New Ration Card : ಹೊಸ‌ ಪಡಿತರ ಚೀಟಿ ಇನ್ನು ಮುಂದೆ ಮನೆಯಲ್ಲೇ ಅರ್ಜಿ ಸಲ್ಲಿಸಬಹುದು | ಹೇಗೆಂಬ ವಿವರ ಇಲ್ಲಿದೆ

Share the Article

ರಾಜ್ಯದ ನಾಗರಿಕರಿಗೆ ಒಂದು ಭರ್ಜರಿ ಗುಡ್ ನ್ಯೂಸ್ . ರಾಜ್ಯದ ನಾಗರೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿ ( New Ration Card ) ಪಟ್ಟಿ 2022 ರಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಈಗ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು.

ಈ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗೆ ( BPL, APL Ration Card ) ಹೇಗೆ ಅರ್ಜಿ ಸಲ್ಲಿಸಬಹುದು.? ಅದಕ್ಕೆ ಬೇಕಿರುವಂತ ದಾಖಲೆಗಳು ಯಾವುದು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಅರ್ಹತೆ

  • ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಈಗಾಗಲೇ ಪಡಿತರ ಚೀಟಿ ಹೊಂದಿರದೇ ಇರೋರು ಅರ್ಜಿ ಸಲ್ಲಿಸಬಹುದು
  • ಹೊಸದಾಗಿ ಮದುವೆಯಾದ ದಂಪತಿಗಳು, ಹೊಸ ಪಡಿತರ ಚೀಟಿಗಾಗಿ ಅರ್ಜಿ ಹಾಕಬಹುದು
  • ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಎಪಿಎಲ್, ಬಿಪಿಎಲ್ ಎಂದು ನಿರ್ಧಾರ

ದಾಖಲೆಗಳು : ವೋಟರ್ ಐಡಿ, ವಯಸ್ಸಿನ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಿತ ಪ್ರಮಾಣ ಪತ್ರ

ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಹಂತ :

  • kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಬೇಕು.
  • ಈ ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಮುಖಪುಟದಲ್ಲಿನ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿ.
  • ಇದಲ್ಲದೇ https://ahara.kar.nic.in/Home/EServices ತಾಣಕ್ಕೂ ನೇರವಾಗಿ ಕ್ಲಿಕ್ ಮಾಡಬಹುದಾಗಿದೆ.
  • ಈ ಜಾಲತಾಣದಲ್ಲಿ ಕ್ಲಿಕ್ ಮಾಡಿದ ನಂತ್ರ, ನೀವು ಇ- ಪಡಿತರ ಚೀಟಿ ಆಯ್ಕೆ, ಆ ಬಳಿಕ ಕೆಳಗಡೆ ಸ್ಮಾಲ್ ಮಾಡಿದರೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ
  • ಈ ಬಳಿಕ ನೀವು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಡಿ, ಅಲ್ಲಿ ಕೇಳುವಂತ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ನಮೂದಿಸಿ.
  • ಈ ಬಳಿಕ ಅರ್ಜಿಯ ಜೊತೆಗೆ ಕೇಳುವಂತ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿ

ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಆದ್ರೆ ಪಡಿತರ ಚೀಟಿ ಬಂದ ನಂತರ, ಸಂಬಂಧ ಪಟ್ಟಂತ ಅಧಿಕಾರಿಯಿಂದ ಪಡೆಯಲು ರೂ.100 ಪಾವತಿಸಬೇಕಿದೆ.

Leave A Reply

Your email address will not be published.