ನಟಿಯ ಕಾಲು ಬೆರಳು ಚೀಪಿ ನೆಕ್ಕಿದ RGV | ಈ ನಿರ್ದೇಶಕನಿಗೇನಾಯ್ತು?

Share the Article

ಭಾರತೀಯ ಸಿನಿರಂಗದ ಹೆಸರಾಂತ ಸ್ಟಾರ್‌ ನಿರ್ದೇಶಕರ ಪಟ್ಟಿಯಲ್ಲಿದ್ದ ರಾಮ್‌ ಗೋಪಾಲ್‌ ವರ್ಮ್‌ ಒಂದು ಕಾಲದಲ್ಲಿ ಅವರು ಹೆಚ್ಚಿನ ನವ ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದರು. ಇಂದಿಗೂ ಕೂಡ ಅದೇಷ್ಟೋ ಸ್ಟಾರ್‌ ನಿರ್ದೇಶಕರು ತಮ್ಮ ಗುರುಗಳು ಎಂದು ಆರ್‌ಜಿವಿ ಅವರ ಹೆಸರನ್ನು ಉಲ್ಲೇಖಿಸಲು ಮರೆಯುವುದಿಲ್ಲ. ಭಾರತೀಯ ಸಿನಿರಂಗದಲ್ಲಿ ಸರ್ಕಾರ, ರಕ್ತಚರಿತ್ರೆ, ಅಟ್ಯಾಕ್ಸ್‌ ಅಪ್‌ 26-11 ಸೇರಿದಂತೆ ಟಾಲಿವುಡ್‌ನಲ್ಲಿಯೂ ಸಹ ಅದ್ಭುತ ಸಿನಿಮಾಗಳನ್ನು ಆರ್‌ಜಿವಿ ನಿರ್ದೇಶಿಸಿದ್ದು, ಇತ್ತೀಚೆಗೆ ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಡೈರೆಕ್ಟರ್‌ ರಾಮ್ ಗೋಪಾಲ್ ಸದ್ಯ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾರೆ.

ಇನ್ನು ವಿವಾದದ ಮೂಲಕವೇ ಪ್ರಸಿದ್ದಿ ಪಡೆದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನಟಿ ಅಶು ರೆಡ್ಡಿ ಕಾಲು ನೆಕ್ಕಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಸಂಚಲನ ಮೂಡಿಸಿದ್ದು, ರಾಮ್ ಗೋಪಾಲ್ ಅಷ್ಟಕ್ಕೂ ಹೀಗೇಕೆ ನಡೆದುಕೊಂಡರು ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಹುಟ್ಟಿಕೊಂಡಿದೆ. ಸಾರ್ವಜನಿಕ ಪ್ರದೇಶದಲ್ಲಿ ರಾಮ್ ಗೋಪಾಲ್ ಅವರ ನಡೆ ನುಡಿಗಳು, ಭಾಷಣಗಳು ಸೇರಿದಂತೆ ಹಲವಾರು ವಿವಾದಗಳಿಂದಲೆ ಹೆಸರು ಪಡೆದಿದ್ದಾರೆ.

ಇದಷ್ಟೇ ಅಲ್ಲದೇ, ವಿವಾದಾತ್ಮಕ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹಾಗಾಗಿ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವುದು ಕಾಮನ್. ಇದೀಗ ವೈರಲ್ ಆಗುತ್ತಿರುವ ವೀಡಿಯೋ ನೋಡಿ ನೆಟ್ಟಿಗರು ವರ್ಮಾ ಅವರ ನಡೆಗೆ ಅವಾಕ್ಕಾಗಿದ್ದಾರೆ.ಈ ಹಿಂದೆ ಕೂಡ ಆರ್‌ಜಿವಿ ಹಲವಾರು ಯುವತಿಯರನ್ನು ತಬ್ಬಿ ಮುದ್ದಾಡಿದ್ದ ವಿಡಿಯೋ ಮತ್ತು ಫೋಟೋಗಳು ವೈರಲ್‌ ಆಗಿದ್ದವು. ಇದರ ಬೆನ್ನಲ್ಲೆ ಇದೀಗ ಮತ್ತೊಂದು ವೀಡಿಯೊ ವೈರಲ್ ಆಗಿದೆ.

ರಾಮ್ ಗೋಪಾಲ್ ವರ್ಮಾ ಅವರ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟಿ ಅಶು ರೆಡ್ಡಿಯವರ ಕಾಲು ಹಿಡಿದಿದ್ದು ಮಾತ್ರವಲ್ಲದೇ, ಕಾಲನ್ನು ನೆಕ್ಕಿರುವ ದೃಶ್ಯ ಸೆರೆಯಾಗಿದೆ.ನಿನ್ನೆ ರಾತ್ರಿ 8.53ಕ್ಕೆ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟರ್ ಪೇಜ್‌ನಲ್ಲಿ ಈ ಫೋಟೋ ಹಾಕಿದ್ದು, ಫೋಟೋದಲ್ಲಿ, ರಾಮ್ ಗೋಪಾಲ್ ವರ್ಮಾ ನಟಿಯ ಪಾದದ ಬಳಿ ಕುಳಿತಿದ್ದು, ಅಸು ರೆಡ್ಡಿ ಸೋಫಾದಲ್ಲಿ ಕುಳಿತಿದ್ದಾರೆ. ಆ ಪೋಸ್ಟ್‌ಗೆ ʼಡೇಂಜರಸ್ ವಿತ್ ಡಬಲ್ ಡೇಂಜರಸ್ ಆಸು ರೆಡ್ಡಿʼ ಎಂದು ಅಡಿ ಬರಹ ಬರೆದುಕೊಂಡಿದ್ದಾರೆ. ಈ ಬಳಿಕ ನಿನ್ನೆ ರಾತ್ರಿ 9.30 ಕ್ಕೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

ಈ ನಡುವೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮತ್ತು ಆಸು ರೆಡ್ಡಿ ನಟಿಸಿರುವ ಡೇಂಜರಸ್ ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. ವೈರಲ್ ಆದ ನೋಡಿದ ಆರ್‌ಜಿವಿ ಅಭಿಮಾನಿಗಳು ಖುಷಿ ಪಟ್ಟರೆ, ಮತ್ತೆ ಕೆಲ ನೆಟ್ಟಿಗರು ರಾಮ್‌ ಗೋಪಾಲ ವರ್ಮ ನಡೆ ಮೀತಿ ಮೀರುತ್ತಿದೆ ಎಂದು ಕಿಡಿ ಕಾರಿದ್ದಾರೆ . ಮತ್ತೆ ಕೆಲವರು ಭಾರತೀಯ ಸಿನಿ ರಂಗದ ಅದ್ಭುತ ನಿರ್ದೇಶಕನ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಹೀಗೇಕೆ ನಡೆದುಕೊಂಡರು ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿದೆ.

Leave A Reply