Shoe Cleaner Device : ಶೂ ಕ್ಲೀನ್ ಮಾಡೋಕೆ ಬಂದಿದೆ ಹೊಸ ಸಾಧನ | ಕೈಗಳಿಗೆ ರೆಸ್ಟ್!

ಆಧುನಿಕ ಯುಗದಲ್ಲಿ ಜನರು ಫ್ಯಾಷನ್ ಮಾಡುವುದರಲ್ಲಿ ಎತ್ತಿದ ಕೈ. ಹೌದು ಮನುಷ್ಯರು ಎಂದಿಗೂ ತಮ್ಮ ಯವ್ವನದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೂ ಹೊಸತನವನ್ನು ಇಷ್ಟಪಡುತ್ತಾರೆ. ನಿತ್ಯವೂ ಫ್ಯಾಷನ್ ಬದಲಾಗುತ್ತಲೇ ಇರುತ್ತದೆ ಉಡುಗೆ ತೊಡುಗೆಗಳಿಂದ ಹಿಡಿದು ಮೇಕಪ್‌ವರೆಗೆ ಎಲ್ಲಾ ಹೊಸ ಫ್ಯಾಷನ್ ಅನ್ನು ಅಳವಡಿಸಿಕೊಳ್ಳುವುದು ಸಹಜವಾಗಿದೆ. ಆದರೆ ಟ್ರೆಂಡಿಯಾಗಿ ಬಳಸುವ ಶೂ ಒಂದು ಸಾರಿ ಹಾಕಿಕೊಂಡು ಹೊರಗಡೆ ಹೋದಾಗ ಶೂ ಕೊಳೆಯಿಂದ ಕೂಡಿರುತ್ತದೆ. ಅದನ್ನು ಸ್ವಚ್ಚ ಮಾಡೋದೇ ಒಂದು ತಲೆನೋವಿನ ಕೆಲಸ. ಇನ್ನು ಕೆಲವರಿಗೆ ಶೂ ಕ್ಲೀನ್ ಮಾಡೋಕೆ ಇಷ್ಟವೇ ಇರೋದಿಲ್ಲ. ಇನ್ನು ಕೆಲವರಿಗೆ ಸಮಯ ವೇ ಇರುವುದಿಲ್ಲ. ಆದರೆ ಇನ್ಮುಂದೆ ಕೈಯಲ್ಲಿ ಶೂ ಕ್ಲೀನ್​ ಮಾಡ್ಬೇಕಾಗಿಲ್ಲ ಮತ್ತು ನಿಮ್ಮ ಸಮಯ ಕೂಡ ಉಳಿಯುತ್ತೆ. ಹೌದು ಫಿಲಿಪ್ಸ್ ಕಂಪನಿ ಕಂಪನಿ ಶೂ ಕ್ಲೀನ್​ ಮಾಡುವಂತಹ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸದ್ಯ ಪ್ರಸಿದ್ಧ ಎಲೆಕ್ಟ್ರಾನಿಕ್ಸ್​ ಕಂಪನಿಯಾಗಿರುವ ಫಿಲಿಪ್ಸ್ ಕಂಪನಿ ಶೂ ಕ್ಲೀನ್ ಮಾಡುವ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸಾಮಾನ್ಯವಾಗಿ ಶೂಗಳನ್ನು ಮೊದಲಿಗೆ ಕ್ಲೀನ್ ಮಾಡಬೇಕಾದರೆ ಹಳೆಯ ಬಟ್ಟೆಗಳನ್ನು ಅಥವಾ ಬ್ರಶ್ಗಳನ್ನು ಬಳಸುತ್ತಿದ್ದರು. ಆದರೆ ಇನ್ಮುಂದೆ ಆ ಟೆನ್ಶನ್ ಇಲ್ಲ. ಫಿಲಿಪ್ಸ್ ಕಂಪನಿ ಬಿಡುಗಡೆ ಮಾಡಿದ ಸ್ನೀಕರ್ ಕ್ಲೀನರ್ ಎಂಬ ಡಿವೈಸ್ ಮೂಲಕ ಸುಲಭವಾಗಿ ಶೂ ಕ್ಲೀನ್ ಮಾಡಬಹುದು.

ಫಿಲಿಪ್ಸ್‌ ಕಂಪನಿಯ ಹೊಸ ಸ್ನೀಕರ್ ಕ್ಲೀನರ್ GCA1000/60 ಭಾರತದಲ್ಲಿ 2,595 ರೂಪಾಯಿ ಬೆಲೆಯನ್ನು ಹೊಂದಿರಲಿದೆ. ಈ ಸಾಧನದ ಮೇಲೆ ಕಂಪನಿ ಎರಡು ವರ್ಷಗಳ ಗ್ಯಾರಂಟಿಯನ್ನು ಕೂಡ ನೀಡುತ್ತದೆ. ಇನ್ನು ಈ ಸ್ನೀಕರ್ ಕ್ಲೀನರ್ ಬ್ಲ್ಯಾಕ್‌ ಮತ್ತು ಹಳದಿ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಇದನ್ನು ಫಿಲಿಪ್ಸ್ ಡೊಮೆಸ್ಟಿಕ್ ಅಪ್ಲೈಯನ್ಸ್ ಎಂಬ ಇ-ಸ್ಟೋರ್ ಮೂಲಕ ಖರೀದಿಸಬಹುದಾಗಿದೆ.

