Driving Licence : ವಾಹನ ಸವಾರರೇ ಗಮನಿಸಿ, ಇನ್ಮುಂದೆ ಡಿಎಲ್‌ ಮಾಡೋದು ತುಂಬಾ ಸುಲಭ

ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.


ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಲು ಬಯಸುವವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಈ ಹಿಂದೆ ಚಾಲನಾ ಪರವಾನಗಿ(Driving Licence) ಪಡೆಯಲು ಆರ್‌ಟಿಒ ಕಚೇರಿಗೆ(RTO Office) ಹೋಗಿ ಪರೀಕ್ಷೆ ಬರೆಯಬೇಕಾದ ಅವಶ್ಯಕತೆ ಇತ್ತು. ಅಷ್ಟೆ ಅಲ್ಲದೆ, ಟೆಸ್ಟ್‌ ಡ್ರೈವ್(Test Drive)‌ ಕೂಡ ಮಾಡಬೇಕಿತ್ತು .ಈ ರೀತಿ ಅನೇಕ ನಿಯಮಗಳಿದ್ದರು ಕೂಡ ಎಲ್ಲವನ್ನೂ ಗಾಳಿಗೆ ತೂರಿ ಲೈಸೆನ್ಸ್‌(Licence) ಇಲ್ಲದೇ ಗಾಡಿ ಓಡಿಸಿಕೊಂಡು ಪೊಲೀಸರ(Police)‌ ಕೈಯಲ್ಲಿ ಸಿಕ್ಕಿ ಬಿದ್ದು ಫೈನ್ ಕಟ್ಟಿದ ಇತಿಹಾಸ ಕೂಡ ಇದ್ದೆ ಇದೆ. ಆದರೆ, ಇನ್ಮುಂದೆ ಡಿಎಲ್‌ ಮಾಡಿಸೋದು ಸರಳ ಹಾಗೂ ಸುಲಭ. ಇನ್ನೂ ಮುಂದೆ ಆರ್‌ಟಿಒ ಕಚೇರಿಗೆ ಆಗಾಗ ಅಲೆದಾಡುವ ತಾಪತ್ರಯವಿಲ್ಲ. ಸುಲಭವಾಗಿ ಚಾಲನಾ ಪರವಾನಗಿ ಪಡೆದುಕೊಳ್ಳಬಹುದಾಗಿದೆ.

ಹೊಸ ನಿಯಮಗಳ ಪ್ರಕಾರ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಕಚೇರಿಗೆ ಹೋಗಬೇಕಿಲ್ಲ ಅಷ್ಟೆ ಅಲ್ಲ ಕಣ್ರೀ.. ಇದು ಅಂತಾ ಟೆಸ್ಟ್‌ ಕೂಡ ಮಾಡಿಸಬೇಕಾಗಿಲ್ಲ ಹೌದು, ಚಾಲಕರು ಇನ್ಮುಂದೆ ಆರ್‌ಟಿಒಗೆ ಭೇಟಿ ನೀಡದೆ, ಚಾಲನಾ ಟೆಸ್ಟ್ ನೀಡದೆಯೇ ಚಾಲನಾ ಪರವಾನಗಿಯನ್ನು ಪಡೆಯಬಹುದು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಹೊಸ ನಿಯಮಗಳನ್ನು 1 ಜುಲೈ 2022 ರಿಂದ ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ, ಜನ RTO ಗೆ ಹೋಗಲು ಮತ್ತು ತಮ್ಮ DL ಮಾಡಿಸಲು ತಿಂಗಳುಗಟ್ಟಲೆ ಕಾಯಬೇಕಾದ ಅವಶ್ಯಕತೆ ಇಲ್ಲ.

ಈಗ ರಾಜ್ಯ ಸಾರಿಗೆ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರ ನಡೆಸುವ ಚಾಲಕರ ತರಬೇತಿ ಕೇಂದ್ರದ ಮುಖೇನ ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಕ್ಕೆ ಚಾಲನಾ ಪರವಾನಗಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಹಕ್ಕನ್ನು ಸರ್ಕಾರ ನೀಡಿದ್ದು, ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದ ಸಹಾಯದಿಂದ ಚಾಲನಾ ಪರವಾನಗಿಯನ್ನು ಪಡೆಯಬಹುದಾಗಿದೆ.

