ನನಗೆ ನಾಲ್ಕು ಮಕ್ಕಳಾಗಲು ಕಾರಣ ಕಾಂಗ್ರೆಸ್ : ಬಿಜೆಪಿ ಎಂ.ಪಿ ರವಿ ಕಿಶನ್
ಆಜ್ ತಕ್‌ನ ಮಾಧ್ಯಮ ಶೃಂಗಸಭೆಯಲ್ಲಿ ಮಾತನಾಡಿದ ರವಿ ಕಿಶನ್ ಅವರು ಒಂದು ಮಾತನ್ನು ಹೇಳಿದ್ದಾರೆ. ಅದೇನೆಂದರೆ ನನಗೆ ನಾಲ್ಕು ಮಕ್ಕಳಾಗಲು ಕಾರಣ ಕಾಂಗ್ರೆಸ್ ಎಂದು. ಈ ವಿಷಯ ಯಾಕೆ ಬಂತು ಅಂದರೆ, ಈ ಶೃಂಗಸಭೆ ನಂತರ ಸಂಸತ್ತಿನಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಮಂಡಿಸಲು ಸಿದ್ಧವಾಗಿರುವುದಾಗಿ ಹೇಳಿದರು. ಆದರೆ ತಮ್ಮ ನಾಲ್ಕು ಮಕ್ಕಳು ಇರುವುದರ ಬಗ್ಗೆ ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು “ಕಾಂಗ್ರೆಸ್ ಸರ್ಕಾರವು ಮೊದಲೇ ಮಸೂದೆಯನ್ನು ತಂದಿದ್ದರೆ, ನಾನು ನಿಲ್ಲಿಸುತ್ತಿದ್ದೆ” ಎಂದು ಹೇಳಿದರು.
“ನನಗೆ ನಾಲ್ಕು ಮಕ್ಕಳಿರುವುದು ನಿಜ. ಹಾಗೆನೇ ಮಕ್ಕಳನ್ನು ಬೆಳೆಸುವ ಕಷ್ಟ ಎಷ್ಟು ಎಂದು ನನಗೆ ಗೊತ್ತಿದೆ. ನಾನು ಸಾಕಷ್ಟು ಹೋರಾಟದ ನಂತರ ಯಶಸ್ಸನ್ನು ಪಡೆದೆ. ಆರಂಭದಲ್ಲಿ, ಕೆಲಸ ಅಥವಾ ಹಣವನ್ನು ಆಯ್ಕೆ ಮಾಡಲು ನಮಗೆ ಕೇಳಲಾಯಿತು. ಆಗ ನಾನು ಯಾವಾಗಲು ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೆ. ಏಕೆಂದರೆ ಹಣ ತಾನಾಗಿಯೇ ಬರುತ್ತದೆ ಎನ್ನುವುದು ನನಗೆ ತಿಳಿದಿತ್ತು” ಎಂದು ರವಿ ಕಿಶನ್ ಮಾತನಾಡುತ್ತಾ ಹೇಳಿದರು.
ಇನ್ನೂ ಮುಂದುವರಿದ ಅವರು, ನನ್ನ ಹೆಂಡತಿ ಎತ್ತರ ಮತ್ತು ಸ್ಲಿಮ್ ಆಗಿದ್ದಳು ಮತ್ತು ಮೊದಲ ಮತ್ತು ಎರಡನೇ ಹೆರಿಗೆಯ ನಂತರ ಅವಳ ಆರೋಗ್ಯವು ಹದಗೆಡುವುದನ್ನು ನಾನು ನೋಡಿದೆ, ಆಗ ನಾನು ಕಷ್ಟಪಡುತ್ತಿದ್ದೆ ಮತ್ತು ಶೂಟಿಂಗ್‌ನಲ್ಲಿ ಯಾವಾಗಲೂ ಬ್ಯುಸಿಯಾಗಿದ್ದೆ. ಆಗ ಮಕ್ಕಳಿಗೆ ಜನ್ಮ ನೀಡುತ್ತಲೇ ಹೋದೆ, ಆಗ ನನಗೆ ಸ್ಪಷ್ಟತೆ ಇರಲಿಲ್ಲ ಆದರೆ ಈಗ ನಾನು ಯಶಸ್ಸು ಮತ್ತು ಸಂಪತ್ತನ್ನು ಸಾಧಿಸಿದ್ದೇನೆ ಈಗ ನನ್ನ ಹೆಂಡತಿಯನ್ನು ನೋಡಿದಾಗ ನನಗೆ ವಿಷಾದವಾಗುತ್ತದೆ” ಎಂದು ರವಿ ಕಿಶನ್ ಹೇಳಿದರು. ನೀವು ಈಗ ನಾಲ್ಕು ಮಕ್ಕಳಿಗೆ ತಂದೆಯಾಗಿದ್ದಿರಾ ಮತ್ತು ಈ ಮಸೂದೆಯನ್ನು ತರಲಾಗುತ್ತಿದೆ ಎಂದು ಪತ್ರಕರ್ತೆ ಕೇಳಿದ್ದಕ್ಕೆ ಅವರು ಉತ್ತರಿಸುತ್ತಾ” ಕಾಂಗ್ರೆಸ್ ಪಕ್ಷವು ಈ ಮಸೂದೆಯನ್ನು ಮೊದಲೇ ಜಾರಿಗೆ ತಂದಿದ್ದರೆ ನಾನು ನಾಲ್ಕು ಮಕ್ಕಳಿಗೆ ಜನ್ಮ ನೀಡಲು ಹೋಗುತ್ತಿರಲಿಲ್ಲ” ಎಂದು ರವಿ ಕಿಶನ್ ಕೇಳಿದಾಗ ಸಭೆಯಲ್ಲಿದ್ದವರು ಒಂದು ಕ್ಷಣ ನಿಜಕ್ಕೂ ಆಶ್ಚರ್ಯಚಕಿತರಾಗಿದ್ದಾರೆ.
ರವಿ ಕಿಶನ್ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ನಾಯಕಿ ಸುಪ್ರಿಯಾ ಶ್ರಿನಾಟೆ ಅವರು “ಮಕ್ಕಳಿಗೆ ಜನ್ಮ ನೀಡುತ್ತಲೇ ಹೋದಿರಿ ಎನ್ನುವುದರ ಬಗ್ಗೆ ತಮಗೆ ತಿಳಿದಿರಲಿಲ್ಲವೇ! ಕನಿಷ್ಠ ಕಾಂಗ್ರೆಸ್ ಪಕ್ಷದ ಕೃಪೆಯಿಂದ ನೀವು ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ತಂದೆಯಾಗಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ. ಹಾಗೆನೇ ತಮ್ಮ ಹೆಂಡತಿಗೆ ಮಾಡಿದ ಬಾಡಿ ಶೇಮ್ ಮಾತಿಗೆ ಅವರು ಕಿಡಿ ಕಾರಿದ್ದಾರೆ.