ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮನೆಯಲ್ಲೇ ತಯಾರಿಸಿ ರುಚಿಯಾದ ಟುಟ್ಟಿ ಫ್ರುಟ್ಟಿ ಕೇಕ್
ಮನೆಯಲ್ಲೇ ಸುಲಭವಾಗಿ ಏನಾದರೂ ಹೊಸ ಹೊಸ ರೆಸಿಪಿ ಮಾಡಬೇಕೆಂದು ಅಂದುಕೊಂಡಿದ್ದೀರಾ?? ಅದ್ರೆ ಬಿಝಿ ಶೆಡ್ಯೂಲ್ ನಲ್ಲಿ ಏನು ಸಿಹಿ ತಿಂಡಿ ಮಾಡಲು ಆಗುತ್ತಿಲ್ಲವೆ?? ಆದರೂ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮಕ್ಕಳು ಮೆಚ್ಚುವ ತಿಂಡಿ ಮಾಡಬೇಕೆಂದುಕೊಂಡರೆ ಅತಿ ಸರಳವಾಗಿ ಸುಲಭವಾಗಿ ಮಾಡುವ ಟುಟ್ಟಿ ಫ್ರುಟ್ಟಿ ಕೇಕ್ ಮಾಡುವ ವಿಧಾನ ನಾವು ಹೇಳ್ತೀವಿ ಕೇಳಿ!!
ಚಳಿಗಾಲದಲ್ಲಿ ಸಿಹಿ ತಿನ್ನುವ ಹಂಬಲ ಹೆಚ್ಚಾಗಿದ್ದು,ಕೆಲವೊಮ್ಮೆ ವಿಶೇಷವಾದುದನ್ನು ತಿನ್ನಲು ಮನಸ್ಸು ಹಂಬಲಿಸುವುದು ಸಹಜ. ಆದರೆ ಬೇಕರಿ ವಸ್ತುಗಳನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ ಎಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇಷ್ಟೇ ಅಲ್ಲ ಆರೋಗ್ಯ ಕೂಡ ಕೆಡುತ್ತದೆ ಎಂದು ಯೋಚಿಸುತ್ತಿದ್ದರೆ ಬೇಕರಿಯಲ್ಲಿ ಮೈದಾದಿಂದ ತಯಾರಿಸಿದ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ರವಾದಿಂದ ತಯಾರಿಸಿದ ಕೇಕ್ ತಯಾರಿಸಿ ಸೇವಿಸಬಹುದು.
ಹಾಗಾದ್ರೆ ಈ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುದೆಲ್ಲ ಎಂದು ನೋಡುವುದಾದರೆ:
1 ಕಪ್ ರವಾ, ½ ಕಪ್ ಪುಡಿ ಸಕ್ಕರೆ, ¼ ಕಪ್ ಆಲಿವ್ ಆಯಿಲ್, ವೆನಿಲ್ಲಾ ಎಸೆನ್ಸ್ 5 ಹನಿ, 1 ಚಮಚ ಬೇಕಿಂಗ್ ಪೌಡರ್, ½ ಚಮಚ ಅಡುಗೆ ಸೋಡಾ, ½ ಕಪ್ ಮಜ್ಜಿಗೆ, ½ ಕಪ್ ಟುಟ್ಟಿ ಫ್ರುಟ್ಟಿ. ಈ ಸಾಮಗ್ರಿಗಳನ್ನು ಬಳಸಿ ಕೇಕ್ ತಯಾರಿಸಬಹುದು.
ರವಾ ಕೇಕ್ ಮಾಡುವ ವಿಧಾನ
ರವಾವನ್ನು ಫಿಲ್ಟರ್ ಮಾಡಿಕೊಂಡು ಬಳಿಕ ಮಜ್ಜಿಗೆಯಲ್ಲಿ 30 ನಿಮಿಷಗಳ ಕಾಲ ನೆನೆಸಿಡಬೇಕು. ನಂತರ ಪುಡಿ ಸಕ್ಕರೆಯನ್ನು ಎಣ್ಣೆಯಲ್ಲಿ ಬೆರೆಸಿಕೊಂಡು ಅದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಬೇಕು. ಈ ಬಳಿಕ ಇದನ್ನು ನೆನೆಸಿಟ್ಟ ರವಾಗೆ ಸೇರಿಸಬೇಕು. ಇದಕ್ಕೆ ಟುಟ್ಟಿ ಫ್ರುಟ್ಟಿ ಮಿಕ್ಸ್ ಮಾಡಬೇಕು. ಹಿಟ್ಟು ದಪ್ಪವಾಗಿ ಕಂಡರೆ ಸ್ವಲ್ಪ ನೀರು ಸೇರಿಸಬಹುದು. ಕೊನೆಯದಾಗಿ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಸೇರಿಸಿಕೊಂಡು ಈ ಹಿಟ್ಟನ್ನು ಎಣ್ಣೆ ಸವರಿದ ಕೇಕ್ ಪ್ಯಾನ್ ಗೆ ಸುರಿಯಿರಿ. ಇದನ್ನು 160 ಡಿಗ್ರಿಯಲ್ಲಿ ಬೇಯಿಸಬೇಕು. ಹೀಗೆ ಸರಳ ವಿಧಾನ ಅನುಸರಿಸಿ ಬಾಯಲ್ಲಿ ನೀರೂರಿಸುವ ರುಚಿ ರುಚಿ ಕೇಕ್ ಸವಿಯಲು ಸಿದ್ಧವಾಗುತ್ತದೆ.