Jio New Plan : ಜಿಯೋ ಗ್ರಾಹಕರಿಗೆ ಹೊಸ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ ಸಂಸ್ಥೆ | ಸೂಪರ್‌ ಮತ್ತು ಅದ್ಭುತ

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

 

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸದೊಂದು ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು, ಹೆಚ್ಚು ಡೇಟಾ ಬಯಸುವವರಿಗೆ ಪ್ರಸ್ತುತ ಫೀಫಾ ಫುಟ್‌ಬಾಲ್ ವೀಕ್ಷಣೆಗಾಗಿ ಮಾತ್ರ ಡೇಟಾ ಬೇಕಿರುವ ಗ್ರಾಹಕರಿಗಾಗಿ ಹೊಸದಾಗಿ 222 ರೂ.ಬೆಲೆಯ ರೀಚಾರ್ಜ್ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಹೊಸ ರೀಚಾರ್ಜ್ ಯೋಜನೆಯ ಮೂಲಕ ತನ್ನ ಗ್ರಾಹಕರು 50GB ಡೇಟಾ ಪಡೆಯಬಹುದಾಗಿದೆ.

ಜಿಯೋ ಗ್ರಾಹಕರಿಗಾಗಿ ಈಗಾಗಲೇ ಹಲವು ಡೇಟಾ ಆಡ್ಆನ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದ್ದು, ಇವುಗಳಲ್ಲಿ ಜಿಯೋ 181 ರೂ.ಬೆಲೆಯ ಡೇಟಾ ಆಡ್‌ ಆನ್‌ ಯೋಜನೆಯು 30 ದಿನಗಳ ವ್ಯಾಲಿಡಿಟಿಯಲ್ಲಿ 30 GB ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ಪಡೆದಿದೆ. ಇದರ ಜೊತೆಗೆ ಜಿಯೋವಿನ 241 ರೂ. ಯೋಜನೆಯು 30 ದಿನಗಳ ವ್ಯಾಲಿಡಿಟಿಯಲ್ಲಿ 40 GB ಹೈ-ಸ್ಪೀಡ್ ಡೇಟಾ ಪ್ರಯೋಜನ ನೀಡುತ್ತಿತ್ತು. ಆದರೆ, ಹೊಸ 222 ರೂ. ಯೋಜನೆಯ ಮೂಲಕ ಹೆಚ್ಚು ಡೇಟಾವನ್ನು ಪಡೆಯಬಹುದು.

ಜಿಯೋ ಗ್ರಾಹಕರಿಗೆ 222 ರೂ.ಬೆಲೆಯ ಹೊಸ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ.
ಈ ಯೋಜನೆಯನ್ನು ‘ಫುಟ್ಬಾಲ್ ವಿಶ್ವಕಪ್ ಡೇಟಾ ಪ್ಯಾಕ್’ ಎಂದು ಬ್ರಾಂಡ್ ಮಾಡಲಾಗಿದ್ದು, ಈ ಯೋಜನೆಯಲ್ಲಿ ಜಿಯೋ ಗ್ರಾಹಕರು 30 ದಿನಗಳ ವ್ಯಾಲಿಡಿಟಿಯಲ್ಲಿ ಒಟ್ಟು 50GB 4G ಡೇಟಾ ಪಡೆಯ ಬಹುದಾಗಿದೆ. ಇದು ಡೇಟಾ ಆಡ್ಆನ್ ಯೋಜನೆಯಾಗಿರುವುದರಿಂದ, ಜಿಯೋ ಗ್ರಾಹಕರು ತಮ್ಮ ಪ್ರಸ್ತುತ ಯೋಜನೆಯ ಜೊತೆಗೆ 222 ರೂ. ರೀಚಾರ್ಜ್ ಮಾಡಿಸಿ ಹೆಚ್ಚುವರಿಯಾಗಿ 50GB ಡೇಟಾ ಪಡೆಯಬಹುದು.

ಜಿಯೋವಿನ ಹೊಸದಾಗಿ ಪರಿಚಯಿಸಿರುವ 222 ರೂ.ಬೆಲೆಯ ಡೇಟಾ ಆಡ್‌ ಆನ್‌ ರೀಚಾರ್ಜ್ ಯೋಜನೆಯಲ್ಲಿರುವ ಪ್ರಯೋಜನಗಳು ಜಿಯೋ ಈ ಮೊದಲು ಒದಗಿಸುತ್ತಿದ್ದ 301 ರೂ. ಯೋಜನೆಗೆ ಸಮಾನವಾಗಿದೆ. ಇದಲ್ಲದೆ, ಜಿಯೋ ಗ್ರಾಹಕರು ಇದೀಗ 80 ರೂ. ಉಳಿತಾಯದಲ್ಲಿ 50GB ಹೆಚ್ಚುವರಿ ಡೇಟಾವನ್ನು ಪಡೆಯುವ ಆಫರ್ ಕೂಡ ದೊರೆಯಲಿದೆ. ಈ ಯೋಜನೆಗಳಲ್ಲಿ ನಿಗದಿತ ಡೇಟಾ ಬಳಕೆಯ ಬಳಿಕ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಜಿಯೋ ಗ್ರಾಹಕರು ಇದಕ್ಕಿಂತಲೂ ಹೆಚ್ಚು ಡೇಟಾ ಬಳಸಲು ಬಯಸಿದರೆ, ಜಿಯೋವಿನ 301 ರೂ. ಮತ್ತು 555 ರೂ. ಡೇಟಾ ಆಡ್‌ ಆನ್‌ ಯೋಜನೆಗಳು ಸಿಗಲಿವೆ. ಇವುಗಳಲ್ಲಿ 301 ರೂ. ಯೋಜನೆಯು 30 ದಿನಗಳ ವ್ಯಾಲಿಡಿಟಿಯಲ್ಲಿ 50 GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೆ, 555 ರೂ.ಬೆಲೆಯ ಡೇಟಾ ಆಡ್‌ ಆನ್‌ ಯೋಜನೆಯು 55 ದಿನಗಳ ವ್ಯಾಲಿಡಿಟಿಯ 55 GB ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ನೀಡಲಿದೆ.

Leave A Reply

Your email address will not be published.