PUC Marks : ಶಿಕ್ಷಣ ಇಲಾಖೆಯಿಂದ ಹೊಸದೊಂದು ಮಾಸ್ಟರ್‌ ಪ್ಲ್ಯಾನ್‌ | ಪಿಯು ಪರೀಕ್ಷಾ ಪದ್ಧತಿಯಲ್ಲಿ ಬರಲಿದೆ ಮಹತ್ತರ ಬದಲಾವಣೆ

ಪ್ರತಿ ವರ್ಷ ಪಿಯುಸಿ ಪರೀಕ್ಷೆ ವೇಳಾಪಟ್ಟಿ (PUC Exam Time Table) ಈಗಾಗಲೇ ಬಿಡುಗಡೆಗೊಂಡಿದ್ದು , ಈ ಬಾರಿ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆ (Question Paper) ಇರಲಿದೆ ಎಂಬ ಸುದ್ದಿ ಕೂಡ ಎಲ್ಲೆಡೆ ಹರಿದಾಡುತ್ತಿವೆ . ಆದರೆ ಈಗ ಈ ವಿಷಯದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ (Government) ನಿರ್ಧಾರ ಕೈಗೊಂಡಿದೆ. ಮಕ್ಕಳ ಉತ್ತೀರ್ಣತೆ ಹಾಗೂ ಮಕ್ಕಳ ಶಿಕ್ಷಣದ ಉತ್ತೇಜನ ಮಾಡುವ ನಿಟ್ಟಿನಲ್ಲಿ ಶಿಕ್ಷಣ (Education) ಇಲಾಖೆ ಹೊಸದೊಂದು ಮಾಸ್ಟರ್ ಪ್ಲಾನ್ ಮಾಡಲು ಮುಂದಾಗಿದೆ.

ಪದವಿ ಕಾಲೇಜುಗಳ ಪ್ರವೇಶಕ್ಕೆ ಪಿಯುಸಿ ಫಲಿತಾಂಶವೇ ಮುಖ್ಯವಾಗಿದ್ದು, ಹಾಗಾಗಿ, ಶಿಕ್ಷಣ ಇಲಾಖೆಯು ಶಿಕ್ಷಣದಲ್ಲಿ ಹೊಸ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿದೆ. ಈಗ ಪದವಿ ಕಾಲೇಜುಗಳ ಪ್ರವೇಶಕ್ಕೆ ಪಿಯುಸಿ ಫಲಿತಾಂಶವೇ ಮುಖ್ಯವಾಗಿದ್ದು, ಹಾಗಾಗಿ, ಮಕ್ಕಳು ಹೆಚ್ಚಿನ ಅಂಕ ಗಳಿಸುವುದು ಅವಶ್ಯಕವಾಗಿದೆ. ಆದರೆ, ಈ ನಡುವೆ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಕ್ರಿಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಅದರಲ್ಲೂ ಕರ್ನಾಟಕದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರು ವುದನ್ನು ಗಮನಿಸಿ ಇದನ್ನು ತಡೆಯಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿ ಹೊಸ ಯೋಜನೆ ರೂಪಿಸಿದೆ.

ಪಿಯು ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿಯೂ ಕೂಡ 15ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಇಷ್ಟೇ ಅಲ್ಲದೆ, ಈ ಹೊಸ ಪ್ಲಾನ್ ರೂಪಿಸುವುದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ . ಮಕ್ಕಳು ಇನ್ನಷ್ಟು ನಿಖರ ಉತ್ತರಗಳನ್ನು ನೀಡುವಲ್ಲಿ ತಯಾರಿ ನಡೆಸಲು ಅವಕಾಶ ಕಲ್ಪಿಸಿದಂತೆ ಎಂಬ ಅಂಶವನ್ನು ಪ್ರಸ್ಥಾಪ ಮಾಡಲಾಗಿದೆ.


