ಸ್ನೇಹಿತರೊಂದಿಗೆ ಮಲಗಿಸಿ ಹೆಂಡತಿಯ ವೀಡಿಯೋ ಮಾಡಿದ ಗಂಡ | ನಂತರ ಹೆಂಡತಿಗೇ ಬ್ಲಾಕ್‌ಮೇಲ್‌ ಮಾಡಿದ

ನಮ್ಮ ದೇಶದ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಆದರೆ, ಹೆಂಡತಿಯನ್ನು ಗೌರವದಿಂದ ಕಾಣಬೇಕಾದ ಮಹಾಶಯನೆ ಹೆಂಡತಿಯನ್ನು ತುಚ್ಚವಾಗಿ ಕಂಡು ಆಕೆಯನ್ನು ತನ್ನ ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿ ಅಮಾನವೀಯವಾಗಿ ನಡೆದುಕೊಂಡ ಘಟನೆಯೊಂದು ಮುನ್ನಲೆಗೆ ಬಂದಿದೆ.

 

ಸಾಮಾನ್ಯವಾಗಿ ಅನುಮಾನ ಎಂಬ ಪೆಡಂಭೂತ ದಿಂದ ಅದೆಷ್ಟೋ ಜೋಡಿಗಳ ನಡುವೆ ಬಿರುಕು ಮೂಡಿ ವಿಚ್ಛೇಧನ ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ತನ್ನ ಹೆಂಡತಿ ಬೇರೆ ಗಂಡಸರ ಜೊತೆಗೆ ಕೊಂಚ ಸಲುಗೆ ಯಿಂದ ಮಾತನಾಡಿದರೆ ಸಾಕು .‌ಗಂಡ ಹೆಂಡತಿಯ ನಡುವೆ ಮನಸ್ತಾಪ ಗ್ಯಾರಂಟಿ!!! ಆದ್ರೆ, ಇಲ್ಲೊಬ್ಬ ಪಾಪಿ ಪತಿ ಹೆಂಡತಿಗೆ ತನ್ನ ಸ್ನೇಹಿತರ ಜೊತೆಗೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿ ಆ ಖಾಸಗಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಟೆಕ್ಕಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವಿಚಿತ್ರ ಕಾಮುಕ ವ್ಯಕ್ತಿಯ ನಡೆ ಅಚ್ಚರಿ ಮೂಡಿಸುತ್ತದೆ.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಥಣಿಸಂದ್ರದ ನಿವಾಸಿ 34 ವರ್ಷದ ಮಹಿಳೆ ಪತಿ ಜಾನ್ ಪಾಲ್ (36) ಜೊತೆಗೆ ಸಂಸಾರ ನಡೆಸುತ್ತಿದ್ದಳು. ಮಹಿಳೆಯು 2011ರಲ್ಲಿ ಜಾನ್‌ಪಾಲ್‌ನನ್ನು ವಿವಾಹವಾಗಿದ್ದು, ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ ಎನ್ನಲಾಗಿದೆ. ಮದುವೆಯಾದಾಗಿನಿಂದ ಜಾನ್ ಮದ್ಯಪಾನ ಮಾಡಿ ಬಂದು ಹಲ್ಲೆ ನಡೆಸಿ ಹೆಂಡತಿಗೆ ಹಿಂಸೆ ನೀಡುತ್ತಿದ್ದ . ಅಷ್ಟೆ ಅಲ್ಲದೆ, 2015ರಿಂದ ತನ್ನ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಡದ ಜೊತೆಗೆ ಒತ್ತಾಯ ಕೂಡ ಮಾಡುತ್ತಿದ್ದ ಎನ್ನಲಾಗಿದೆ.

