ಕಾವು ಬುಶ್ರಾ ವಿದ್ಯಾಸಂಸ್ಥೆ ಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಪುತ್ತೂರು : ಬುಶ್ರಾ ವಿದ್ಯಾಸಂಸ್ಥೆ ಕಾವು ಇಲ್ಲಿನ 2022-23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಡಿಸೆಂಬರ್ 13 ರಂದು ಚಾಲನೆ ದೊರಕಿತು . ಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಹೀರಾ ಅಬ್ದುಲ್ ಖಾದರ್ ಧ್ವಜಾರೋಹಣ ಗೈದು ಮಾತನಾಡಿ ,ಕ್ರೀಡೆಯೆಂಬುದುರಲ್ಲಿ ಸೋಲು ಗೆಲುವು ಇದ್ದದ್ದೆ . ನಾವು ಸೋತರೆಂದು ಹಿಂಜರಿಯದೆ ಸೋಲನ್ನು ಸವಾಲಾಗಿರಿಸಿ ಮುಂದೆ ಪ್ರಯತ್ನ ಪಟ್ಟರೆ ಜಯಶಾಲಿಯಾಗಿ ಉತ್ತಮ ಕ್ರೀಡಾಪಟುವಾಗಿ ಹೊರಬರಲು ಸಾಧ್ಯವಿದೆ ಎಂದರು.
ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬುಶ್ರಾ ಕ್ರೀಡಾ ಪ್ರಜ್ವಲನೆ ಗೈದು ಕ್ರೀಡಾಕೂಟಕ್ಕೆ ಶುಭಹಾರೈಸಿದರು .ಸಂಪ್ಯಪೋಲಿಸ್ ಠಾಣೆಯ ಎ ಎಸೈ ಚಂದ್ರಶೇಖರ , ಸಂಪ್ಯ ಠಾಣಾ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಕೆ ಎಂ , ಪೋಲಿಸ್ ಠಾಣೆ ಯ ಕಾನ್ಸ್ಟೇಬಲ್ ಗಳಾದ ಪ್ರಕಾಶ್ , ಲೋಕೇಶ್ , ಬುಶ್ರಾ ವಿದ್ಯಾಸಂಸ್ಥೆ ಯ ಆಡಳಿತ ಮಂಡಳಿ ನಿರ್ದೇಶಕ ಬದ್ರುದ್ದೀನ್ , ಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ಕೋಶಾಧಿಕಾರಿ ಬಶೀರ್ ಕೌಡಿಚ್ಚಾರ್ , ಬುಶ್ರಾ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಅಮರನಾಥ ಬಿ ಪಿ , ಸಂಸ್ಥೆಯ ಉಪಮುಖ್ಯೋಪಾಧ್ಯಾಯಿನಿ ದೀಪಿಕಾ ಮುಖ್ಯ ಅತಿಥಿಗಳಾಗಿದ್ದರು.
ಡಿಸೆಂಬರ್ 13ರಂದು ಚಾಲನೆ ಗೊಂಡ ಕ್ರೀಡಾಕೂಟವು ಡಿಸೆಂಬರ್ 14 ರಂದು ಸಮಾಪನ ಗೊಳ್ಳಲಿದ್ದು ,ಆ ಬಳಿಕ ಡಿಸೆಂಬರ್ 15 ರಂದು ಸಂಸ್ಥೆಯ ಹೆತ್ತವರಿಗೆ ಹಾಗೂ ಪೋಷಕರಿಗಾಗಿ ಕ್ರೀಡಾ ಕೂಟ ವಿವಿಧ ಸ್ಪರ್ಧೆ ಗಳು ನಡೆಯಲಿದೆ.
ಸಂಸ್ಥೆಯ ಮುಖ್ಯ ಗುರು ಅಮರನಾಥ ಬಿ ಪಿ ಸ್ವಾಗತಿಸಿ , ಸಂಸ್ಥೆಯ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಎಲ್ಲಾ ಭೋದಕ ಹಾಗೂ ಭೋದಕೇತರ ವೃಂದದವರು ಸಹಕರಿಸಿದರು.