Jio Plans Under Rs.100 : ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ | ಇಲ್ನೋಡಿ ಬಿಡುಗಡೆಯಾಗೇ ಬಿಡ್ತು ಜಿಯೋದಿಂದ 100ರೂ. ಒಳಗಿನ ರೀಚಾರ್ಜ್‌ ಪ್ಲಾನ್‌ಗಳು|

Share the Article

ಟೆಲಿಕಾಂ ಕಂಪನಿಗಳಲ್ಲಿ ತನ್ನ ಛಾಪನ್ನು ಅತೀ ವೇಗದಲ್ಲಿ ಮೂಡಿಸಿದ ಹೆಗ್ಗಳಿಕೆ ಪಡೆದ ಕಂಪನಿ ಎಂದರೆ ಅದು ಜಿಯೋ ಕಂಪನಿ ಎಂದರೆ ಅತಿಶಯೋಕ್ತಿಯಲ್ಲ. ಜಿಯೋ ನೀಡುತ್ತಿರುವ ಅತಿ ಕಡಿಮೆ ರೀಚಾರ್ಜ್‌ ಪ್ಲಾನ್‌ಗಳು ಗ್ರಾಹಕರನ್ನು ಸೆಳೆಯದೇ ಇರಲು ಸಾಧ್ಯವಿಲ್ಲ. ಅಂತಹುದೇ ಒಂದು ರೀಚಾರ್ಜ್‌ ಪ್ಲಾನ್‌ನಿಂದಲೇ ಜಿಯೋ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ಪಡುತ್ತಿದೆ. ತನ್ನ ಅಗ್ಗದ ರೀಚಾರ್ಜ್‌ ಪ್ಲಾನ್‌ನಿಂದ ಎಲ್ಲರನ್ನೂ ತನ್ನತ್ತ ಸೆಳೆದಿರುವ ಜಿಯೋ ಬಿಡುಗಡೆ ಮಾಡಿದ ಅತೀ ಕಡಿಮೆ ರೀಚಾರ್ಜ್‌ ಪ್ಲಾನ್‌ಗಳು ಇಲ್ಲಿದೆ.

ಜಿಯೋ ರೂ.15 ಯೋಜನೆ: ಈ ಯೋಜನೆ ಬಹಳಷ್ಟು ಅಗತ್ಯವಾದಾಗ ಬೇಕಾಗುತ್ತದೆ. ಏಕೆಂದರೆ ಯಾವಾಗಲಾದರೂ ಮಧ್ಯದಲ್ಲಿ ಮೊದಲೇ ಇದ್ದ ಯೋಜನೆಯ ಡೇಟಾ ಖಾಲಿಯಾದರೆ ಈ 15 ರೂಪಾಯಿಯ ಯೋಜನೆಯನ್ನು ಹಾಕಿಕೊಳ್ಳಬಹುದು. ಈ ಯೋಜನೆಯನ್ನು ಒಮ್ಮೆ ರೀಚಾರ್ಜ್​ ಮಾಡಿದಾಗ 1GB ಡೇಟಾ ಸಿಗುತ್ತದೆ. ಅಲ್ಲದೆ ಈ ಯೋಜನೆಯಲ್ಲಿ ಯಾವುದೇ ಟಾಕ್ ಟೈಮ್ ಮತ್ತು ಎಸ್​ಎಮ್​​ಎಸ್​ ಪ್ರಯೋಜನಗಳಿಲ್ಲ.

ಜಿಯೋ 75 ರೂಪಾಯಿ ಯೋಜನೆ: ಜಿಯೋನ 75 ರೂಪಾಯಿ ಯೋಜನೆಯು ಕಂಪನಿಯ ಅಗ್ಗದ ಡೇಟಾ ಮತ್ತು ಕರೆ ಮಾಡುವ ರೀಚಾರ್ಜ್ ಯೋಜನೆಯಾಗಿದೆ. ಜಿಯೋನ 75 ರೂಪಾಯಿಯ ಪ್ಲಾನ್ ಒಟ್ಟು 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯು ಕಡಿಮೆ ಡೇಟಾ ಬಳಕೆಯನ್ನು ಹೊಂದಿರುವ ಜಿಯೋ ಬಳಕೆದಾರರಿಗೆ ಆಗಿದೆ.
ಜಿಯೋ ಪರಿಚಯಿಸಿದ ನೂರು ರೂಪಾಯಿ ಒಳಗಿನ ರೀಚಾರ್ಜ್​ ಯೋಜನೆಗಳು ಇದಾಗಿದೆ. ಆದರೆ ಇದೇ ರೀತಿಯ ಆಫರ್ಸ್​ಗಳನ್ನು ಒಳಗೊಂಡ ಹಲವಾರು ಜಿಯೋ ಕಂಪನಿಯ ಯೋಜನೆಗಳಿವೆ.

Leave A Reply