ಈ ಪರೀಕ್ಷೆಗಳಲ್ಲಿ ಕೇವಲ ಹದಿನೈದು ಅಂಕಗಳ ಇಲ್ಲವೇ ಹೆಚ್ಚೆಂದರೆ ಇಪ್ಪತ್ತು ಅಂಕಗಳ ಪ್ರಶ್ನೆಗಳಷ್ಟೇ ಬಹು ಆಯ್ಕೆಯ ಪ್ರಶ್ನೆಗಳಾಗಿದ್ದು ಇನ್ನುಳಿದ ಸಂಪೂರ್ಣ ಪರೀಕ್ಷೆ ಬಹು ಆಯ್ಕೆ ಪ್ರಶ್ನೆಗಳಿಂದ ಕೂಡಿರುವುದಿಲ್ಲ ಎಂಬುದನ್ನು ಗಮನಿಸಬೇಕು

ಬಹು ಆಯ್ಕೆಯ ಪ್ರಶ್ನೆಗಳ ಅಳವಡಿಕೆಯಿಂದ ಮಕ್ಕಳಿಗೆ ಪ್ರಶ್ನೆಯಲ್ಲಿ ಆಯ್ಕೆಯು ದೊರೆಯಲಿದ್ದು, ಹೀಗಾಗಿ, ಮಕ್ಕಳು ಒಂದು ಪ್ರಶ್ನೆಗೆ ಉತ್ತರ ಗೊತ್ತಿಲ್ಲದೆ ಇದ್ದಾಗ ಉಳಿದ ಆಯ್ಕೆಯನ್ನು ಬರೆಯಲು ಅಂದರೆ, ಬೇರೆ ಅಲ್ಲಿಯೇ ಇರುವ ಉತ್ತರವನ್ನು ಆಯ್ದು ಬರೆಯಲು ಅನುಕೂಲವಾಗುತ್ತದೆ ಎಂದು ಈ ತೀರ್ಮಾನ ಕೈಗೊಳ್ಳಲಾಗಿದೆ.

ಇದರಿಂದ ಉತ್ತಮವಾಗಿ ಪರೀಕ್ಷೆ ಬರೆದರೆ ಪಿಯು ಫಲಿತಾಂಶದಲ್ಲಿ ವ್ಯತ್ಯಯ ಕಂಡುಬರಲಿದೆ. ಇದರ ಪರಿಣಾಮದಿಂದಾಗಿ ಫಲಿತಾಂಶದಲ್ಲಿ ಹೆಚ್ಚಳವಾದರೆ ಪದವಿ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಪ್ಲಾನ್ ಆಗಿದ್ದು ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ.

ಶಿಕ್ಷಣ ಇಲಾಖೆ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇಲ್ಲಿ ಸಮಯದ ಅಭಾವದ ಕಾರಣ ವು ಇರಬಹುದು ಎನ್ನಲಾಗುತ್ತಿದೆ. ಹಾಗಾಗಿ, ಇದನ್ನು ತಪ್ಪಿಸಲು ಕೂಡ ಬಹು ಆಯ್ಕೆ ಪ್ರಶ್ನೆ ಮಾದರಿ ತರುವ ಸಾಧ್ಯತೆ ಹೆಚ್ಚಿದೆ. ಈಗ ಸದ್ಯ ಒಂದು ಅಂಕದ ಪ್ರಶ್ನೆಗಳಿಗೂ ವಿವರಣಾತ್ಮಕ ಉತ್ತರಗಳನ್ನು ವಿದ್ಯಾರ್ಥಿಗಳು ಬರೆಯಬೇಕಾಗಿದೆ.

ಬಹು ಆಯ್ಕೆಯ ಪ್ರಶ್ನೆಗಳಿಗೂ ಸಹ ಉತ್ತರ ನೀಡಲು ತಯಾರಿ ನಡೆಸಿ ಹೆಚ್ಚಿನ ಅಂಕ ಗಳಿಸಲು ಪೂರ್ವ ತಯಾರಿ ಅವಶ್ಯಕವಾಗಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಜನೆ ರೂಪಿಸಿ ಅಭ್ಯಾಸ ನಡೆಸಬೇಕು.

Leave A Reply

Your email address will not be published.