ಜಿಯೋ ಸಂಸ್ಥೆಯ ಈ ಪ್ಲ್ಯಾನ್‌ ನಿಜಕ್ಕೂ ಗ್ರಾಹಕರಿಗೆ ಖುಷಿ ಕೊಡುತ್ತೆ

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

 


ಸದ್ಯ ಜಿಯೋ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಜೊತೆಗೆ ಕೆಲವು ಆಕರ್ಷಕ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದಷ್ಟೇ ಅಲ್ಲದೆ , ಭಿನ್ನ ಶ್ರೇಣಿಯ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಆಫರ್ ಅನ್ನು ಕೂಡ ಗ್ರಾಹಕರಿಗೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುವಲ್ಲಿ ನಿರತವಾಗಿರುವ ರಿಲಯನ್ಸ್ ಜಿಯೋ ಇದೀಗ, ತನ್ನ ಬಳಕೆದಾರರಿಗೆ Jio Plans Netflix, Amazon Prime ಚಂದಾದಾರಿಕೆ ನೀಡಲು ಮುಂದಾಗಿದೆ.

ಜಿಯೋ ಈ ಯೋಜನೆಯನ್ನು ರೀಚಾರ್ಚ್ ಮಾಡಿಸಿಕೊಂಡರೆ Netflix, Amazon Prime ಚಂದಾದರಿಕೆಯ ಜೊತೆಗೆ ಜಿಯೋ ಬಳಕೆದಾರರಿಗೆ OTT ಪ್ರಯೋಜನಗಳನ್ನು ಕೂಡ ನೀಡುತ್ತಿದೆ.

ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಬಳಕೆದಾರರು ಕೆಲವು ಯೋಜನೆಗಳಲ್ಲಿ ಮಾತ್ರ ಕೊಡುಗೆಗಳನ್ನು ಪಡೆಯಬಹುದಾಗಿದ್ದು, Amazon Prime Video, Netflix, Disney+ Hotstar ನಂತಹ OTT ಅಪ್ಲಿಕೇಶನ್‌ಗಳು ಪೂರಕ ಚಂದಾದಾರಿಕೆ ಲಭ್ಯವಾಗಲಿವೆ . ಇದರ ಜೊತೆಗೆ ಜಿಯೋ ಪ್ಲಾನ್‌ಗಳಲ್ಲಿ (Jio Plan), ಜಿಯೋ ಟಿವಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಅಪ್ಲಿಕೇಶನ್‌ಗಳ ಚಂದಾದಾರಿಕೆಯು ಉಚಿತವಾಗಿ ದೊರೆಯಲಿದೆ.

ಆದರೆ Amazon Prime, Netflix, Disney+ Hotstar ನಂತಹ ಚಂದಾದಾರಿಕೆಯನ್ನು ಹೇಗೆ ಪಡೆಯಬೇಕು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಜಿಯೋ ರೂ 399 ಪೋಸ್ಟ್‌ಪೇಯ್ಡ್ ಪ್ಲಾನ್​ನಲ್ಲಿ ಬಳಕೆದಾರರು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯಬಹುದು. ಈ ಮಾಸಿಕ ಯೋಜನೆಯಲ್ಲಿ 75GB ಡೇಟಾ ದೊರೆಯಲಿದ್ದು, ಇದರ ನಂತರ ಬಳಸಿದ ಡೇಟಾಗೆ ಪ್ರತಿ ಜಿಬಿಗೆ ರೂ.10 ಪಾವತಿ ಮಾಡಬೇಕಾಗುತ್ತದೆ. ಇದಷ್ಟೇ ಅಲ್ಲದೇ, ಅನಿಯಮಿತ ವಾಯ್ಸ್​ ಕಾಲ್ , ಪ್ರತಿದಿನ 100 ಎಸ್​ಎಂಎಸ್​ ಸೌಲಭ್ಯ ಕೂಡ ದೊರೆಯಲಿದೆ. ಈ ಪ್ಲಾನ್​ನಲ್ಲಿ ಜಿಯೋ ಅಪ್ಲಿಕೇಶನ್​ಗಳ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

599 ಪೋಸ್ಟ್‌ಪೇಯ್ಡ್ ಪ್ಲಾನ್ ಬಳಕೆದಾರರು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಮಾಸಿಕ 100 GB ಡೇಟಾ, 100 SMS ಮತ್ತು ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ದೊರೆಯಲಿದೆ. 100 GB ಬಳಕೆಯ ಬಳಿಕ ಡೇಟಾಗೆ ಪ್ರತಿ GBಗೆ 10 ರೂಪಾಯಿ ಪಾವತಿಸಬೇಕಾಗುತ್ತದೆ.

ಈ ಪ್ಲಾನ್ ಮೂಲಕ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದ್ದು ,ಕುಟುಂಬ ಯೋಜನೆಯಡಿ ಹೆಚ್ಚುವರಿ ಸಿಮ್ ಕಾರ್ಡ್ ತೆಗೆದುಕೊಳ್ಳಬಹುದಾಗಿದೆ.

ಈ ಪ್ಲಾನ್​ನಲ್ಲಿ ಜಿಯೋ ಬಳಕೆದಾರರು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯಬಹುದು. ಈ ಮಾಸಿಕ ಯೋಜನೆಯಲ್ಲಿ 150GB ಡೇಟಾ ಲಭ್ಯವಿದೆ. ಇದರ ನಂತರ ಬಳಸಿದ ಡೇಟಾಗೆ ಬಳಕೆದಾರರು ಪ್ರತಿ ಜಿಬಿಗೆ ರೂ.10 ಪಾವತಿಸಬೇಕಾಗುತ್ತದೆ. ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಗಳು ಉಚಿತವಾಗಿದ್ದು, ಪ್ರತಿದಿನ 100 SMS ಬಳಸಬಹುದಾಗಿದೆ. ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದ್ದು, ಕುಟುಂಬ ಯೋಜನೆಯಡಿ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ.

ಈ ಯೋಜನೆಗಳಲ್ಲಿ Amazon Prime ವೀಡಿಯೊಗೆ ಒಂದು ವರ್ಷದ ಚಂದಾದಾರಿಕೆ ಉಚಿತವಾಗಿದ್ದು, ಮೊಬೈಲ್​​ಗೆ ಮಾತ್ರ ನೆಟ್‌ಫ್ಲಿಕ್ಸ್ ಯೋಜನೆ ಕೂಡ ದೊರೆಯಲಿದೆ. ನಿಮಗೆ ಜಿಯೋಪ್ರೈಮ್ ಬೇಕಾದರೆ ನೀವು ರೂ.99 ಪಾವತಿಸಬೇಕಾಗುತ್ತದೆ.

ಜಿಯೋ ಪ್ರಿಪೇಯ್ಡ್ ಯೋಜನೆಗಳು ರೂ.1499 ಮತ್ತು ರೂ.4199 ಯೋಜನೆಗಳಲ್ಲಿ ರೂ.1,499 ಮೌಲ್ಯದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ವಾರ್ಷಿಕ ಚಂದಾದಾರಿಕೆಯು ಉಚಿತವಾಗಿ ಲಭ್ಯವಿದ್ದು, 1499 ರೂ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳಂತಹ ಪ್ರಯೋಜನಗಳನ್ನು ಹೊಂದಿದೆ.

ರೂ.4199 ಯೋಜನೆಯಲ್ಲಿ, ನೀವು 365 ದಿನಗಳ ಮಾನ್ಯತೆಯ ಜೊತೆಗೆ ದಿನಕ್ಕೆ 3GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪಡೆಯಬಹುದಾಗಿದೆ.

Leave A Reply

Your email address will not be published.