SSLC ಮತ್ತು PUC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಭಾರತದಲ್ಲಿ ಉದ್ಯೋಗ ಕೊರತೆ ಹೆಚ್ಚಾಗಿ ಕಾಣಬರುತ್ತಿರುವುದು ನಮಗೆ ಈಗಾಗಲೇ ತಿಳಿದಿರುವ ವಿಷಯ. ನಿರುದ್ಯೋಗ ಸಮಸ್ಯೆಯಿಂದ ಹಲವಾರು ತೊಂದರೆಗಳನ್ನು ಯುವಕರು ಯುವತಿಯರು ಅನುಭವಿಸಬೇಕಾಗುತ್ತದೆ ಈ ನಿಟ್ಟಿನಿಂದ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸದ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ.
ಸದ್ಯ 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. 300 ಕ್ಕಿಂತ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ ನಡೆಯಲಿದೆ ಎಂದು ಮಾಹಿತಿ ತಿಳಿಸಲಾಗಿದೆ.
ಬೃಹತ್ ಉದ್ಯೋಗ ಮೇಳ ನಡೆಯುವ ಸ್ಥಳ ಮತ್ತು ದಿನಾಂಕ ಈ ಕೆಳಗಿಂನಂತಿವೆ:
- ಡಿಸೆಂಬರ್ 13 ರಂದು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು
- ಡಿಸೆಂಬರ್ 16 ರಂದು ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಾಗೂ
- ಡಿಸೆಂಬರ್, 20 ರಂದು ಗೋಣಿಕೊಪ್ಪ ಕಾವೇರಿ ಪ್ರಥಮ ದರ್ಜೆ ಕಾಲೇಜು.
ಈ ಮೇಲಿನ ದಿನಾಂಕದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನ https://forms.gle/ErcWUnGyps4SvJRr7 ಗೂಗಲ್ ಲಿಂಕ್/ಅಥವಾ ಕೋಡ್ ಮೂಲಕ ನೋಂದಾಯಿಸಿಕೊಂಡು ತಮ್ಮ ಶೈಕ್ಷಣಿಕ ದಾಖಲೆಗಳಾದ • ಜೆರಾಕ್ಸ್ ಪ್ರತಿ,
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ,
- ಆಧಾರ್ ಕಾರ್ಡ್ ಹಾಗೂ
- ವೈಯಕ್ತಿಕ ವಿವರಗಳ(ಬಯೋ ಡಾಟಾ) ಕನಿಷ್ಟ 10 ಪ್ರತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.
ಅಲ್ಲದೇ ಉದ್ಯೋಗ ಮೇಳ ನಡೆಯುವ ಕೇಂದ್ರದಲ್ಲಿಯೂ ಅಭ್ಯರ್ಥಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಉದ್ಯೋಗದಾತರು ಸಹ ತಮ್ಮಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ವಿವರಗಳನ್ನು ಈ ಕಚೇರಿಯ ಇ-ಮೇಲ್ ವಿಳಾಸಕ್ಕೆ dsdokodagu2020@gmail.com ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಕೊಡಗು ಜಿಲ್ಲೆ ಇವರನ್ನು ಕಚೇರಿ ವೇಳೆಯಲ್ಲಿ ಹಾಗೂ 20.30.08272-225851/ 8123312319/ 9738361502/ 8296020826 ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಮುಖ ಕಂಪನಿಗಳಾದ ಜಸ್ಟ್ ಡಯಲ್, ಪ್ರೇರಣಾ ಮೋಟಾರ್ಸ್ ಪ್ರೈ.ಲಿ., ಟ್ರಿಡೆಂಟ್ ಅಟೋ ಮೊಬೈಲ್ ಪ್ರೈಲಿ., ನೆಟ್ಟೂರು ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್, ಮದರನ್ ಬೆಂಗಳೂರು, ಹೊಂಡಾ ಸನ್ ಬೈಟ್, ದಿ ಗುಡ್ಡೆ ಫೌಂಡೇಶನ್, ಅಮನ್‌ವನ ರೆಸಾರ್ಟ್, ವೀರ ಭೂಮಿ ರೆಸಾರ್ಟ್, ಪೂಜ್ಯಟೆಕ್ ಪ್ರೈ.ಲಿ. ಮತ್ತು ಸ್ವರ್ಣ ಭೂಮಿ ರೆಸಾರ್ಟ್ ಮೊದಲಾದ 30 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಯುವಕ ಯುವತಿಯರು ಈ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಮಿತಿ ಪ್ರಕಟಣೆ ಮೂಲಕ ಮಾಹಿತಿ ತಿಳಿಸಲಾಗಿದೆ.