ಎದೆ ಉರಿಯನ್ನು ಕಡಿಮೆ ಮಾಡಲು ಹೀಗೆ ಮಾಡಿ?
ನಾವು ಎಷ್ಟೇ ಬ್ಯುಸಿ ಇದ್ರು ಕೂಡ ನಮ್ಮ ಜೀವನ ಶೈಲಿಯ ಮೇಲೆ ನಾವು ಗಮನಹರಿಸಲೇಬೇಕು. ಇದ್ದಕ್ಕಿದ್ದಂತೆ ಎದೆಯಲ್ಲಿ ಉರಿ, ಹೊಟ್ಟೆನೋವು ,ಜ್ವರ ಹೀಗೆ ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತೇವೆ. ಪ್ರತಿಯೊಂದಕ್ಕೂ ವೈದ್ಯರನ್ನ ನಾವು ಮೊರೆಹೋಗುವ ಬದಲು ಸಿಂಪಲ್ಲಾಗಿ ಒಂದಷ್ಟು ಟಿಪ್ಸ್ ಗಳನ್ನು ಫಾಲೋ ಮಾಡಬಹುದು.
ಯಾರಲ್ಲಿ ಜೀರ್ಣಾಂಗ ವ್ಯವಸ್ಥೆ ತುಂಬಾ ದುರ್ಬಲವಾಗಿರುತ್ತದೆಯೋ ಅವರು ತಮ್ಮ ಆಹಾರ ಸೇವನೆ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಯಾಕೆಂದ್ರೆ ಎಣ್ಣೆ, ಮಸಾಲೆ, ಕರಿದ ಪದಾರ್ಥಗಳ ಸೇವನೆ ಗಂಟಲು ನೋವು, ಎದೆಯಲ್ಲಿ ಉರಿ ಮತ್ತು ಹುಳಿ ತೇಗು ನೂರಾರು ತೊಂದರೆಗಳಿಗೆ ಕಾರಣವಾಗುತ್ತೆ. ಇದನ್ನ ಅಸಿಡಿಟಿ ಅಂತ ಕರೆಯಲಾಗುತ್ತೆ.
ಅಸಿಡಿಟಿ ಕಡಿಮೆಯಾಗಬೇಕು ಅಂದ್ರೆ ಮಲಗುವಾಗ ಎಡ ಭಾಗಕ್ಕೆ ತಿರುಗಿ ಮಲಗಬೇಕು. ಇದರಿಂದ ದಿನೇ ದಿನೇ ಅಸಿಡಿಟಿ ಕಡಿಮೆಯಾಗುತ್ತೆ. ಆಪಲ್ ಸೈಡರ್ ವಿನಿಗರ್ ಅನ್ನು ಕುಡಿಬೇಕು. ಆಹಾರ ಸೇವನೆಯ ನಂತರ ಸೋಂಪು ಕಾಳನ್ನ ತಿನ್ನಬೇಕು. ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.
ಎಂದಿಗೂ ನೀರನ್ನ ಹೆಚ್ಚಾಗಿ ಕುಡಿಬೇಕು. ನೀರನ್ನ ಕುಡಿಯೋದ್ರಿಂದ ದೇಹಕ್ಕೆ ತುಂಬಾ ಒಳಿತು. ನಾವು ನೀರನ್ನ ಎಷ್ಟು ಕುಡಿಯುತ್ತೇವೆ ಅಷ್ಟೇ ಒಳ್ಳೆಯದು.