ತಮ್ಮ ಡಿಎಲ್‌ಗೆ ಅರ್ಜಿ ಸಲ್ಲಿಸುವವರು ಯಾವುದೇ ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಅವರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಕೇಂದ್ರವು ಪ್ರಮಾಣಪತ್ರವನ್ನು ನೀಡಲಿದ್ದು, ಆ ಪ್ರಮಾಣಪತ್ರವನ್ನು ಪಡೆದ ಬಳಿಕ , ಅಭ್ಯರ್ಥಿಯು ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಗ ಆರ್‌ಟಿಒ ಯಾವುದೇ ಟೆಸ್ಟ್‌ ಡ್ರೈವಿಂಗ್ ಪರೀಕ್ಷೆಯಿಲ್ಲದೆ ತರಬೇತಿ ಪ್ರಮಾಣಪತ್ರದ ಆಧಾರದ ಮೇಲೆ‌ ನಿಮಗೆ ಲೈಸೆನ್ಸ್ ‌ನೀಡುತ್ತದೆ. ಡ್ರೈವಿಂಗ್‌ ಲೈಸೆನ್ಸ್‌ ಅಗತ್ಯ ದಾಖಲೆಗಳಲ್ಲಿ ಒಂದಾಗಿದ್ದು, ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ವಿಳಾಸವನ್ನು ಮಾತ್ರವಲ್ಲದೆ ನೀವು ಚಲಾಯಿಸಲು ಅರ್ಹವಾಗಿರುವ ವಾಹನಗಳ ಪ್ರಕಾರವನ್ನು ಕೂಡ ನೀಡಲಾಗಿರುತ್ತದೆ. ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ವಿಳಾಸ ಸರಿಯಾಗಿ ನಮೂದಾಗಿರುವುದು ಮುಖ್ಯ ಪಾತ್ರ ವಹಿಸುತ್ತದೆ.

ಮನೆಯಲ್ಲಿಯೇ ಕೂತು ಡ್ರೈವಿಂಗ್ ಲೈಸೆನ್ಸ್‌ ವಿಳಾಸವನ್ನು ಬದಲಾಯಿಸಿ ಡಿಎಲ್‌ ಅಗತ್ಯ ದಾಖಲೆಯಾಗಿದ್ದು, ಜನ ಅದನ್ನು ಇಟ್ಟುಕೊಳ್ಳಲೇಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕುರಿತಾಗಿ ಹಲವು ಸುಲಭ ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ. ಡಿಎಲ್‌ ಪಡೆಯಲು ಸುಲಭ ಮಾಡಿದಂತೆ ಡಿಎಲ್‌ನಲ್ಲಿದ್ದ ವಿಳಾಸವನ್ನು ಬದಲಿಸಲು ಸಹ ಅನುಮತಿ ನೀಡಲಾಗಿದೆ.

ಅದು ಕೂಡ ಮನೆಯಲ್ಲಿಯೇ ಆಧಾರ್‌ ಕಾರ್ಡ್‌ ವಿಳಾಸ ಬದಲಿಸಿದಂತೆ ಡಿಎಲ್‌ ವಿಳಾಸವನ್ನು ಸರಿಪಡಿಸಲು ಇಲ್ಲಾ ಬದಲಾಯಿಸಲು ಅನುವು ಮಾಡಿದೆ.
ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವವರಿಗೆ ಪರೀಕ್ಷೆಗೆ ಆರ್‌ಟಿಒ ಕಚೇರಿಗೆ ಬರದೆ ಪರವಾನಗಿ ನೀಡಲಾಗಲಿದ್ದು, ತರಬೇತಿ ಕೇಂದ್ರಗಳಲ್ಲಿ ಸಿಮ್ಯುಲೇಟರ್‌ಗಳು ಮತ್ತು ಮೀಸಲಾದ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳನ್ನು ಅಳವಡಿಸಲಾಗುತ್ತದೆ.

ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಲಘು ಮೋಟಾರು ವಾಹನಗಳಿಗೆ (LMV) ಮತ್ತು ಮಧ್ಯಮ ಮತ್ತು ಭಾರೀ ವಾಹನಗಳಿಗೆ (HMV) ತರಬೇತಿಯನ್ನು ಪಡೆಯಬಹುದಾಗಿದೆ. LMV ಗಾಗಿ ತರಬೇತಿಯ ಒಟ್ಟು ಅವಧಿಯು 29 ಗಂಟೆಗಳಿರುತ್ತದೆ, ಇದು ಕೋರ್ಸ್‌ನ ಪ್ರಾರಂಭದಿಂದ ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಬೇಕಾಗಿದೆ.

ಒಂದು ವೇಳೆ ವಿಳಾಸವನ್ನು ತಪ್ಪಾಗಿ ನೀಡಿದರೆ, ಅದನ್ನು ಸರಿಪಡಿಸಲು ಮೊದಲು ಆರ್‌ಟಿಒಗೆ ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ಈಗ ಈ ಕೆಲಸ ಕೂಡ ಸುಲಭವಾಗಿದ್ದು, ಮನೆಯಲ್ಲಿಯೇ ಕೂತು ವಿಳಾಸವನ್ನು ಅಪ್ಡೇಟ್‌ ಮಾಡುವ ಅವಕಾಶವನ್ನು ಇಲಾಖೆ ನೀಡಲಾಗಿದೆ. ಇದಕ್ಕಾಗಿ ಭಾರತ ಸರ್ಕಾರದ mParivahan ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಂಡು ಡ್ರೈವಿಂಗ್ ಲೈಸೆನ್ಸ್‌ನಲ್ಲಿರುವ ಮನೆಯ ವಿಳಾಸವನ್ನು ಮನೆಯಲ್ಲಿ ಕುಳಿತುಕೊಂಡೇ ಬದಲಾಯಿಸಬಹುದಾಗಿದೆ.

Leave A Reply

Your email address will not be published.