ಸುಳ್ಯ : ಮೈಮೇಲೆ ತೆಂಗಿನಮರ ಬಿದ್ದು ಮಹಿಳೆ ಗಂಭೀರ

ಸುಳ್ಳ ಡಿ. 07. ಮಹಿಳೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡ ಘಟನೆ ಬುಧವಾರದಂದು ಸುಳ್ಯದ ಅರಂತೋಡಿನಲ್ಲಿ ಸಂಭವಿಸಿದೆ.

 

ಗಾಯಗೊಂಡವರನ್ನು ಬಾಲಣ್ಣರವರ ಪತ್ನಿ ಕಮಲ ಎಂದು ಗುರುತಿಸಲಾಗಿದೆ. ಇವರು ಮೇದಪ್ಪಗೌಡ ಎಂಬವರ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಇವರನ್ನು ಸುಳ್ಳದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.