ಮುಸ್ಲಿಂ ಹುಡುಗಿಯರ ಮದುವೆ ವಯಸ್ಸು ಹೆಚ್ಚಿಸಲು ಮನವಿ

ಮುಸ್ಲಿಂ ಯುವತಿಯರ (Muslims Women) ಮದುವೆಯ ವಯಸ್ಸನ್ನು ಹೆಚ್ಚಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ (National Women Commission) ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಸಲ್ಲಿಸಿದೆ.

 

ಮುಸ್ಲಿಂ ವೈಯಕ್ತಿಕ ಕಾನೂನುಗಳ ಪ್ರಕಾರ, 16 ವರ್ಷದ ಬಾಲಕಿಯ ಮದುವೆಯನ್ನು ಮಾನ್ಯಗೊಳಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪನ್ನು ಪ್ರಶ್ನಿಸಿದ್ದು ಜೊತೆಗೆ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಕುರಿತಾಗಿ ರಾಷ್ಟ್ರೀಯ ಆಯೋಗವು ಈ ಹಿಂದೆ ಪ್ರತ್ಯೇಕವಾಗಿ ಪ್ರಶ್ನೆ ಮಾಡಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ಕೂಡ ಜಾರಿ ಮಾಡಿದೆ.

ಮುಸ್ಲಿಂ ಯುವತಿಯರ ಮದುವೆಯ ವಯಸ್ಸನ್ನು ಹೆಚ್ಚಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ವಕೀಲ ನಿತಿನ್ ಸಲುಜಾ ಅವರ ಮೂಲಕ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಿದೆ. ಎಲ್ಲ ಸಮುದಾಯಗಳ ಯುವತಿಯರ ವಿವಾಹ (Marriage) ವಯಸ್ಸನ್ನು ಧರ್ಮಾತೀತವಾಗಿ 18 ವರ್ಷಕ್ಕೆ ನಿಗದಿಪಡಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ಪರಿಶೀಲನೆ ನಡೆಸಿದೆ. ಹಾಗಾಗಿ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ (Government Of India) ನೋಟೀಸ್ ಜಾರಿ ಮಾಡಿದೆ.

ಇದೀಗ, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಣೆ (POCSO act) ಕಾಯ್ದೆ, ಐಪಿಸಿ (IPC) ಮತ್ತು ಮಕ್ಕಳ ವಿವಾಹ ನಿಷೇಧ (PCM) ಕಾಯ್ದೆಯನ್ನು ಧರ್ಮ ಅಥವಾ ವೈಯಕ್ತಿಕ ಕಾನೂನುಗಳನ್ನು ಪರಿಗಣಿಸದೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ ನಿರ್ದೇಶನ ನೀಡಬೇಕು .

ಅಷ್ಟೆ ಅಲ್ಲದೆ , ಸಂವಿಧಾನದ 14, 15 ಮತ್ತು 21ನೇ ವಿಧಿಗಳ ಅಡಿಯಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳನ್ನು ಮುಸ್ಲಿಂ ಮಹಿಳೆಯರು ಮತ್ತು ಬಾಲಕಿಯರಿಗೂ ಅನ್ವಯ ವಾಗುವಂತೆ ತೀರ್ಪು ಎತ್ತಿಹಿಡಿಯಬೇಕೆಂದು ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ.

Leave A Reply

Your email address will not be published.