ಈ ಸ್ನೀಕರ್‌ ಕ್ಲೀನರ್‌ನಲ್ಲಿ ಮೂರು ವಿಭಿನ್ನ ಬ್ರಷ್‌ಗಳನ್ನು ನೀಡಲಾಗಿದೆ. ಇವುಗಳನ್ನು ಸಾಫ್ಟ್ ಬ್ರಷ್‌, ಹಾರ್ಡ್ ಬ್ರಷ್ ಮತ್ತು ಸಾಫ್ಟ್ ಸ್ಪಾಂಜ್ ಎಂದು ಹೆಸರಿಸಲಾಗಿದೆ. ಇದರಲ್ಲಿ ಸಾಫ್ಟ್‌ ಬ್ರಷ್‌ ಮೆಶ್ ಮತ್ತು ಕ್ಯಾನ್ವಾಸ್‌ಗೆ ಸೂಕ್ತವಾಗಿದೆ. ಇನ್ನು ಹಾರ್ಡ್ ಬ್ರಷ್ ಟೆಕ್ಸ್ಚರ್ಡ್ ರಬ್ಬರ್ ಅಥವಾ ಶೂ ನ ಬಾಟಮ್‌ಗಳನ್ನು ಕ್ಲೀನ್‌ ಮಾಡುವುದಕ್ಕೆ ಉತ್ತಮವಾಗಿದೆ. ಹಾಗೆಯೇ ಸಾಫ್ಟ್ ಬ್ರಷ್ ಪಿವಿಸಿ ಮತ್ತು ಸ್ಯೂಡ್ ವಸ್ತುಗಳನ್ನು ಸ್ವಚ್ಛಗೊಳಿಸಲು ಸೂಕ್ತವಾಗಿದೆ.

ಅಲ್ಲದೆ 4x 6V AA ಬ್ಯಾಟರಿಗಳನ್ನು ಒಳಗೊಂಡಿದೆ. ಒಂದು ಬಾರಿ ಬ್ಯಾಟರಿಯನ್ನು ಅಳವಡಿಸಿದಾಗ 80 ನಿಮಿಷಗಳ ಕಾಲ ರನ್ ಮಾಡಬಹುದು. ಈ ಫಿಲಿಪ್ಸ್‌ನ ಸ್ನೀಕರ್ ಕ್ಲೀನರ್ 500RPM ಗಳೊಂದಿಗೆ ಮೋಟರ್ ಅನ್ನು ಹೊಂದಿದೆ. ಇದು IPX5 ವಾಟರ್‌ ಪ್ರೂಫ್ ಆಗಿರುವ ಸಾಧನವಾಗಿದೆ.

ಸ್ನೀಕರ್‌ ಕ್ಲೀನರ್‌ GCA1000/60 ಎಂಬ ಫಿಲಿಪ್ಸ್​ ಕಂಪನಿಯಿಂದ ಬಿಡುಗಡೆಯಾದ ಈ ಸಾಧನ ಹ್ಯಾಸಲ್‌-ಫ್ರೀ ಮತ್ತು ಕೈಗೆಟುಕುವ ಬೆಲೆಯಲ್ಲಿ ಇದು ಉತ್ತಮ ಫೀಚರ್ಸ್ ಅನ್ನು ಇದು ಹೊಂದಿದೆ. ಇದರಲ್ಲಿ ಮೂರು ರೀತಿಯ ಬ್ರಷ್‌ಗಳಿವೆ. ಇದು ಶೂವನ್ನು ಉಜ್ಜುವುದು ಮತ್ತು ಸ್ಕ್ರಬ್ಬಿಂಗ್‌ ಅನ್ನು ಮಾಡುವ ಮೂಲಕ ಶೂ ವನ್ನು ಬಹಳಷ್ಟು ಸ್ವಚ್ಛವಾಗಿರುವಂತೆ ಮಾಡುತ್ತದೆ. ಈ ಯಂತ್ರ ವಾಟರ್‌ ಪ್ರೂಫ್‌ ಕೂಡ ಆಗಿದೆ. ಈ ಡಿವೈಸ್‌ ಒಂದು ರೀತಿಯಲ್ಲಿ ಪಾಕೆಟ್​ ಅಲ್ಲಿ ಇಟ್ಟುಕೊಂಡು ಶೂ ಮ್ಯಾನೇಜ್ ಸುಲಭವಾಗಿ ಮಾಡಬಹುದಾಗಿದೆ.

Leave A Reply

Your email address will not be published.