Dog Food: ನಿಮ್ಮ ಪ್ರೀತಿಯ ನಾಯಿಗೆ ಆಹಾರ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ ? ಈ ವಿಚಾರ ನೆನಪಿನಲ್ಲಿಟ್ಟುಕೊಳ್ಳಿ

ಸಾಕು ಪ್ರಾಣಿಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟಾನೆ. ಅದರಲ್ಲೂ ನಾಯಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ನಾಯಿ ಕೂಡ ತನ್ನ ಯಜಮಾನನ್ನು ಅಷ್ಟೇ ಪ್ರೀತಿ ಮಾಡುತ್ತಾ, ಪ್ರಾಮಾಣಿಕತೆಯಿಂದ ಇರುತ್ತದೆ. ಇನ್ನೂ ನಿಮ್ಮ ಪ್ರೀತಿಯ ನಾಯಿಗೆ ಆಹಾರ ಖರೀದಿ ಮಾಡಬೇಕಾದರೆ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಖರೀದಿ ಮಾಡಬೇಕಾಗುತ್ತದೆ.

 

ನಾವು ಆರೋಗ್ಯವಾಗಿರಲು ಪೌಷ್ಟಿಕಾಂಶವುಳ್ಳ ಆಹಾರದ ಸೇವನೆ ಅಗತ್ಯವಿರುವಂತೆ, ನಮ್ಮ ಸಾಕುಪ್ರಾಣಿಗಳು ಕೂಡ ಆರೋಗ್ಯವಾಗಿ, ಸಂತೋಷವಾಗಿರಲು ಸಮತೋಲಿತ ಆಹಾರದ ಅಗತ್ಯವಿದೆ. ಹಾಗಾಗಿ ನೀವು ನಿಮ್ಮ ಪ್ರೀತಿಯ ನಾಯಿಗೆ ಖರೀದಿ ಮಾಡುವ ಆಹಾರಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಾಣಿ ವೈದ್ಯರು ಹೇಳುತ್ತಾರೆ.

ಮೊದಲು ನೀವು ಗಮನಿಸಬೇಕಾದ ವಿಷಯ ಏನೆಂದರೆ, ನಿಮ್ಮ ನಾಯಿಗೆ ಯಾವ ಆಹಾರ ಇಷ್ಟ ಎಂಬುದನ್ನು ತಿಳಿದುಕೊಂಡು, ಅಂತಹ ಆಹಾರಗಳನ್ನು ಮಾತ್ರ ಖರೀದಿಸಿ. ಕೆಲವೊಮ್ಮೆ ನೀವು ಅವುಗಳಿಗೆ ಮಾಂಸಹಾರ ನೀಡಿದರೆ ಇಷ್ಟವಾಗುವುದಿಲ್ಲ. ಇನ್ನೂ ಕೆಲವೊಮ್ಮೆ ಸಸ್ಯಾಹಾರ ಇಷ್ಟವಾಗುವುದಿಲ್ಲ. ಹಾಗಾಗಿ ನಿಮ್ಮ ನೆಚ್ಚಿನ ನಾಯಿಗೆ ತಿನ್ನಲು ಯಾವುದು ಇಷ್ಟವಿದೆಯೋ ಅದನ್ನೇ ಖರೀದಿಸಿ.

ಕೆಲವೊಂದು ಬಾರಿ ನೋಡುವಾಗ ಆಕರ್ಷಣೀಯವಾಗಿದೆ ಎಂದೆನಿಸಿ, ತುಂಬಾ ಚೆನ್ನಾಗಿದೆ ಎಂದು ಮೇಲ್ನೋಟಕ್ಕೆ ಕಂಡ ಆಹಾರಗಳನ್ನು ಆಯ್ಕೆ ಮಾಡುತ್ತೇವೆ. ಆದರೆ ಹೀಗೆ ಮಾಡಬಾರದು, ಇದು ತಪ್ಪು. ಬದಲಾಗಿ ನಾವು ಆಹಾರದಲ್ಲಿ ಇರುವ ಪೋಷಕಾಂಶಗಳನ್ನು ನೋಡಿ, ಪೋಷಕಾಂಶಯುಕ್ತ ಆಹಾರಗಳನ್ನು ಖರೀದಿ ಮಾಡಬೇಕು. ಆಗ ಮಾತ್ರ ನಾಯಿಗಳ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಕೆಲವು ಸಲ ನಾಯಿಗಳಿಗೆ ಕಾರ್ಬೋಹೈಡ್ರೇಟ್​ ಹೆಚ್ಚಿರುವ ಆಹಾರವನ್ನು ನೀಡುವುದು ಅಪಾಯ ಎಂದು ತಜ್ಞರು ಹೇಳುತ್ತಾರೆ. ಕಾರ್ಬೋಹೈಡ್ರೇಟ್‌ ಮತ್ತು ಧಾನ್ಯಗಳು ಕಡಿಮೆ ಇರುವಂತಹ ಆಹಾರಗಳು ನಾಯಿಯ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇನ್ನೂ ನಾಯಿಗಳಿಗೆ ಆಹಾರ ಖರೀದಿ ಮಾಡುವಾಗ ನೆನಪಿಟ್ಟಕೊಳ್ಳಬೇಕಾದ ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಅವುಗಳ ವಯಸ್ಸು. ನಾಯಿಗಳ ವಯಸ್ಸಿಗೆ ಅನುಗುಣವಾಗಿ ನೀವು ಆಹಾರವನ್ನು ಖರೀದಿ ಮಾಡಬೇಕು. ಹೀಗೇ ಮಾಡಿದರೆ ಉತ್ತಮ.

ಹಾಗೇ ನಿಮಗೆ ನಿಮ್ಮ ನೆಚ್ಚಿನ ನಾಯಿಗಳಿಗೆ ಯಾವ ಆಹಾರವನ್ನು ನೀಡಬೇಕು ಎನ್ನುವ ಗೊಂದಲವಿದ್ದರೆ, ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಗೊಂದಲವಿದ್ದು, ನಾಯಿಗಳಿಗೆ ಸರಿಯಾದ ಆಹಾರ ನೀಡದೇ ಇರುವುದು ಅವುಗಳ ಆರೋಗ್ಯಕ್ಕೆ ಅಪಾಯವಂತೆ. ಹಾಗಾಗಿ ನಿಮ್ಮ ಪ್ರೀತಿಯ ನಾಯಿಗೆ ಸರಿಯಾದ ಆಹಾರ ನೀಡಿ, ಆರೋಗ್ಯದಿಂದಿರಿಸಿ.

Leave A Reply

Your email address will not be published.