ಇದಕ್ಕೆ ಆಕೆ ಸಮ್ಮತಿಸದೆ ಇದ್ದಾಗ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಹಿಂಸೆ ನೀಡುತ್ತಿದ್ದ. ಪತಿಯ ಹಿಂಸೆ ಸಹಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಉಂಟಾದಾಗ ಪತಿಯ ಇಬ್ಬರು ಸ್ನೇಹಿತರ ಜೊತೆಗೆ ಹಲವಾರು ಬಾರಿ ದೈಹಿಕ ಸಂಪರ್ಕ ಹೊಂದಿದ್ದಳು ಅಂತಾ ನೊಂದ ಮಹಿಳೆ ಹೇಳಿಕೊಂಡಿದ್ದಾಳೆ. ಈ ಬಳಿಕ, ಪತ್ನಿ ಸ್ನೇಹಿತರ ಜೊತೆಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಜೊತೆಗೆ ಫೋಟೊಗಳನ್ನು ಪತಿ ಜಾನ್‌ಪಾಲ್ ಪತ್ನಿಗೆ ಅರಿವಿಗೆ ಬಾರದಂತೆ ಆತನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಇತ್ತೀಚೆಗೆ ಆತ ಮಾಡುತ್ತಿರುವ ವರ್ತನೆ ಕಂಡು ಪತಿ ಯಿಂದ ದೂರ ಉಳಿದಿದ್ದಾಳೆ .

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪತ್ನಿಯ ಸಹೋದರಿ 2019ರಿಂದ ಒಟ್ಟಿಗೆ ವಾಸಿಸುತ್ತಿದ್ದಳು ಎನ್ನಲಾಗಿದ್ದು, ಪತಿಯ ಕಾಮುಕತೆಗೆ ಸಾಕ್ಷಿ ಎಂಬಂತೆ ಹೆಂಡತಿಯ ತಂಗಿಯನ್ನು ಪತಿಯ ಜೊತೆ ಮಲಗಲು ಕಳಿಸುವಂತೆ ಒತ್ತಾಯ ಹೇರುತ್ತಿದ್ದ.

ಗಂಡನ ನಡೆ ಕಂಡು ಬೇಸತ್ತ ಪತ್ನಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾಳೆ. ಪ್ರತಿ ಬಾರಿ ವಿಚ್ಛೇದನ ಕೇಳಿದಾಗ ಕೂಡ ಖಾಸಗಿ ವಿಡಿಯೋ ಮತ್ತು ಪೋಟೋಗಳನ್ನು ತೋರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.

ಡಿ.4ರಂದು ಮತ್ತೆ ವಿಚ್ಛೇದನ ಕೇಳಿದಾಗ 2 ಖಾಸಗಿ ಫೋಟೋಗಳನ್ನು ಆಕೆಯ ವಾಟ್ಸಾಪ್‌ಗೆ ಕಳುಹಿಸಿದ್ದು, ಇವುಗಳನ್ನು ಪತ್ನಿಯ ಸ್ನೇಹಿತರಿಗೆ ಜೊತೆಗೆ ಆಕೆಯ ತಂದೆ-ತಾಯಿಗೆ ರವಾನೆ ಮಾಡಿ ಗ್ರೂಪ್‌ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ .

ಹೀಗಾಗಿ, ಗಂಡನ ಬಗ್ಗೆ ದೂರು ನೀಡಲು ಮುಂದಾದ ಮಹಿಳೆ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದು, ಪತಿ ಮದ್ಯಪಾನದ ಜೊತೆಗೆ ಗಾಂಜಾ ಸೇವನೆ ಮಾಡುತ್ತಿದ್ದ ಜೊತೆಗೆ ಮನೆಯಲ್ಲಿ 2 ಪಾಟ್‌ಗಳಲ್ಲಿ ಗಾಂಜಾ ಸಸ್ಯ ಬೆಳೆಸಿದ್ದಾನೆಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ನೊಂದ ಮಹಿಳೆಯ ದೂರಿನ ಅನ್ವಯ ಖಾಕಿ ಪಡೆ ದೂರು ದಾಖಲಿಸಿಕೊಂಡು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪತ್ನಿ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ಜಾನ್ ಪಾಲ್ (36) ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Leave A Reply

Your email address will not be published.