ಮಂಗಳೂರು : ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ | ದಂಪತಿ ಸಹಿತ ನಾಲ್ವರು ಪೊಲೀಸರ ವಶಕ್ಕೆ

ಮಂಗಳೂರು : ಬಾಡಿಗೆಗೆ ಮನೆ ಪಡೆದುಕೊಂಡು ಅದರಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಉಳ್ಳಾಲ ಪೊಲೀಸರು ಬಯಲು ಮಾಡಿದ್ದಾರೆ.

 

ವೇಶ್ಯಾವಾಟಿಕೆ ನಡೆಯುತ್ತಿದ್ದ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಮನೆ ಮೇಲೆ ದಾಳಿ ನಡೆಸಿರುವ ಉಳ್ಳಾಲ ಪೊಲೀಸರು ದಂಪತಿ ಸಹಿತ ನಾಲ್ವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಬಂಧಿತರನ್ನು ಕೋಟೆಕಾರು ಬೀರಿ ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್ ಹಾಗೂ ಇರ್ಶಾದ್ ಅಡ್ಯನಡ್ಕ ಎಂದು ಗುರಿತಿಸಲಾಗಿದೆ.

ಮೊಹಮ್ಮದ್ ಇಕ್ಬಾಲ್ ಎಂಬಾತ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಈತ ಈ ಹಿಂದೆ ಪಿಲಾರು, ಕಾಪಿಕಾಡು ಪ್ರದೇಶಗಳಲ್ಲೂ ಬಾಡಿಗೆ ಮನೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Leave A Reply

Your email address will not be published.