Farmers Insurance : ಕೃಷಿಕರೇ ನಿಮಗೊಂದು ಗುಡ್ ನ್ಯೂಸ್ | ತೆಂಗು ಅಭಿವೃದ್ಧಿ ಮಂಡಳಿಯಿಂದ ಬಂತು ಹೊಸದೊಂದು ಯೋಜನೆ!!

ಕೃಷಿಕರಿಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಹೌದು ತೆಂಗು ಅಭಿವೃದ್ಧಿ ಮಂಡಳಿಯಿಂದ ಹೊಸ ಯೋಜನೆ ಒಂದನ್ನು ಜಾರಿ ಮಾಡಲಾಗಿದೆ. ತೆಂಗಿನ ಮರ ಹತ್ತುವ ವೇಳೆ ಸಂಭವಿಸುವ ಅವಘಡದಿಂದ ಸಾವನ್ನಪ್ಪಿದ್ದಲ್ಲಿ ಅಂತಹ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾದರೆ ₹1 ಲಕ್ಷ ನೆರವು ಸಿಗುತ್ತದೆ ಎಂಬ ಪ್ರಕಟಣೆ ಮಾಡಿದೆ.

 

ತೆಂಗಿನ ಮರ ಹತ್ತುವ ಕಾಯಕ ಮಾಡುತ್ತಿದ್ದರೆ. ನಿಮಗೆ ಮರ ಹತ್ತುವ ಸಂಧರ್ಭ ಅವಘಡ ಸಂಭವಿಸಿದಲ್ಲಿ ನಿಮಗೆ ತೆಂಗು ಅಭಿವೃದ್ಧಿ ಮಂಡಳಿಯು ಒಂದು ವಿಶಿಷ್ಟ ಕಾರ್ಯಕ್ರಮ ಜಾರಿಗೆ ಮುಂದಾಗಿದೆ. ಅದುವೇ ತೆಂಗಿನ ಮರ ಹತ್ತುವವರಿಗೆ ಇನ್ಶೂರೆನ್ಸ್. ಹೌದು, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಜೊತೆಗೂಡಿ ಮಂಡಳಿಯು ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ ಜಾರಿಗೆ ತಂದಿದೆ. ಇದರ ಅಡಿ ಅಪಘಾತ ಮತ್ತು ಸಾವಿಗೆ ವಿಮಾ ಪಾಲಿಸಿಯ ಗರಿಷ್ಠ ಮೊತ್ತ ಅನ್ವಯಿಸಲಿದೆ. ತೆಂಗಿನ ಮರ ಹತ್ತುವ ಕೆಲಸದಲ್ಲಿ ತೊಡಗಿಸಿಕೊಂಡಿರುವ 18 ರಿಂದ 65 ವರ್ಷ ವಯಸ್ಸಿನೊಳಗಿನವರು ಈ ವಿಮೆ ಪಡೆಯಲು ಅರ್ಹರಾಗಿರುತ್ತಾರೆ.

ವಿಮೆ ಪಾಲಿಸಿಯ ಪ್ರೀಮಿಯಂ ಮೊತ್ತವನ್ನು ಫಲಾನುಭವಿಗಳು ಆನ್ಲೈನ್ ಮೂಲಕ ಪಾವತಿಸಬಹುದು ಅಥವಾ ಕೊಕೊನಟ್ ಡೆವಲಪ್ಮೆಂಟ್ ಬೋರ್ಡ್, ಎರ್ನಾಕುಲಂ ಹೆಸರಿನಲ್ಲಿ ಡಿ.ಡಿ. ಮೂಲಕ ಪಾವತಿಸಬಹುದಾಗಿದೆ.

ತೆಂಗಿನ ಮರ ಹತ್ತುವ ವೇಳೆ ಸಂಭವಿಸುವ ಅವಘಡದಿಂದ ಸಾವನ್ನಪ್ಪಿದ್ದಲ್ಲಿ ಅಂತಹ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾದರೆ ₹1 ಲಕ್ಷ ನೆರವು ಸಿಗುತ್ತದೆ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.

ಅದಲ್ಲದೆ ಮಂಡಳಿಯು ತನ್ನ ‘ ಫ್ರೆಂಡ್ಸ್ ಆಫ್ ಕೊಕೊನಟ್ ಟ್ರಿ ‘ ಮತ್ತು ನೀರಾ ತಂತ್ರಜ್ಞ ತರಬೇತಿ ಯೋಜನೆಗಳ ಅಡಿ ತರಬೇತಿ ಪಡೆಯುತ್ತಿರುವವರಿಗೆ ಒಂದು ವರ್ಷದ ಅವಧಿಗೆ ವಿಮಾ ಸೌಲಭ್ಯವನ್ನು ಉಚಿತವಾಗಿ ಒದಗಿಸಲಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿಯು ತಿಳಿಸಿದೆ.

ಸದ್ಯ ವಿಮೆಯ ವಾರ್ಷಿಕ ಪ್ರೀಮಿಯಂ ಮೊತ್ತ ₹375. ಇದರಲ್ಲಿ ₹281 ನ್ನು ಮಂಡಳಿಯು ಪಾವತಿಸಲಿದೆ. ಹಾಗೂ ಇನ್ನುಳಿದ ₹ 94 ನ್ನು ಮಾತ್ರ ವಿಮೆ ಪಡೆಯುವವರು ಪಾವತಿಸಬೇಕು ಎಂದು ಮಾಹಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ
ಆಸಕ್ತ ಅರ್ಹ ಫಲಾನುಭವಿಗಳು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0484-2377266 ಸಂಪರ್ಕಿಸುವುದು ಅಥವಾ ವೆಬ್ ಸೈಟ್ ಲಿಂಕ್ www.coconutboard.gov.in ಮೂಲಕ ಮಾಹಿತಿ ಪಡೆಯಬಹುದಾಗಿದೆ.

ಪ್ರಸ್ತುತ ತೆಂಗು ಮರ ಹತ್ತುವ ಕಾಯಕದವರಿಗೆ ಇದು ಬಹಳ ಪ್ರಯೋಜನಕಾರಿಯಾದ ಯೋಜನೆ ಆಗಿದೆ.

Leave A Reply

Your email address will not be published.