ಹೊಸ BPL ಕಾರ್ಡ್ ನ್ನು ಡೌನ್ಲೋಡ್ ಈ ರೀತಿ ಮಾಡಿಕೊಳ್ಳಿ !
ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದ್ದು, ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ.
ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿಯವರೆಗೆ ಸಿಗದೇ ಇದ್ದವರಿಗಾಗಿ ತಮಗೆ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ ಅನ್ನುವವರಿಗೆ ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ ನೀಡಿ ಸ್ಪಂದನೆ ದೊರೆತಿದೆ. ಅರ್ಜಿ ಸಲ್ಲಿಸಿದವರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಿಸಲು ಹೊಸದಾಗಿ ಅನುಮೋದನೆ ನೀಡಲಾಗಿದೆ.
ಹಾಗಾದರೆ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
2017 – 18 ನೇ ಸಾಲಿನಿಂದ ಪಡಿತರ ಚೀಟಿಗಾಗಿ ಅರ್ಜಿ ಹಾಕಿ ಕಾಯುತ್ತಿದ್ದವರಿಗೆ ಈಗ ಸರ್ಕಾರ ಒಪ್ಪಿಗೆ ನೀಡಿದ್ದು ಆಗಸ್ಟ್ 25,2022 ರವರೆಗೆ ಪಡಿತರ ಚೀಟಿ ಕೋರಿ 2,73,662 ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಈ ಪೈಕಿ 1,55,927 ಅರ್ಹ ಕುಟುಂಬಗಳಿಗೆ ಪಡಿತರ ಚೀಟಿ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ಬಡತನ ರೇಖೆಗಿಂತ ಕೆಳಗಿರುವ ಕಡು ಬಡುವರಿಗೆ ಬಿಪಿಎಲ್ ಕಾರ್ಡ್ ನಂತಹ ಯೋಜನೆಗಳು ಅತ್ಯವಶ್ಯಕವಾಗಿದ್ದು, ಸರ್ಕಾರ ಸರಿಯಾಗಿ ಪರಿಶೀಲನೆ ನಡೆಸಿ ಕಡುಬಡವರಿಗೆ ಹಾಗೂ ಅವಶ್ಯಕತೆ ಇರುವವರಿಗೆ ಯೋಜನೆ ತಲುಪಿಸುವಂತೆ ಕೊರಲಾಗಿದೆ.
ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಸ್ಟೇಟಸ್ ಚೆಕ್ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ 3233: https://ahara.kar.nic.in ಭೇಟಿ ನೀಡಿ ಅಲ್ಲಿ ಈ ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಇಲ್ಲವೇ ನೇರವಾಗಿ https://ahara.kar.nic.in/lpg, ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿದ ನಂತರ ಈ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು.
ಬಳಿಕ, ಹೊಸ ಅಥವಾ ಹಾಲಿ ಪಡಿತರ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಒಂದು ಸೈಟ್ ಓಪನ್ ಆಗುತ್ತದೆ ಅದರಲ್ಲಿ ಮೂರು ರೀತಿ ಆಯ್ಕೆಗಳಿದ್ದು ನಿಮ್ಮ ಜಿಲ್ಲೆಯನ್ನು ಹೊಂದಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಮೊದಲ ಆಯ್ಕೆಯಾದ ಅಪ್ಲಿಕೇಶನ್ ಸ್ಟೇಟಸ್ ಆಫ್ ನ್ಯೂ ರೇಷನ್ ಕಾರ್ಡ್ ಅಫ್ ಅಥವಾ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಭಾರತೀಯ ಸ್ಥಿತಿ ಅರ್ಜಿಯ ಸ್ಥಿತಿ ಈ ಆಯ್ಕೆ ಮೇಲೆ ಕ್ಲಿಕ್ ಮಾಡಿದ ಬಳಿಕ ನಗರ ಅಥವಾ ಹಳ್ಳಿಯ ಆಯ್ಕೆ ಕೇಳಬಹುದು.
ಊರು ಗ್ರಾಮ ಪಂಚಾಯತಿ ವಿವರ ಹಾಕಿದ ಬಳಿಕ ಅಪ್ಲಿಕೇಶನ್ ನಂಬರ್ ಹಾಕಿ ಗೋ (go) ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಆರ್ತಿ ಅಪ್ಪುವಲ್(approval) ಆಗಿದ್ದರೆ ಹೊಸ ರೇಷನ್ ಕಾರ್ಡ್ ನಂಬರ್ ಬರುತ್ತದೆ. ಇಲ್ಲವಾದಲ್ಲಿ ಸ್ವಲ್ಪ ದಿನ ಕಾಯಿರಿ ಎಂದು ಮೆಸೇಜ್ ತೋರಿಸುತ್ತದೆ. ಹೀಗೆ ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಬಹುದಾಗಿದೆ.