯ ಸಹಕಾರಿ ಬ್ಯಾಂಕ್, ಕೋಲ್ಕತ್ತಾದ ಪೂರ್ವ ಮತ್ತು ಈಶಾನ್ಯ ಫ್ರಾಂಟಿಯರ್ ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್, ಛತ್ತರ್ಪುರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, ರಾಯ್ಗಢದ ನಾಗರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಬಿಲಾಸ್ಪುರ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ಮತ್ತು ಶಾಹದೋಲ್ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳಿಗು ಕೂಡ ಭಾರೀ ದಂಡ ವಿಧಿಸಲಾಗಿದೆ.
ವಿವಿಧ ನಿಯಂತ್ರಕ ಅನುಸರಣೆಗಳ ಕೊರತೆ ಈ ಎಲ್ಲಾ ಬ್ಯಾಂಕ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವೆಂದು ಆರ್ ಬಿಐ ಹೇಳಿದೆ. ಇದರ ಜೊತೆಗೆ ಗ್ರಾಹಕರೊಂದಿಗೆ ನಡೆಸಿದ ವಹಿವಾಟಿಗೂ ಈ ದಂಡಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಆರ್ಬಿಐ ಕೂಡ ಹೇಳಿದೆ.