ಪ್ರೀತಿಸಿದವಳಿಂದ ಮೋಸ | ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ, ಅಷ್ಟಕ್ಕೂ ಆತ ಬರೆದದ್ದಾದರೂ ಏನು ಗೊತ್ತಾ?
ಪ್ರೀತಿ ಕುರುಡು ಎಂಬ ಮಾತಿನಂತೆ ಅದೆಷ್ಟೋ ಜೋಡಿಗಳು ಪರಸ್ಪರ ಪ್ರೇಮದ ಬಲೆಯಲ್ಲಿ ಬಿದ್ದು, ಮನೆಯವರ ವಿರೋಧದ ನಡುವೆಯೇ ಮದುವೆಯಾಗಿ ಹೆತ್ತವರಿಂದಲೆ ಕೊಲೆಯಾದ ಪ್ರಕರಣಗಳು ಇವೆ. ಇಷ್ಟೇ ಅಲ್ಲದೆ, ಕಷ್ಟಗಳ ಸರಮಾಲೆಯ ನಡುವೆ ಹೆತ್ತವರ , ಕುಟುಂಬದ ಮನಸ್ತಾಪದ ನಡುವೆ ಸುಖಿ ಸಂಸಾರ ನಡೆಸಿ ಮತ್ತೊಬ್ಬರಿಗೆ ಮಾದರಿಯಾದ ಪ್ರಕರಣಗಳು ಕೂಡ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಪ್ರೀತಿ.. ಪ್ರೀತಿ..ನಿನ್ನ ಆಟ ಸಾಕು ನಿಲ್ಲಿಸು…ಎಂದು ಪ್ರೇಮ ವಿರಾಗಿಯೊಬ್ಬ ತನ್ನ ಪ್ರೇಯಸಿ ಮತ್ತೊಬ್ಬರನ್ನು ಮದುವೆಯಾಗುವುದನ್ನು ಕಂಡು 17 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಪ್ರೀತಿಯ ಪಾರಿವಾಳ..ಹಾರಿ ಹೋಯ್ತು ಗೆಳೆಯ..ಎಂದು ಎಷ್ಟೋ ಜನ ತಾನು ಬಯಸಿದ ಪ್ರೀತಿಯ ಹಕ್ಕಿ ಮತ್ತೊಬ್ಬರನ್ನು ವರಿಸಿದಾಗ ಎಣ್ಣೆಯ ದಾಸರಾಗಿ, ದಾಂಪತ್ಯ ಜೀವನದ ಮೇಲೆ ಜಿಗುಪ್ಸೆ ಹೊಂದಿರುವ ಅನೇಕ ಪ್ರಕರಣಗಳನ್ನೂ ನಾವು ದಿನಂಪ್ರತಿ ನೋಡುತ್ತಲೇ ಇರುತ್ತೇವೆ.
ಪ್ರೀತಿ ಎಂಬ ಮಾಯೆಗೆ ಒಮ್ಮೆ ಬಿದ್ದರೆ ಸಾಕು ಮನೆ.. ಮನೆಯವರ ಗೌರವ.. ಅಷ್ಟೇ ಏಕೆ ಜಾತಿ ಕೂಡ ಕೆಲವೊಮ್ಮೆ ನಗಣ್ಯ ಎಂಬುದನ್ನು ರುಜುವಾತು ಮಾಡಿರುವ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಪ್ರೀತಿ ಎಂಬ ನಶೆ ಕೆಲವರನ್ನು ಉತ್ತಮ ಹಾದಿಯಲ್ಲಿ ಮುನ್ನಡೆಯಲು ಪ್ರೇರೇಪಿಸಿದರೆ (Love) ಮತ್ತೆ ಕೆಲವರ ಪಾಲಿಗೆ ಪ್ರೀತಿ ನರಕ ದರ್ಶನ ಮಾಡಿಸಿ ಬಿಡುತ್ತದೆ. ಅತಿಯಾದರೆ ಅಮೃತವೂ ವಿಷವೇ!! ಎಂಬಂತೆ ಪ್ರೀತಿ ಕೆಲವರ ಪಾಲಿನ ಸಾವಿನ ಕುಣಿಕೆಯಾಗಿ ಪರಿಣಮಿಸುತ್ತದೆ.
