ಉದ್ಯೋಗಾಕಾಂಕ್ಷಿಗಳೇ ನಿಮಗೊಂದು ಗುಡ್‌ ನ್ಯೂಸ್: ಅಬಕಾರಿ ಇಲಾಖೆಯಲ್ಲಿಶೀಘ್ರವೇ 1,100 ಹುದ್ದೆಗಳ ನೇಮಕ

Share the Article

ಕರ್ನಾಟಕ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,100 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.

ಇಲಾಖೆಯ ಒಟ್ಟು 1,100 ಹುದ್ದೆಗಳ ಪೈಕಿ 1000 ಅಬಕಾರಿ ಪೇದೆ ಹುದ್ದೆ, 100 ಅಬಕಾರಿ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.2021 ರ ಸೆಪ್ಟೆಂಬರ್ ಅಂತ್ಯಕ್ಕೆ ಅಬಕಾರಿ ಇಲಾಖೆಯಲ್ಲಿ ಮಂಜುರಾದ ಹುದ್ದೆಗಳು 5812 ಆಗಿದ್ದು, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು 4057, ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 1755 ಎಂದು ಈ ಹಿಂದೆ ಇಲಾಖಾ ಸಚಿವರು ಮಾಹಿತಿ ನೀಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಶೀಘ್ರದಲ್ಲೇ 1100 ಪೇದೆ ಹಾಗೂ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇಲಾಖೆಯಲ್ಲಿ ಗ್ರೂಪ್‌ ಎ, ಗ್ರೂಪ್‌ ಬಿ, ಗ್ರೂಪ್‌ ಸಿ, ಗ್ರೂಪ್‌ ಡಿ ಹಂತದ ಹುದ್ದೆಗಳಿದ್ದು, ಹುದ್ದೆವಾರು ವೇತನ ಶ್ರೇಣಿಯ ಮಾಹಿತಿ ಇಲ್ಲಿ ನೀಡಲಾಗಿದೆ.

ಅಬಕಾರಿ ಇಲಾಖೆಯ ಎಲ್ಲ ಹುದ್ದೆಗಳಿಗೆ ಗ್ರೂಪ್‌ ಹಾಗೂ ಹುದ್ದೆವಾರು ಪರಿಷ್ಕೃತ ವೇತನ ಶ್ರೇಣಿಯ ಮಾಹಿತಿ ಹೀಗಿವೆ;

ಅಬಕಾರಿ ಇಲಾಖೆ ಗ್ರೂಪ್‌ ಎ ಹುದ್ದೆಗಳು ಹಾಗೂ ವೇತನ ಶ್ರೇಣಿ ಆಯುಕ್ತರು (ಭಾ.ಆ.ಸೇ) : Rs.144200-218200. ಆಗಿದೆ.

ಅಬಕಾರಿ ಅಪರ ಆಯುಕ್ತರು (ಕೇಂದ್ರಸ್ತಾನ ಮತ್ತು ತನಿಖೆ) (ಭಾ.ಆ.ಸೇ) : . 67700-208700ರೂ. ಆಗಿದೆ.

ಅಬಕಾರಿ ಅಪರ ಆಯುಕ್ತರು (ಭಾ.ಆ.ಸೇ) (ಕ.ಆ.ಸೇ) : 74400-109600 ರೂ. ಆಗಿದೆ.

ಅಬಕಾರಿ ಅಪರ ಆಯುಕ್ತರು :.90500-123300. ರೂ. ಆಗಿದೆ.

ಅಬಕಾರಿ ಜಂಟಿ ಆಯುಕ್ತರು : 82000-117700ರೂ. ಆಗಿದೆ.

ಅಬಕಾರಿ ಉಪ/ಜಂಟಿ ಆಯುಕ್ತರು (ಆಡಳಿತ/ಕೆ.ಎ.ಎಸ್) : 74400-109600ರೂ. ಆಗಿದೆ.

ಅಬಕಾರಿ ಉಪ ಆಯುಕ್ತರು : 74400-109600 ರೂ. ಆಗಿದೆ.

ಜಂಟಿ ನಿರ್ದೇಶಕರು (ಸಾಂಖ್ಯಿಕ): Rs.74400-109600.

