Labour Card Scholarship: ಸಿಗಲಿದೆ 75 ಸಾವಿರ ವಿದ್ಯಾರ್ಥಿ ವೇತನ ಕಾರ್ಮಿಕರ ಮಕ್ಕಳಿಗೆ! ಕಂಪ್ಲೀಟ್‌ ವಿವರ ಇಲ್ಲಿದೆ

ಸರ್ಕಾರವು ಬಡವರಿಗಾಗಿ ಹಲವರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ಬಡ ಮಕ್ಕಳ ಶೈಕ್ಷಣಿಕ ಮಟ್ಟದ ಬೆಳವಣಿಗೆಗಾಗಿ ಸರ್ಕಾರವು ಕೆಲವೊಂದು ರೀತಿಯ ವಿದ್ಯಾರ್ಥಿ ವೇತನಗಳನ್ನು ನೀಡಲು ನಿರ್ಧರಿಸಿದೆ. ಸದ್ಯ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲೆಂದು ಈ ಸ್ಕಾಲರ್​ ಶಿಪ್​ಅನ್ನು ಬಳಸಿಕೊಳ್ಳಬಹುದು.

 

ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಹಲವಾರು ಯೋಜನೆಯನ್ನು ಜಾರಿಗೆ ತರುತ್ತದೆ. ಅದೇ ರೀತಿ ಕಾರ್ಮಿಕರ ಮಕ್ಕಳಿಗೆ ಸಹಾಯವಾಗಲಿ ಎಂದು ಈ ವಿಶೇಷ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿದೆ. ಇದರಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೂ ಸಹ ವಿದ್ಯಾರ್ಥಿ ವೇತನ ಲಭ್ಯವಿದೆ. ಪ್ರಸ್ತುತ 4ನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿಪರ ಕೋರ್ಸ್​ನಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಸಹ ಈ ವಿದ್ಯಾರ್ಥಿ ವೇತನ ಲಭ್ಯವಿದೆ. ಅರ್ಜಿ ಸಲ್ಲಿಸಲು 31/12/2022 ಕೊನೆಯ ದಿನಾಂಕ ಆಗಿದೆ. ನೀವು ಈ ದಿನಾಂಕಕ್ಕಿಂತ ಮುಂಚಿತವಾಗಿ ನೀವು ಈ ಸ್ಕಾಲರ್​ ಶಿಪ್​ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ವಿದ್ಯಾರ್ಥಿ ವೇತನಗಳು ಇಂತಿವೆ :

• ಒಂದರಿಂದ 4ನೇ ತರಗತಿ 1000 ರೂ
• ಐದರಿಂದ 8ನೇ ತರಗತಿ 1500 ರೂ
• 9 ನೇ ತರಗತಿ 2000 ರೂ
• 10 ನೇ ತರಗತಿ 2000 ರೂ
• 11 ಮತ್ತು 12 ನೇ ತರಗತಿ 3000 ರೂ
• ಐಟಿಐ 6000 ರೂ
• ಪಾಲಿಟೆಕ್ನಿಕ್ 6000 ರೂ
• ಪದವಿ ಕೋರ್ಸ್‌ಗಳು 6000 ರೂ
• ವೃತ್ತಿಪರ ಕೋರ್ಸ್‌ಗಳು 25000 ರೂ
ಹೀಗೆ ಇಲ್ಲಿ ನೀಡಿರುವ ಮೊತ್ತದ ಅನುಸಾರ ವಿದ್ಯಾರ್ಥಿ ವೇತನ ಲಭ್ಯವಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಕಾರ್ಮಿಕರ ಗುರುತಿನ ಚೀಟಿ
  • ಬ್ಯಾಂಕ್ ಪಾಸ್ ಪುಸ್ತಕ
  • ಕಂದಾಯ ಪ್ರಾಧಿಕಾರ ನೀಡಿದ ಆದಾಯ ಪ್ರಮಾಣ ಪತ್ರ
    ಈ ಮೇಲಿನ ದಾಖಲೆಗಳನ್ನು ನೀವು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ವಿಧಾನ :

  • ಅಭ್ಯರ್ಥಿಗಳು ಮೊದಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು
  • ನಿಮ್ಮ ಸ್ಕ್ರೀನ್​ ಮೇಲೆ ಈಗ ಮುಖಪುಟ ಕಾಣಿತ್ತದೆ.
  • ಹೊಸ ನೋಂದಣಿ ಆಯ್ಕೆಯನ್ನು ಆಯ್ಕೆ ಮಾಡಬೇಕು.
  • ಈಗ ಎಲ್ಲಾ ಮಾಹಿತಿಯನ್ನು ನಮೂದಿಸಿ.
  • ನಿಮ್ಮ ಹೆಸರು, ಜನ್ಮ ದಿನಾಂಕ, ಸೆಲ್ ಫೋನ್ ಸಂಖ್ಯೆ, ಲಿಂಗ, ಇಮೇಲ್ ವಿಳಾಸ, ಬ್ಯಾಂಕ್ ಮಾಹಿತಿ ಇತ್ಯಾದಿಗಳನ್ನು ಟೈಪ್ ಮಾಡಿ.
  • ವಿದ್ಯಾರ್ಥಿಯ ವಾಸಸ್ಥಳ, ಹೆಸರು, ಹುಟ್ಟಿದ ದಿನಾಂಕ, ಸಮುದಾಯ ಅಥವಾ ವರ್ಗ, ತಂದೆಯ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿದ್ಯಾರ್ಥಿವೇತನ ವರ್ಗ, ಲಿಂಗ, ಧರ್ಮ, ತಾಯಿಯ ಹೆಸರು, ವಾರ್ಷಿಕ ಕುಟುಂಬದ ಆದಾಯ, ಇಮೇಲ್ ವಿಳಾಸ ಮುಂತಾದ ಮಾಹಿತಿಯನ್ನು ಟೈಪ್ ಮಾಡಿ.
  • ಅರ್ಜಿ ನಮೂನೆಯನ್ನು ಯಶಸ್ವಿಯಾಗಿ ಸೇವ್​ ಮಾಡಿ.
  • ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡುವುದು ತುಂಬಾ ಮುಖ್ಯ
  • ಕೊನೆಯಲ್ಲಿ ಎಲ್ಲಾ ದಾಖಲೆ ಸೇವ್​ ಮಾಡಿ ಹಾರ್ಡ್​ ಕಾಪಿ ತೆಗೆದಿಟ್ಟುಕೊಳ್ಳಿ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಾಥಮಿಕವಾಗಿ ರಾಷ್ಟ್ರದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಲೇಬರ್ ಕಾರ್ಡ್ ಈ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲೆಂದು ಈ ಸ್ಕಾಲರ್​ ಶಿಪ್​ಅನ್ನು ಬಳಸಿಕೊಳ್ಳಬಹುದು. ಪ್ರತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಮೊತ್ತವನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕೆಂದೇ ತೆಗೆದಿಡಲಾಗುತ್ತದೆ. ನೀವು ಕಾರ್ಮಿಕರ ಮಕ್ಕಳಾಗಿದ್ದು ಆರ್ಥಿಕವಾಗಿ ಶಾಲಾ ಶುಲ್ಕ ಪಾವತಿಸಲು ಕಷ್ಟವಾದರೆ ನಿಮಗೆ ಇದು ತುಂಬಾ ಉಪಯೋಗ ಆಗಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.