ಪ್ರೀತಿ ಎಷ್ಟು ಒಬ್ಬ ಮನುಷ್ಯನನ್ನು ಒಳ್ಳೆಯವನಂತೆ ಮಾಡಲು ಪ್ರೇರೇಪಿಸುತ್ತದೋ ಹಾಗೆಯೇ ಕೆಲವೊಮ್ಮೆ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ . ಇದಕ್ಕೆ ನಿದರ್ಶನ ಎಂಬಂತೆ ಯುವಕನೊಬ್ಬ ತನ್ನ ಪ್ರಿಯತಮೆ (Lover) ಬೇರೆ ಯುವಕನನ್ನು (Rajathan Boy) ಮದುವೆಯಾದಳು (Marriage) ಎಂಬ ಕಾರಣಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ.
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮತ್ತೊಬ್ಬನನ್ನು. ವರಿಸಿದಳು ಎಂಬ ಕಾರಣಕ್ಕೆ 17 ವರ್ಷದ ಹುಡುಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಗುರುವಾರ ರಾತ್ರಿ ಮಹಾತ್ಮ ಗಾಂಧಿ ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು, ಪ್ರೀತಿಯ ಬಲೆಯಲ್ಲಿ ಬಿದ್ದ 17 ವರ್ಷದ ಹುಡುಗನೊಬ್ಬ ಈಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದು, ಸಣ್ಣ ವಯಸ್ಸಿನಲ್ಲಿಯೇ ಪ್ರೀತಿಯ ಸುಳಿಗೆ ಸಿಲುಕಿ, ಸುಂದರ ಜೀವನ ಕಟ್ಟಿಕೊಂಡು ತನ್ನ ಕನಸಿನ ಗೋಪುರ ನನಸು ಮಾಡುವ ಬದಲಿಗೆ ಸಾವಿನ ಮನೆಗೆ ಅತಿಥಿಯಾಗಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ನೋವು ಹೇಳತೀರದು.
ಮೃತ ಬಾಲಕನನ್ನು ಕೆಲವು ದಾರಿಹೋಕರು ಯಶ್ ವ್ಯಾಸ್ ಎಂದು ಗುರುತಿಸಿದ್ದು, ಬಳಿಕ ಆತನನ್ನು ದಾರಿಹೋಕರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ಬಳಿಕ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರಕ್ಕೆ ಕರೆದೊಯ್ಯಲಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಬಾಲಕ ಮೃತಪಟ್ಟಿದ್ದಾನೆ ಎಂದು ಸರ್ಕಲ್ ಆಫೀಸರ್ (ಭಿಲ್ವಾರಾ ನಗರ) ನರೇಂದ್ರ ದೈಮಾ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ವೇಳೆ ಮೃತ ಬಾಲಕ ಯಶ್ ವ್ಯಾಸ್ ಮತ್ತು ಬಾಲಕಿ ಇಬ್ಬರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದ್ದು, ಬಾಲಕ ಸಾಯುವ ಮುನ್ನ ತನ್ನ ಗೆಳತಿ ಮದುವೆಯಾಗುತ್ತಿರುವ ವಿಚಾರವಾಗಿ ಅಸಮಾಧಾನಗೊಂಡು ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಎಂಬುದು ತಿಳಿದು ಬಂದಿದೆ.
ಇದೀಗ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಪ್ರೀತಿಯ ಬಲೆಯಲ್ಲಿ ಸಿಲುಕಿ ಮಗ ಮೃತಪಟ್ಟಿದ್ದು ಕಂಡು ಹೆತ್ತವರು ಕಂಬನಿ ಮಿಡಿದಿದ್ದಾರೆ.ಏನೇ ಆಗಲಿ.. ಬದುಕಿ ಬಾಳಬೇಕಿದ್ದ ಜೀವ ಸಾವಿನ ದವಡೆಗೆ ಸಿಲುಕಿದ್ದು ವಿಷಾದನೀಯ.