ಹಿರಿಯ ಲೆಕ್ಕಾಧಿಕಾರಿ : 677000-208700 ರೂ. ಆಗಿದೆ.

ಹಿರಿಯ ಆಡಿಟ್ ಆಫೀಸರ್ : 56100-177500ರೂ.

ಅಬಕಾರಿ ಅಧೀಕ್ಷಕರು : 52650-97100ರೂ. ಆಗಿದೆ.

ಮುಖ್ಯ ರಾಸಾಯನಿಕ ತಜ್ಞ : 52650-97100ರೂ. ಆಗಿದೆ.

ಅಬಕಾರಿ ಇಲಾಖೆ ಗ್ರೂಪ್‌ ಬಿ ಹುದ್ದೆಗಳು ಹಾಗೂ ವೇತನ ಶ್ರೇಣಿ :

ಸಹಾಯಕ ನಿರ್ದೇಶಕರು (ಸಾಂಖ್ಯಿಕ ) : ರೂ.43100-ರೂ.83900.

ಅಬಕಾರಿ ಉಪ ಅಧೀಕ್ಷಕರು : Rs.40900-78200.

ಹಿರಿಯ ರಾಸಾಯನಿಕ ತಜ್ಞ : Rs.40900-78200.

ಸಹಾಯಕ ಲೆಕ್ಕಾಧಿಕಾರಿ : Rs.47600-151100.

ಅಬಕಾರಿ ಇಲಾಖೆ ಗ್ರೂಪ್‌ ಸಿ ಹುದ್ದೆಗಳು ಹಾಗೂ ವೇತನ ಶ್ರೇಣಿ :

ಹಿರಿಯ ರಾಸಾಯನಿಕ ತಜ್ಞ : Rs.33450-62600.

ಲ್ಯಾಬ್ ಸಹಾಯಕ : Rs.18600-32600.

ಕಚೇರಿ ಅಧೀಕ್ಷಕರು : Rs.37900-70850.

ಅಬಕಾರಿ ನಿರೀಕ್ಷಕರು : Rs.37900-70850.

ಅಬಕಾರಿ ಉಪ ನಿರೀಕ್ಷಕರು : Rs.30350-58250.

ಪ್ರಥಮ ದರ್ಜೆ ಸಹಾಯಕರು: Rs.27650-52650.

ಶೀಘ್ರಲಿಪಿಗಾರರು : Rs.27650-52650.

ದ್ವಿತೀಯ ದರ್ಜೆ ಸಹಾಯಕರು : Rs.21400-42000.

ಬೆರಳಚ್ಚುಗಾರರು : Rs.21400-42000.

ಅಬಕಾರಿ ಮುಖ್ಯ ಪೇದೆ : Rs.23500-47650.

ಅಬಕಾರಿ ಪೇದೆ : Rs.21400-42000.

ಹಿರಿಯ ವಾಹನ ಚಾಲಕರು : Rs.27650-52650.

ಚಾಲಕರು / ಲಾಂಜ್ /ಡಿಂಗಿ ಚಾಲಕರು: Rs.21400-42000.

ಗ್ರೂಪ್‌ ಡಿ ಹುದ್ದೆಗೆ ವೇತನ ಶ್ರೇಣಿ : ರೂ.17000-ರೂ.28950. ಅಬಕಾರಿ ಪೇದೆ ಹುದ್ದೆಗೆ ಪಿಯುಸಿ, ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗೆ ಪದವಿ ಪಾಸ್‌ ಆಗಿರಬೇಕು.

ಇದರ ಜೊತೆಗೆ ಅಬಕಾರಿ ಪೇದೆ ಹುದ್ದೆಗೆ ವೇತನ ಶ್ರೇಣಿ ರೂ.21400 – ರೂ.42000 ಆಗಿದೆ. ಅಬಕಾರಿ ನಿರೀಕ್ಷಕರು ಹುದ್ದೆಗೆ ವೇತನ ಶ್ರೇಣಿ ರೂ.37900-70850 ಆಗಿದೆ.

ಕರ್ನಾಟಕ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,100 ಹುದ್ದೆಗಳನ್ನು ಭರ್ತಿ ಮಾಡಲು ಕೆ

ಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ




Leave A Reply